Mysore
24
mist

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಚಾಮರಾಜನಗರ: ಆಕ್ಸಿಜನ್‌ ದುರಂತದ ಸಂತ್ರಸ್ತರು ಅತಂತ್ರ

ಚಾಮರಾಜನಗರ : ಕೊರೊನಾ ಸಂದರ್ಭದಲ್ಲಿ ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಕಾಂಗ್ರೆಸ್ ಮುಖಂಡರು ನೀಡಿದ್ದ ಸರ್ಕಾರಿ ನೌಕರಿ ಮತ್ತು ನ್ಯಾಯಯುತ ಪರಿಹಾರದ ಭರವಸೆ ೩ ವರ್ಷಗಳು ಕಳೆದರೂ ಈಡೇರಿಲ್ಲ. ದುರಂತದಲ್ಲಿ ಮೃತಪಟ್ಟ ೩೬ ಜನರ ಕುಟುಂಬಸ್ಥರ ಪೈಕಿ ೮ ಮಂದಿಗೆ ಮಾತ್ರ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ನೌಕರಿ ನೀಡಿದ್ದಾರೆ. ಉಳಿದವರಿಗೆ ಇನ್ನೂ ದೊರೆತಿಲ್ಲ. ೮ ಮಂದಿ ಸಂತ್ರಸ್ತರು ಕಳೆದ ೫ ತಿಂಗಳು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರೂ ೩ ತಿಂಗಳ ಸಂಬಳ ಮಾತ್ರ ಬಂದಿದೆ. ಇನ್ನು ಎರಡು ತಿಂಗಳ ಸಂಬಳ ಬಾಕಿಯಿದೆ. ದುರಂತ ನಡೆದು ೩ ವರ್ಷಗಳಾದರೂ ಮೃತರಾದ ೩೬ ಮಂದಿಯ ಕುಟುಂಬದವರಿಗೆ ರಾಜ್ಯ ಸರ್ಕಾರ ಅವರ ವಿದ್ಯಾರ್ಹತೆಗೆ ತಕ್ಕಂತೆ ನೌಕರಿ ನೀಡಲು ಮೀನಮೇಷ ಎಣಿಸುತ್ತಿದೆ.

ಜಿಲ್ಲಾಡಳಿತವು ಚಾ. ನಗರ, ಕೊಳ್ಳೇಗಾಲ, ಯಳಂದೂರು, ಹನೂರು, ಗುಂಡ್ಲುಪೇಟೆ ತಾಲ್ಲೂಕು ಕಚೇರಿಗಳಲ್ಲಿ, ಜಿಲ್ಲಾಽಕಾರಿ ಕಚೇರಿ, ಯಳಂದೂರಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಗುಂಡ್ಲುಪೇಟೆ ತಾಲ್ಲೂಕಿನ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ೮ ಸಂತ್ರಸ್ತರಿಗೆ ತಾತ್ಕಾಲಿಕ ಉದೋಗ ನೀಡಿತ್ತು. ಈಗ ಅಲ್ಲಿಯೂ ೮ ಸಂತ್ರಸ್ತರನ್ನು ಕೆಲಸಕ್ಕೆ ಬರಬೇಡಿ. ಚಾಮರಾಜನಗರದ ಹೊರವಲಯದ ಯಡಬೆಟ್ಟ ದಲ್ಲಿರುವ ಚಾ. ನಗರ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) ಬೋಧನಾ ಆಸ್ಪತ್ರೆಗೆ ಹೋಗಿ ಎನ್ನುತ್ತಿದ್ದಾರೆ. ಸಿಮ್ಸ್ ಬೋಧನಾ ಆಸ್ಪತ್ರೆಗೆ ತೆರಳಿ ಅಲ್ಲಿನ ಡೀನ್ ಅವರನ್ನು ವಿಚಾರಿಸಿದರೆ ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗವಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ರಾಜ್ಯ ಸರ್ಕಾರದ ಧೋರಣೆಯಿಂದ ಆಕ್ಸಿಜನ್ ದುರಂತದ ಸಂತ್ರಸ್ತರು ಅಕ್ಷರಶಃ ಅತಂತ್ರರಾಗಿದ್ದಾರೆ.

ಇದೊಂದು ವಿಶೇಷ ಪ್ರರಕಣ ಎಂದು ಪರಿಗಣಿಸಿ ಉದ್ಯೋಗ ನೀಡಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಹಾಗಾಗಿ ಸಂತ್ರಸ್ತರು ಉದ್ಯೋಗಕ್ಕಾಗಿ ಅಲೆದಾಡುವಂತಾಗಿದೆ. ಪತಿ, ತಂದೆ, ತಾಯಿ, ಮಕ್ಕಳನ್ನು ಕಳೆದು ಕೊಂಡು ಅತಂತ್ರರಾಗಿರುವ ಇವರು ಉದ್ಯೋಗ ಪಡೆದು ನೆಮ್ಮದಿಯ ಬದುಕು ಕಟ್ಟಿಕೊಳ್ಳುವುದು ಯಾವಾಗ ಎಂಬುದೇ ಪ್ರಶ್ನೆಯಾಗಿದೆ. ಘಟನೆ ಹಿನ್ನೆಲೆ: ೨೦೨೧ರ ಮೇ ೨ರಂದು ರಾತ್ರಿ ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಗಳಿಲ್ಲದೇ ನಾಲ್ಕು ಗಂಟೆಗಳ ಕಾಲ ಆಮ್ಲಜನಕ ಪೂರೈಕೆಯೇ ಸ್ಥಗಿತವಾ ಯಿತು. ಈ ಸಂದರ್ಭದಲ್ಲಿ ಒಟ್ಟು ೩೬ ಮಂದಿ ಮೃತಪಟ್ಟಿದ್ದರು. ಸೂಕ್ತ ಸಮಯದಲ್ಲಿ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡುವಲ್ಲಿ ಜಿಲ್ಲಾಡಳಿತ ತೋರಿದ ನಿರ್ಲಕ್ಷ ವೇ ಈ ಘೋರ ದುರಂತಕ್ಕೆ ಕಾರಣವಾಗಿತ್ತು.

ಘಟನೆ ನಡೆದು ೩ ವರ್ಷಗಳಾದರೂ ಈ ಘಟನೆಗೆ ಕಾರಣರಾದವರ ವಿರುದ್ಧ ಸಣ್ಣ ಕ್ರಮವನ್ನೂ ಜರುಗಿಸಲಿಲ್ಲ. ಭರವಸೆ ನೀಡಿದ್ದ ರಾಹುಲ್ ಗಾಂಽ: ಭಾರತ್ ಜೋಡೊ ಯಾತ್ರೆ ಕೇರಳದಿಂದ ಕರ್ನಾಟಕ ಪ್ರವೇಶಿಸಿ ದಾಗ ಗುಂಡ್ಲುಪೇಟೆ ಬಳಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಸಿಜನ್ ದುರಂತದಲ್ಲಿ ಮಡಿದವರ ಕುಟುಂಬ ದವರ ಜೊತೆ ಸಂವಾದ ನಡೆಸಿದ್ದರು. ನಮ್ಮ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಽಕಾರಕ್ಕೆ ಬಂದರೆ ಸಂತ್ರಸ್ತರ ಕುಟುಂಬಗಳ ಒಬ್ಬೊಬ್ಬರಿಗೆ ಸರ್ಕಾರಿ ಉದ್ಯೋಗ ಮತ್ತು ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಜರಿದ್ದರು. ಕಾಂಗ್ರೆಸ್ ಪಕ್ಷ ರಾಜ್ಯದ ಅಽಕಾರಿ ಹಿಡಿದು ಒಂದು ವರ್ಷ ಪೂರೈಸಿದರೂ ನೀಡಿದ್ದ ಭರವಸೆ ಈಡೇರಿಸಿಲ್ಲ. ಆಕ್ಸಿಜನ್ ದುರಂತ ಪ್ರಕರಣದ ಬಗ್ಗೆ ಮರು ತನಿಖೆ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಪ್ರಕಟಿಸಿ ದ್ದರು. ಇಲ್ಲಿಯ ತನಕ ಯಾವುದೇ ತನಿಖೆ ನಡೆದಿಲ್ಲ.

 

ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ೩೨ ಸಂತ್ರಸ್ತರ ಸಭೆ ಕರೆಯಲಾಗಿತ್ತು. ೧೬ ಮಂದಿ ಮಾತ್ರ ಬಂದಿದ್ದರು. ಹೊರಗುತ್ತಿಗೆ ಆಧಾರದಲ್ಲಿ ನೌಕರಿ ನೀಡಲು ವಿದ್ಯಾರ್ಹತೆಯ ದಾಖಲೆಗಳನ್ನು ಕೇಳಲಾಯಿತು. ಹಲವರು ಇಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿದರು. ನಾಲ್ವರು ಕೆಲಸ ಮಾಡಲು ಒಪ್ಪಿಕೊಂಡು ಮೂವರು ಕೆಲಸಕ್ಕೆ ಬರುತ್ತಿದ್ದಾರೆ. – ಡಾ. ಮಂಜುನಾಥ್, ಸಿಮ್ಸ್, ನಿರ್ದೇಶಕರು

ಸಿಮ್ಸ್ ಆಸ್ಪತ್ರೆಯಲ್ಲಿ ಉದ್ಯೋಗ ನೀಡಲು ಸೂಚಿಸಲಾಗಿತ್ತು. ಹಲ ವರು ಕೆಲಸ ಮಾಡಲು ನಿರಾಕ ರಿಸಿರುವುದು ನನ್ನ ಗಮನಕ್ಕೆ ಬಂದಿದೆ. ಬೇರೆ ಕಡೆ ಉದ್ಯೋಗ ನೀಡುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಮಾತನಾಡಲಾಗಿದೆ. -ಕೆ. ವೆಂಕಟೇಶ್, ಜಿಲ್ಲಾ ಉಸ್ತುವಾರಿ ಸಚಿವರು.

ರಾಜ್ಯ ಸರ್ಕಾರದ ಸೂಚನೆಯಂತೆ ಆಕ್ಸಿಜನ್ ದುರಂತದ ಸಂತ್ರಸ್ತರಿಗೆಲ್ಲ ಉದ್ಯೋಗ ನೀಡಲು ಆಹ್ವಾನಿಸಿದ್ದೆವು. ಕೆಲವರು ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಹಾಗೂ ಇನ್ನು ಕೆಲವರು ಸ್ಥಳೀಯವಾಗಿ ಉದ್ಯೋಗ ನೀಡಬೇಕು ಎಂದು ಮನವಿ ಮಾಡಿದರು. ಅದರಂತೆ ಕ್ರಮ ವಹಿಸಿ ೮ ಜನರಿಗೆ ಆಯಾಯ ತಾಲ್ಲೂಕು ಕಚೇರಿಗಳು, ಸರ್ಕಾರಿ ಇಲಾಖೆಗಳಲ್ಲಿ ಕೆಲಸ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಸಿಮ್ಸ್ ಆಸ್ಪತ್ರೆಯಲ್ಲಿ ಉದ್ಯೋಗ ನೀಡಲು ಉದ್ದೇಶಿಸಲಾಗಿದೆ. ಆದರೆ, ಆ ಉದ್ಯೋಗ ಬೇಡ ಎನ್ನುತ್ತಿದ್ದಾರೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಂತ್ರಸ್ತರಿಗೆ ನೌಕರಿ ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅಲ್ಲಿಂದ ಅನುಮೋದನೆ ಆಗಬೇಕು. ? ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾಧಿಕಾರಿ.

Tags: