ಕನ್ನಡ ಭಾಷೆ ಹುಟ್ಟಿದ್ದೇ ತಮಿಳು ಭಾಷೆಯಿಂದ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಬಹುಭಾಷಾ ನಟ ಕಮಲ್ ಹಾಸನ್ ಅವರು, ಇದಕ್ಕಾಗಿ ಕನ್ನಡಿಗರ ಕ್ಷಮೆ ಕೇಳುವುದಿಲ್ಲ, ನಾನು ಹೇಳಿದ್ದು ಸರಿ ಇದೆ ಎಂದು ಸಮರ್ಥನೆ ಮಾಡಿಕೊಂಡಿರುವುದು ಅವರ ಉದ್ಧಟತನದ ಪರಮಾವಧಿಯಾಗಿದೆ.
ಅವರು ಮೊದಲು ಕನ್ನಡ ಭಾಷೆಯ ಇತಿಹಾಸವನ್ನು ತಿಳಿಯಬೇಕು, ಕನ್ನಡ ಭಾಷೆಗೆ ಸುಮಾರು ೨೫೦೦ ವರ್ಷಗಳಷ್ಟು ಇತಿಹಾಸವಿದೆ, ಅಲ್ಲದೆ ಪ್ರಾಚೀನ ಭಾಷೆಯಾಗಿದೆ.
ಹಿಂದಿ,ಇಂಗ್ಲಿಷ್ ಆನಂತರದಲ್ಲಿ ಹುಟ್ಟಿದ ಭಾಷೆಗಳು. ಕನ್ನಡ ಭಾಷೆಯ ಬಗ್ಗೆ ಅವರಿಗೆ ಅರಿವಿಲ್ಲದೆ ಇದ್ದರೆ ಕನ್ನಡದ ವಿದ್ವಾಂಸರಿಂದ ಈ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ. ಈಗಾಗಲೇ ರಾಜ್ಯಾದ್ಯಂತ ಕಮಲ್‌ಹಾಸನ್ ಹೇಳಿಕೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಜನಾಭಿಪ್ರಾಯವನ್ನು ಗೌರವಿಸಿ, ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸುವುದು ಅವರಿಗೂ ಗೌರವ. ಇಂತಹ ಅಪ್ರಬುದ್ಧ ಹೇಳಿಕೆಗಳನ್ನು ನೀಡಿ, ಭಾಷೆಯ ಹೆಸರಿನಲ್ಲಿ ಎರಡೂ ರಾಜ್ಯಗಳಲ್ಲಿ ಅಶಾಂತಿ ಸೃಷ್ಟಿಸಿ,ಸಾಮರಸ್ಯ ಹಾಳುಗೆಡಹುವುದು ಅವರಿಗೆ ತರವಲ್ಲ. ಉದ್ಧಟತನವನ್ನು ಬಿಟ್ಟು ದ್ರಾವಿಡ ಭಾಷೆಗಳೆಲ್ಲವೂ ಸೋದರ ಭಾಷೆಗಳೆಂಬುದನ್ನು ಅರಿತು, ಅವರು ಕ್ಷಮೆ ಯಾಚಿಸಬೇಕು.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು





