Mysore
25
haze

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಸಾಂಸ್ಕೃತಿಕ ನಗರಿಯಲ್ಲಿ ದೀಪಾವಳಿ ಹಬ್ಬಕ್ಕೆ ಸಿದ್ಧತೆ 

೧೫೦ ಮಳಿಗೆಗಳಲ್ಲಿ ಪಟಾಕಿ ಮಾರಾಟ; ಹಸಿರು ಪಟಾಕಿಗೆ ಆದ್ಯತೆ

ಮೈಸೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮೈಸೂರಿನಲ್ಲಿ ಮನೆ ಮಾಡಿದೆ. ಮನೆ ಮನಗಳಿಗೆ ಬೆಳಕು ಚೆಲ್ಲುವ ಬಗೆಬಗೆಯ ಹಣತೆಗಳು, ಪಟಾಕಿ ಮಾರಾಟ ಜೋರಾಗಿದ್ದು, ಮಕ್ಕಳು, ಪೋಷಕರು, ಯುವಕರು ಹಸಿರು ಪಟಾಕಿ ಖರೀದಿಗೆ ಮುಂದಾಗಿದ್ದಾರೆ.

ಈ ಬಾರಿಯೂ ಹಸಿರು ಪಟಾಕಿ ಮಾರಾಟಕ್ಕಷ್ಟೇ ಅವಕಾಶವಿದ್ದು, ನಗರದ ಜೆ.ಕೆ.ಮೈದಾನದಲ್ಲಿ ೧೯ ಸೇರಿದಂತೆ ನಗರದ ವಿವಿಧೆಡೆಗಳಲ್ಲಿ ೧೫೦ಕ್ಕೂ ಹೆಚ್ಚು ಮಳಿಗೆಗಳಿಗೆ ಅನುಮತಿ ನೀಡಲಾಗಿದೆ. ಇಂದಿನಿಂದ ೨೨ರವರೆಗೆ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಸಿರು ಪಟಾಕಿಗೆ ಆದ್ಯತೆ ನೀಡಲಾಗಿದೆ. ಜೆ.ಕೆ.ಮೈದಾನದ ಪಟಾಕಿ ಮೇಳದಲ್ಲಿರುವ ಎಲ್ಲ ಮಳಿಗೆಗಳ ಮುಂದೆಯೂ ರಿಯಾಯಿತಿ ದರದಲ್ಲಿ ಹಸಿರು ಪಟಾಕಿ ಮಾರಾಟ ಫಲಕ ರಾರಾಜಿಸುತ್ತಿವೆ. ಗ್ರಾಹಕರನ್ನು ಆಕರ್ಷಿಸಲು ಬಗೆಬಗೆಯ ಪಟಾಕಿಗಳನ್ನು ಜೋಡಿಸಲಾಗಿದೆ. ಬೆಲೆಯೂ ತರಹೇವಾರಿಯಾಗಿದೆ. ಬಾಕ್ಸ್ ಒಳಗಿನ ಪಟಾಕಿಗಳ ಮಾದರಿ, ಸಂಖ್ಯೆ ಆಧಾರದಲ್ಲಿ ಬೆಲೆ ನಿಗದಿಗೊಳಿಸಲಾಗಿದೆ.

ಇದನ್ನು ಓದಿ: ವರ್ಷದಿಂದ ವರ್ಷಕ್ಕೆ ಮನೋರೋಗಿಗಳ ಸಂಖ್ಯೆ ಹೆಚ್ಚಳ

೧೦೦ ರೂ.ನಿಂದ ಹಿಡಿದು ೫ ಸಾವಿರ ರೂ.ವರೆಗೂ ಪಟಾಕಿ ಬಾಕ್ಸ್ ಇದ್ದು, ಕಳೆದ ಬಾರಿಗಿಂತ ಈ ಬಾರಿಯೂ ದರದಲ್ಲಿ ಏರುಪೇರು ಕಂಡಿದೆ. ಕೆಲವು ಪಟಾಕಿಗಳ ಬೆಲೆ ಏರಿಕೆಯಾಗಿದೆ. ಈ ಬಾರಿ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿಯದ್ದೇವೆ ಎಂದು ಪಟಾಕಿ ಅಂಗಡಿ ಮಾಲೀಕ ಎಸ್.ಗೌತಮ್ ಭಂಡಾರಿ ತಿಳಿಸಿದರು.

ಇಂದಿನಿಂದ ವ್ಯಾಪಾರ ಆರಂಭವಾಗಿದ್ದು, ಬುಧವಾರದವರೆಗೂ ನಡೆಯಲಿದೆ. ಮೊದಲ ಅಷ್ಟೊಂದು ವ್ಯಾಪಾರವಾಗುವುದಿಲ್ಲ. ಸೋಮವಾರದಿಂದ ಹಬ್ಬ ದೀಪಾವಳಿ ಹಬ್ಬ ಆರಂಭವಾಗಲಿದ್ದು, ಅಂದಿನಿಂದ ವ್ಯಾಪಾರ ಚುರುಕುಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

” ಪಟಾಕಿ ಖರೀದಿಸಲು ಎಚ್.ಡಿ.ಕೋಟೆಯಿಂದ ಬಂದಿದ್ದೇನೆ. ನಮಗೆ ಕೈಗೆಟುಕುವ ದರದಲ್ಲಿ ಪಟಾಕಿ ಖರೀದಿಸುತ್ತೇವೆ. ನನ್ನ ಮಗನಿಗೆ ಪಟಾಕಿ ಮೇಲೆ ಪ್ರೇಮವಿದೆ. ಹೀಗಾಗಿ ಖರೀದಿಗೆ ಬಂದಿದ್ದೇವೆ.”

-ರಮೇಶ್, ಎಚ್.ಡಿ.ಕೋಟೆ

” ಹಲವಾರು ವರ್ಷಗಳಿಂದ ಜೆ.ಕೆ.ಮೈದಾನದಲ್ಲಿ ಪಟಾಕಿ ಮಳಿಗೆ ಇಡಲಾಗುತ್ತಿದೆ. ಐದು ದಿನಗಳ ಅವಕಾಶ ನೀಡಲಾಗಿದ್ದು, ಹೆಚ್ಚಿನ ವ್ಯಾಪಾರದ ನಿರೀಕ್ಷೆಯಲ್ಲಿದ್ದೇವೆ.”

-ಗೌತಮ್ ಎಸ್.ಭಂಡಾರಿ, ವ್ಯಾಪಾರಿ

Tags:
error: Content is protected !!