Mysore
24
overcast clouds

Social Media

ಶನಿವಾರ, 17 ಅಕ್ಟೋಬರ್ 2026
Light
Dark

ಎಚ್.ಡಿ.ಕೋಟೆಯಲ್ಲಿ ಕಳೆಗಟ್ಟಿದ ನವರಾತ್ರಿ ಉತ್ಸವ

ಮಂಜು ಕೋಟೆ

ವರದರಾಜಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ವಿವಿಧ ಕಾರ್ಯಕ್ರಮಗಳು; ಪ್ರತಿನಿತ್ಯ ನೂರಾರು ಮಂದಿ ಭಾಗಿ

ಎಚ್.ಡಿ.ಕೋಟೆ: ನವರಾತ್ರಿ ಉತ್ಸವ ಮತ್ತು ಮಿನಿ ದಸರಾದ ಅಂಗವಾಗಿ ಪಟ್ಟಣದ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ದೇವಸ್ಥಾನ ಮತ್ತು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮಗಳು ಸಡಗರದಿಂದ ನಡೆಯುತ್ತಿವೆ.

೯ ದಿನಗಳ ಕಾಲ ನವರಾತ್ರಿ ಪೂಜೆ ಹಾಗೂ ವಿಜಯದಶಮಿಯಂದು ಮಿನಿ ದಸರಾವನ್ನು ಆಚರಿಸುವ ಸಲುವಾಗಿ ಎರಡೂ ದೇವಸ್ಥಾನಗಳ ಸಮಿತಿಯವರು ಪ್ರತಿನಿತ್ಯ ವಿವಿಧ ರೀತಿಯ ದೇವತಾ ಪೂಜೆ ಕಾರ್ಯಕ್ರಮಗಳನ್ನು ಅರ್ಥ ಪೂರ್ಣವಾಗಿ ನಡೆಸುತ್ತಿದ್ದಾರೆ.

ವರದರಾಜಸ್ವಾಮಿ, ಭೂದೇವಿ, ಶ್ರೀದೇವಿ, ಲಕ್ಷ್ಮೀ ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕಾರ್ಯಕ್ರಮಗಳು ನಡೆಯುವ ಜೊತೆಗೆ ದೇವಸ್ಥಾನದಲ್ಲಿ ಬಗೆಬಗೆಯ ವಿಗ್ರಹಗಳು, ಬೊಂಬೆಗಳ ಪ್ರದರ್ಶನವೂ ನಡೆಯುತ್ತಿದೆ. ಪಂಚಲೋಹದ ಉತ್ಸವ ಮೂರ್ತಿಗಳಾದ ವರದರಾಜ ಸ್ವಾಮಿಯ ತೂಗುಯ್ಯಾಲೆ ಉತ್ಸವ ಗಮನ ಸೆಳೆಯುತ್ತಿದೆ.

ಕಳೆದ ಬಾರಿಗಿಂತ ಈ ಬಾರಿ ಇನ್ನಷ್ಟು ಅದ್ಧೂರಿಯಾಗಿ ಉತ್ಸವ ನಡೆಸಲು ದೇವ ಸ್ಥಾನ ಸಮಿತಿಯ ರಂಗ ಅಯ್ಯಂಗಾರ್, ಪ್ರಸಾದ್, ತಿರುಮಲಾಚಾರ್, ಡೇರಿ ಶ್ರೀಕಾಂತ್, ಡಿಶ್ ದೇವರಾಜು, ಪೂರ್ಣೇಶ, ಪೇಂಟ್ ಜಯಂತ್, ಪೊಲೀಸ್ ಕೆಂಡಗಣ್ಣಸ್ವಾಮಿ, ಪ್ರಮೋದ, ಸುಧಾಕರ್, ಶ್ರೀಧರ್, ಇತರರು ಶ್ರಮಿಸುತ್ತಿದ್ದಾರೆ.

ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಚಾಮುಂಡಿ ದೇವಿಗೆ ಪ್ರತಿನಿತ್ಯ ಒಂದೊಂದು ಅಲಂಕಾರದ ಜೊತೆಗೆ ಪೂಜೆ ನಡೆಸಲಾಗುತ್ತಿದೆ. ಹಗಲು ಇರುಳು ಎನ್ನದೆ ಪ್ರತಿನಿತ್ಯ ಸಾವಿರಾರು ಮಹಿಳೆಯರು ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ನವರಾತ್ರಿ ಮತ್ತು ವಿಜಯ ದಶಮಿಯನ್ನು ಮತ್ತಷ್ಟು ಅರ್ಥಪೂರ್ಣವಾಗಿ ನಡೆಸಲು ದೇವಸ್ಥಾನ ಸಮಿತಿಯ ನಟರಾಜ್, ಎಂ.ಸಿ.ದೊಡ್ಡನಾಯಕ, ನಾಗಣ್ಣ, ರಾಮಯ್ಯ, ಸ್ಟುಡಿಯೋ ಪ್ರಕಾಶ್, ಪೇಯಿಂಟ್ ನಾಗೇಗೌಡ, ಬ್ಯಾಂಕ್ ವೀರಪ್ಪ, ಸತೀಶ ಆರಾಧ್ಯ, ರಮೇಶ್ ಕುಲುಮೆ, ವಿನಯ್ ಭಜರಂಗಿ, ಇನ್ನಿತರರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಹಬ್ಬದ ವಾತಾವರಣ: ಪಟ್ಟಣದ ಎರಡೂ ದೇವಸ್ಥಾನಗಳಲ್ಲಿ ನವರಾತ್ರಿ ಮತ್ತು ವಿಜಯದಶಮಿ ಅರ್ಥಪೂರ್ಣವಾಗಿ ನಡೆಯುತ್ತಿದ್ದು, ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ.

 

 

Tags:
error: Content is protected !!