ಮೈಸೂರು ಸಂಸ್ಥಾನ ದಕ್ಷಿಣ ಭಾರತದಲ್ಲಿ ೧೩೯೯ ರಿಂದ ೧೯೪೭ ರವರೆಗೆ ಸುದೀರ್ಘ ಆಡಳಿತ ನಡೆಸಿ ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿದೆ. ಮೈಸೂರು ದಸರಾ ಹಾಗೂ ಜಂಬೂಸವಾರಿ ಈ ಸಂಸ್ಥಾನದ ವಿಶೇಷತೆಯಾಗಿದ್ದು, ರಾಜರ ಆಡಳಿತ ಅಂತ್ಯವಾದರೂ ಸರ್ಕಾರದಿಂದಲೇ ದಸರಾ ಮಹೋತ್ಸವ ಹಾಗೂ ಜಂಬೂ ಸವಾರಿ ಇಂದಿಗೂ ನಡೆಯುತ್ತಿದ್ದು, ನಾಡಹಬ್ಬವಾಗಿ ಗಮನ ಸೆಳೆಯುತ್ತಿದೆ.
ಮೈಸೂರು ಸಂಸ್ಥಾನವನ್ನು ಆಳಿದ ಮಹಾರಾಜರುಗಳಾದ ಯದುರಾಯರು, ಹಿರಿಯ ಬೆಟ್ಟದ ಚಾಮರಾಜ ಒಡೆಯರ್, ತಿಮ್ಮರಾಜ ಒಡೆಯರ್ , ಹಿರಿಯ ಚಾಮರಾಜ ಒಡೆಯರ್ , ಇಮ್ಮಡಿ ಹಿರಿಯ ಬೆಟ್ಟದ ಚಾಮರಾಜ ಒಡೆಯರ್ , ತಿಮ್ಮರಾಜ ಒಡೆಯರ್ (ಅಪ್ಪಣ್ಣ),ಬೋಳ ಚಾಮರಾಜ ಒಡೆಯರ್, ಬೆಟ್ಟದ ಚಾಮರಾಜ ಒಡೆಯರ್ ,ರಾಜ ಒಡೆಯರ್, ಚಾಮರಾಜ ಒಡೆಯರ್, ಇಮ್ಮಡಿ ರಾಜ ಒಡೆಯರ್ ,ರಣಧಿರ ಕಂಠೀರವ ನರಸರಾಜ ಒಡೆಯರ್, ದೊಡ್ಡದೇವರಾಜ ಒಡೆಯರ್, ಚಿಕ್ಕ ದೇವರಾಜ ಒಡೆಯರ್, ಕಂಠೀರವ ಮಹಾರಾಜ ಒಡೆಯರ್, ದೊಡ್ಡ ದೇವರಾಜ ಒಡೆಯರ್, ಚಾಮರಾಜ ಒಡೆಯರ್, ಇಮ್ಮಡಿ ಕೃಷ್ಣರಾಜ ಒಡೆಯರ್, ನಂಜರಾಜ ಒಡೆಯರ್, ಬೆಟ್ಟದ ಚಾಮರಾಜ ಒಡೆಯರ್, ಖಾಸ ಚಾಮರಾಜ ಒಡೆಯರ್, ಮುಮ್ಮಡಿ ಕೃಷ್ಣರಾಜ ಒಡೆಯರ್, ಹತ್ತನೇ ಚಾಮರಾಜ ಒಡೆಯರ್ ಇನ್ನೂ ಮುಂತಾದ ರಾಜ ಮಹಾರಾಜರುಗಳ ಹೆಸರುಗಳು ಹಾಗೂ ಅವರ ಕೊಡುಗೆಗಳು ಬಹಳಷ್ಟು ಜನರಿಗೆ ಗೊತ್ತೇ ಇಲ್ಲ.
ಹಾಗಾಗಿ ಜಿಲ್ಲಾ ಆಡಳಿತ ದಸರಾ ಸಂದರ್ಭದಲ್ಲಾದರೂ ಮೈಸೂರಿನ ಪ್ರಮುಖ ಸ್ಥಳಗಳಲ್ಲಿ ಮೈಸೂರು ಸಂಸ್ಥಾನದ ರಾಜರುಗಳ ಸಂಕ್ಷಿಪ್ತ ಕಿರು ಪರಿಚಯದೊಂದಿಗೆ ಅವರ ಭಾವಚಿತ್ರಗಳನ್ನು ಅಳವಡಿಸಲಿ.
– ಪಿ.ಸಿ.ಕಂಗಾಣಿಸೋಮು, ಕ್ಯಾತಮಾರನಹಳ್ಳಿ , ಮೈಸೂರು




