Mysore
17
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಓದುಗರ ಪತ್ರ: ಕಣ್ಮರೆಯಾದ ಪಾದಚಾರಿ ಮಾರ್ಗಗಳು

ಓದುಗರ ಪತ್ರ

ಮೈಸೂರು ನಗರದ ವಾರ್ಡ್ ನಂ.೫೯ರ ಕುವೆಂಪುನಗರದ ನೃಪತುಂಗ ರಸ್ತೆಯಲ್ಲಿರುವ ಪಾದಚಾರಿ ಮಾರ್ಗಗಳು ಕಣ್ಮರೆಯಾಗುತ್ತಿದ್ದರೂ ಮೈಸೂರು ನಗರ ಪಾಲಿಕೆಯ ಅಧಿಕಾರಿಗಳು ಕಂಡೂ ಕಾಣದಂತೆ ನಿರ್ಲಕ್ಷ್ಯ ವಹಿಸಿದ್ದಾರೆ. ಪಾದಚಾರಿ ಮಾರ್ಗಗಳನ್ನು ಮಳಿಗೆ ನಡೆಸುವವರು ಬಳಕೆ ಮಾಡಿಕೊಳ್ಳುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಸಂಜೆಯ ಸಮಯ ಕುವೆಂಪುನಗರದ ಕಾಂಪ್ಲೆಕ್ಸ್‌ನಿಂದ ವಿವೇಕಾನಂದ ವೃತ್ತವೂ ಸೇರಿದಂತೆ
ಶ್ರೀರಾಂಪುರದ ಭ್ರಮರಾಂಬ ಕಲ್ಯಾಣ ಮಂಟಪದ ಬಸ್ ನಿಲ್ದಾಣದವರೆಗೆ ರಸ್ತೆಯಲ್ಲಿ ಸರಿಯಾಗಿ ವಾಹನ ನಿಲುಗಡೆ ಮಾಡದೆ ಇರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಈ ಅಪಘಾತಗಳನ್ನು ತಡೆಯಲು ಕ್ರಮವಹಿಸಬೇಕು. ನಗರದ ದೇವರಾಜ ಅರಸು ರಸ್ತೆಯ ಒಂದು ಬದಿಯಲ್ಲಿ ಕಾರು ನಿಲುಗಡೆ, ಮತ್ತೊಂದು ಬದಿಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಅನುಕೂಲವಾಗುವಂತೆ ರಸ್ತೆಗೆ ಬಿಳಿ ಬಣ್ಣದ ಗೆರೆಗಳನ್ನು ಹಾಕಿಸಲು ಸಂಚಾರ ಪೊಲೀಸರು ಕ್ರಮಕೈಗೊಳ್ಳಬೇಕು. ಸಂಜೆ ೫ ಗಂಟೆಯಿಂದ ರಾತ್ರಿ ೧೧ರವರೆಗೆ ಈ ರಸ್ತೆಯಲ್ಲಿ ಜಾಹೀರಾತು ಫಲಕಗಳೇ ತುಂಬಿರುತ್ತವೆ. ಅಂಗಡಿಗಳವರು ತಮ್ಮ ತಮ್ಮ ಮಳಿಗೆಗಳ ಜಾಹೀರಾತು -ಲಕಗಳನ್ನು ರಸ್ತೆಯಲ್ಲಿ ಇಟ್ಟುಕೊಳ್ಳುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಮಹಾನಗರ ಪಾಲಿಕೆ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿದ್ದ -ಟ್ ಪಾತ್‌ಗಳು ಇಂದು ಅನುಕೂಲಕ್ಕೆ ಬಾರದೆ ವ್ಯರ್ಥವಾಗುತ್ತಿವೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೇ ಕಾರಣರಾಗಿದ್ದು, ಇನ್ನು ಮುಂದಾದರೂ ಫುಟ್‌ಪಾತ್ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.

– ನಾಗೇಶ್, ಮಾನಸಗಂಗೋತ್ರಿ, ಮೈಸೂರು

Tags:
error: Content is protected !!