ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ ವಹಿಸುತ್ತಿದ್ದಾರೆ ಎಂದು ಆರೋಪಿಸಿ ರೈತರು, ಗ್ರಾಮಸ್ಥರು ಪ್ರತಿಭಟನೆ ನಡೆಸಲು ಮುಂದಾದ ಮಾಹಿತಿ ತಿಳಿದ ಅಽಕಾರಿಗಳು ಸಂಜೆ ವೇಳೆಯಲ್ಲಿ ಕೆರೆಗೆ ನೀರು ಬಿಟ್ಟಿರುವ ಘಟನೆ ನಡೆದಿದೆ.
ಈ ಭಾಗದಲ್ಲಿ ಮಳೆ ಪ್ರಮಾಣ ಬಹಳ ಕಡಿಮೆ ಇರುವುದರಿಂದ ಕೆರೆಕಟ್ಟೆಗಳೆಲ್ಲ ಒಣಗಿವೆ. ಜಾನುವಾರು, ರೈತರು, ಜನಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಆದರೆ, ಈ ಭಾಗದ ಮುಖಂಡರು, ರೈತರು ನೀರಿಗಾಗಿ ಸಂಬಂಧಪಟ್ಟ ಅಽಕಾರಿಗಳ ಬಳಿ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಈ ಭಾಗದ ರೈತ ಮುಖಂಡ ಶಿಂಡೇನಹಳ್ಳಿ ಯತೀಶ್ ಕುಮಾರ್ ನೇತೃತ್ವದಲ್ಲಿ ಡಿ. ೧೪ರಂದು ಭಾನುವಾರ ಶಿಂಡೇನಹಳ್ಳಿ ಗೇಟ್ ಬಳಿ ರೈತರು, ಸಾರ್ವಜನಿಕರು ಅಽಕಾರಿಗಳ ನಡೆ ಖಂಡಿಸಿ ಹಾಗೂ ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಶನಿವಾರ ಸಂಜೆಯೇ ಈ ಭಾಗದ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಅಽಕಾರಿಗಳು ಮುಂದಾಗಿದ್ದಾರೆ. ಯತೀಶ್ ಕುಮಾರ್ ಮಾತನಾಡಿ, ಹಂಪಾಪುರ ಹೋಬಳಿ ವ್ಯಾಪ್ತಿಯಲ್ಲಿ ೧೭ ಕೆರೆಗಳಿದ್ದು, ಅದರಲ್ಲಿ ೧೧ ಕೆರೆಗಳಿಗೆ ಮಾತ್ರ ನೀರು ತುಂಬಿಸಿದ್ದು, ಉಳಿದ ೬ ಕೆರೆಗಳಿಗೆ ನೀರು ತುಂಬಿಸಲು ಮೀನ-ಮೇಷ ಎಣಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:-ಓದುಗರ ಪತ್ರ | ರಸ್ತೆ ದುರಸ್ತಿ ಮಾಡಿ
ಕೆರೆಗಳಲ್ಲಿ ನೀರಿಲ್ಲದೆ ದನ ಕರುಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಬೋರ್ ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಸೆಪ್ಟೆಂಬರ್, ಅಕ್ಟೋ ಬರ್, ನವೆಂಬರ್, ಡಿಸೆಂಬರ್ ಸೇರಿ ಒಟ್ಟು ೪ ತಿಂಗಳ ಕಾಲ ಕೆರೆಗೆ ನೀರಾವರಿ ಇಲಾಖೆ ಅಧೀಕಾರಿಗಳು ಕಬಿನಿ ಏತನೀರಾವರಿ ಮೂಲಕ ಇಬ್ಜಾಲ ದಿಂದ ನೀರು ಬಿಡಬೇಕೆಂಬ ನಿಯಮವಿದೆ. ಆದರೆ, ಡಿಸೆಂಬರ್ ಮುಗಿಯುತ್ತಾ ಬಂದರೂ ಕೆರೆಗೆ ನೀರು ತುಂಬಿಸಿಲ್ಲ ಎಂದರು. ಸರ್ಕಾರ ಕೆರೆಗೆ ನೀರು ತುಂಬಿಸುವ ಯೋಜನೆಯಡಿ ಕೆರೆಗಳ ಬಳಿ ೬೮ ಕೋಟಿ ರೂ. ವೆಚ್ಚದ ಪಂಪ್‌ಹೌಸ್ ನಿರ್ಮಿಸಿದ್ದು, ಅಧಿಕಾರಿಗಳು ಬೇಜವಾ ಬ್ದಾರಿತನ ತೋರಿಸುತ್ತಿದ್ದಾರೆ ಎಂದರು.
ಶಿಂಡೇನಹಳ್ಳಿ ಗ್ರಾಮದ ಬಳಿ ಕೆರೆಗಳಿಗೆ ಸಂಪೂರ್ಣ ನೀರು ತುಂಬಿಸಲು ಆಗ್ರಹಿಸಿ ಭಾನುವಾರ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ಈ ವಿಚಾರ ತಿಳಿದು ಕೆರೆಗೆ ನೀರನ್ನು ಬಿಡುತ್ತಿದ್ದಾರೆ. ನಂತರ ಅಧಿಕಾರಿಗಳು ದೂರವಾಣಿ ಕರೆ ಮಾಡಿ ಕೆರೆಗೆ ನೀರು ಬಿಡಲಾಗುತ್ತಿದ್ದು, ಪ್ರತಿ ಭಟನೆ ಕೈಬಿಡುವಂತೆ ಮನವಿ ಮಾಡಿ ದ್ದಾರೆ. ಆದರೆ ಈ ಅಧಿಕಾರಿಗಳ ಬೇಜವಾ ಬ್ದಾರಿ ಖಂಡಿಸಿ ಮತ್ತು ಸಮರ್ಪಕವಾಗಿ ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ಭಾನುವಾರ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.





