Mysore
19
clear sky

Social Media

ಗುರುವಾರ, 19 ಫೆಬ್ರವರಿ 2026
Light
Dark

ಓದುಗರ ಪತ್ರ:  ಮ್ಯಾನ್ ಹೋಲ್ ಸರಿಪಡಿಸಿ

ಓದುಗರ ಪತ್ರ

ಮೈಸೂರು ನಗರದ ೫೦ನೇ ವಾರ್ಡ್ ವ್ಯಾಪ್ತಿಯ ಸುಣ್ಣದಕೇರಿ ೫ನೇ ಕ್ರಾಸ್, ೧೦ನೇ ಕ್ರಾಸ್, ೮ನೇ ಕ್ರಾಸ್ ಹಾಗೂ ಸಿದ್ದಪ್ಪಾಜಿ ದೇವಾಲಯದ ಬಳಿ ಯುಜಿಡಿ ಮ್ಯಾನ್‌ಹೋಲ್‌ನಿಂದ ಕೊಳಕು ನೀರು ಹೊರ ಬರುತ್ತಿದ್ದು ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿ ಗಳು ಹಾಗೂ ಸಾರ್ವಜನಿಕರು ದುರ್ವಾಸನೆ ಯಿಂದ ಮೂಗು ಮುಚ್ಚಿ ಕೊಂಡೇ ಓಡಾಡು ವಂತಾಗಿದೆ. ಸಾರ್ವಜನಿಕರು ಮೈಸೂರು ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಮಸ್ಯೆಯನ್ನು ತಿಳಿಸುವ ಪ್ರಯತ್ನ ಮಾಡಿದರಾದರೂ ಆಯುಕ್ತರು ಕರೆ ಸ್ವೀಕರಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ನೀರು ರಸ್ತೆಯ ಮೇಲೆ ಹರಿಯುತ್ತಿರುವ ಚಿತ್ರಗಳನ್ನು ಕಳುಹಿಸಿದರೂ ಕ್ರಮ ವಹಿಸದೆ ಬೇಜವಾಬ್ದಾರಿ ತೋರುತ್ತಿದ್ದಾರೆ. ಈಗಲಾದರೂ ಸಂಬಂಧ ಪಟ್ಟವರು ಎಚ್ಚೆತ್ತು ಸಮಸ್ಯೆ ನಿವಾರಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಿದೆ.

– ಹೇಮಂತ್‌ಕುಮಾರ್, ಸುಣ್ಣದ ಕೇರಿ, ಮೈಸೂರು

Tags:
error: Content is protected !!