ಸಿವಿಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಸಿಪಿಸಿ ಕಾಯ್ದೆಗೆ ತಂದಿರುವ ತಿದ್ದುಪಡಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ಅದು ಮೇ ೨೬ರಿಂದಲೇ ಜಾರಿಗೆ ಬಂದಿರುವುದು ಸ್ವಾಗತಾರ್ಹ. ದೇಶದಲ್ಲೇ ಕರ್ನಾಟಕದಲ್ಲೇ ಮೊದಲು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರಕರಣಗಳ ವಿಲೇವಾರಿಗೆ ೨ ವರ್ಷ ಕಾಲಮಿತಿ ನಿಗದಿ ಪಡಿಸಿ ನಿಯಮಗಳನ್ನು ರೂಪಿಸಿರುವುದು ಪ್ರಕರಣಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗಬಹುದು. ದೇಶದ ಎಲ್ಲಾ ರಾಜ್ಯಗಳು ಇದನ್ನು ಅನುಸರಿಸಬೇಕು. ಹಾಗೂ ಕ್ರಿಮಿನಲ್ ಪ್ರಕರಣಗಳಿಗೂ ತಿದ್ದುಪಡಿಯ ಅವಶ್ಯಕತೆ ಇದೆ. ಕಾನೂನು ಸಚಿವಾಲಯ ಈ ಬಗ್ಗೆ ಗಮನಹರಿಸಬೇಕು. ಪ್ರಕರಣಗಳ ವಿಲೇವಾರಿ ತಡವಾಗುವುದನ್ನು ಇಂತಹ ತಿದ್ದುಪಡಿ ಕೊನೆಗಾಣಿಸುತ್ತದೆ.
– ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು





