Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಓದುಗರ ಪತ್ರ: ಫುಟ್‌ಪಾತ್‌ನಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಿ

ಮೈಸೂರಿನ ಪ್ರಮುಖ ರಸ್ತೆಗಳ ಫುಟ್‌ಪಾತ್‌ಗಳನ್ನು ಫಾಸ್ಟ್‌ ಫುಡ್ ನಂತಹ ಬೀದಿಬದಿಯ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದು, ಪಾದಚಾರಿಗಳು ಓಡಾಡಲು ಪರದಾಡುವಂತಾಗಿದೆ. ಶಾರದಾದೇವಿ ನಗರದಲ್ಲಿರುವ ಎಲ್‌ಐಸಿ ಕಚೇರಿಯ ಮುಂಭಾಗದ ರಸ್ತೆ ಹೆಚ್ಚಿನ ಜನಸಂದಣಿಯಿಂದ ಕೂಡಿರುವ ರಸ್ತೆಗಳಲ್ಲಿ ಒಂದಾಗಿದೆ. ಆದರೆ ಇದರ ಮುಂಭಾಗದ ಫುಟ್ ಪಾತ್‌ ಅನ್ನು ಸಂಪೂರ್ಣವಾಗಿ ಬೀದಿಬದಿಯ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದು, ಜನಸಾಮಾನ್ಯರು ಓಡಾಡಲು ತೊಂದರೆಯಾಗುತ್ತಿದೆ. ಇಲ್ಲಿನ ಫಾಸ್ಟ್ ಫುಡ್ ಅಂಗಡಿಯವರು ಹೋಟೆಲ್‌ನ ತ್ಯಾಜ್ಯವನ್ನು ಇಲ್ಲಿಯೇ ಬೀಸಾಡುತ್ತಿದ್ದು, ಈ ಅನೈರ್ಮಲ್ಯದ ವಾತಾವರಣದಿಂದ ಎಲ್‌ಐಸಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಈ ಬಗ್ಗೆ ನಗರಪಾಲಿಕೆಯವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಕ್ರಮವಹಿಸಿ ಫುಟ್ ಪಾತ್ ಮೇಲಿನ ವ್ಯಾಪಾರಿಗಳನ್ನು ತೆರವುಗೊಳಿಸಬೇಕಿದೆ.

-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.

Tags: