Mysore
28
few clouds

Social Media

ಭಾನುವಾರ, 08 ಫೆಬ್ರವರಿ 2026
Light
Dark

ಮಡಹಳ್ಳಿ ಬಳಿಯ ಅಕ್ರಮ ಕ್ರಷರ್‌ನಿಂದ ಜನತೆ ಹೈರಾಣ

ಮಹೇಂದ್ರ ಹಸಗೂಲಿ

ನಿಯಮಾವಳಿ ಪಾಲಿಸದ ಕ್ರಷರ್; ದೂಳು-ಶಬ್ದ ಮಾಲಿನ್ಯ ಆರೋಪ

ಗುಂಡ್ಲುಪೇಟೆ: ತಾಲ್ಲೂಕಿನ ಮಡಹಳ್ಳಿ ಗ್ರಾಮದ ಬಳಿ ಇರುವ ಪಾರ್ವತಿ ಕ್ರಷರ್ ಯಾವುದೇ ಅನುಮತಿ ಪಡೆಯದೆ, ನಿಯಮಾವಳಿ ಪಾಲಿಸದೆ, ಯಾವುದೇ ತಡೆಗೋಡೆ ಇಲ್ಲದೆಕ್ರಷರ್ ನಡೆಯುತ್ತಿದ್ದು, ಇದರಿಂದ ಅಕ್ಕಪಕ್ಕದ ಜಮೀನುಗಳಿಗೆ ದೂಳು ಬರುತ್ತಿದ್ದು, ಶಬ್ದಮಾಲಿನ್ಯವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅನುಮತಿ ಪಡೆಯದೆ ದಿನದ ೨೪ ಗಂಟೆ ಜನರೇಟರ್ ಬಳಕೆಯಿಂದ ಕ್ರಷರ್ ನಡೆಸಿ ಕಲ್ಲು ಒಡೆಯುತ್ತಿದ್ದಾರೆ. ಇದರಿಂದ ಸುತ್ತಮುತ್ತಲ ಜಮೀನುಗಳಲ್ಲಿರುವ ಬೆಳೆ ಹಾನಿಯಾಗಿ ಹಾಗೂ ದೂಳು ಮಡಹಳ್ಳಿ ಗ್ರಾಮದವರೆಗೂ ತಲುಪುತ್ತಿದ್ದು ಗಣಿ ಭೂ ವಿಜ್ಞಾನ ಇಲಾಖೆ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಲ್ಲುಪುಡಿ ಕಾರ್ಖಾನೆಯು ಗ್ರಾಮ ಪಂಚಾಯಿತಿಗೆ ಅನ್ಯಕ್ರಾಂತ ಆದೇಶ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಕ್ಷೆ, ಆದೇಶಗಳು ಹಾಗೂ ಇತರೆ ದಾಖಲೆಗಳನ್ನು ಸಲ್ಲಿಸಿ ಲೈಸೆನ್ಸ್ ಪಡೆಯದೇ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾನೂನು ಉಲ್ಲಂಘನೆಯಾಗಿದೆ. ಆದ್ದರಿಂದ ತಕ್ಷಣ ಕಾರ್ಖಾನೆ ಸ್ಥಗಿತಗೊಳಿಸಬೇಕು ಎಂದು ಗ್ರಾಪಂನಿಂದ ನೋಟಿಸ್ ನೀಡಿದ್ದರೂ ಕೆಲಸ ನಡೆಯುತ್ತಿದೆ ಎಂಬುದು ಗ್ರಾಮಸ್ಥರ ಆರೋಪ.

ನಿಯಮಾನುಸಾರ ಅನುಮತಿ ಹಾಗೂ ಕಟ್ಟಡ ಲೈಸೆನ್ಸ್ ಪಡೆದು ನಿರ್ಮಾಣ ಕಾರ್ಯ ಮಾಡಬೇಕು ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮತ್ತೊಮ್ಮೆ ನೋಟಿಸ್ ಕೂಡ ನೀಡಿದ್ದಾರೆ.

” ಅಕ್ರಮವಾಗಿ ಕ್ರಷರ್ ನಡೆಸುತ್ತಿದ್ದು ಯಾವುದೇ ದಾಖಲಾತಿ ಒದಗಿಸಿಲ್ಲ. ಗ್ರಾ.ಪಂ.ನಿಂದ ಅನುಮತಿ, ಇ-ಸ್ವತ್ತು, ಎನ್‌ಒಸಿ ಪಡೆಯದೆ ನಿಯಮ ಉಲ್ಲಂಘಿಸಿ ಕ್ರಷರ್ ನಡೆಸುತ್ತಿದ್ದು ಮೂರು ಬಾರಿ ನೋಟಿಸ್ ನೀಡಲಾಗಿದ್ದು ಮುಂದೆ ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳಲಾಗುವುದು.”

ಪ್ರಸಾದ್, ಮೂಕಹಳ್ಳಿ, ಪಿಡಿಒ, ಗ್ರಾಪಂ

” ಅಕ್ರಮವಾಗಿ ರಾಜಾರೋಷವಾಗಿ ಕ್ರಷರ್ ನಡೆಯುತ್ತಿದ್ದರೂ ಸಂಬಂಽಸಿದ ಇಲಾಖೆ ಮೌನ ವಹಿಸಿದೆ. ಅಲ್ಲದೆ, ಸುತ್ತುಗೋಡೆ ನಿರ್ಮಿಸದ ಕಾರಣ ದೂಳು ಅಕ್ಕಪಕ್ಕದ ಜಮೀನಿಗೆ ಬರುವುದರಿಂದ ಬೆಳೆ ನಾಶವಾಗುತ್ತಿದೆ. ಗ್ರಾಮಕ್ಕೂ ದೂಳು ಆವರಿಸುತ್ತಿದೆ. ಸಂಬಂಧಪಟ್ಟ ಅಽಕಾರಿಗಳು ಕ್ರಮ ವಹಿಸದಿದ್ದರೆ ಕಾನೂನು ಹೋರಾಟ ಮಾಡಲಾಗುವುದು.”

ಜೀವನ್‌ಹೊನ್ನ, ಮಡಹಳ್ಳಿ ಗ್ರಾಮಸ್ಥ 

 

 

Tags:
error: Content is protected !!