Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ಫಿರಂಗಿ ಗಾಡಿಗಳಿಗೆ ಪೂಜೆ; ಇಂದಿನಿಂದ ಕುಶಾಲು ತೋಪು ಸಿಡಿಸುವ ಒಣ ತಾಲೀಮು

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಅರಮನೆಯ ಆವರಣದಲ್ಲಿ ಸಿದ್ಧತೆಗಳು ಭರದಿಂದ ಸಾಗಿದ್ದು, ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆ ಹಾಗೂ ಅಶ್ವಾರೋಹಿ ದಳಕ್ಕೆ ಭಾರೀ ಶಬ್ದ ಪರಿಚಯ ಮಾಡಿಸುವ ಸಲುವಾಗಿ ಕುಶಾಲುತೋಪು ಸಿಡಿಸುವ ಫಿರಂಗಿ ಗಾಡಿಗಳಿಗೆ ಗುರುವಾರ ಪೂಜೆ ಸಲ್ಲಿಸಲಾಯಿತು. ನಗರದ ಅಂಬಾವಿಲಾಸ ಅರಮನೆ ಆವರಣದ ಆನೆ ಬಾಗಿಲು ಬಳಿ 11 ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಲಾಯಿತು. ಅರ್ಚಕ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ನೆರವೇರಿತು. ನಗರ ಪೊಲೀಸ್ ಆಯುಕ್ತ ರಾದ ಸೀಮಾ ಲಾಟ್ಕರ್ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಸೀಮಾ ಲಾಟ್ಕರ್,

ಶುಕ್ರವಾರದಿಂದ ಕುಶಾಲು ತೋಪು ಸಿಡಿಸುವ ಒಣ ತಾಲೀಮು ಆರಂಭಿಸಲಾಗುತ್ತದೆ. ನಗರ ಸಶಸ್ತ್ರ ಮೀಸಲು ಪಡೆಯ ೩೦ಕ್ಕೂ ಹೆಚ್ಚು ಸಿಬ್ಬಂದಿ ಪೂರ್ವ ತಾಲೀಮಿನಲ್ಲಿ ಭಾಗಿಯಾಗಲಿದ್ದಾರೆ. ಜಂಬೂಸವಾರಿ ಮೆರವಣಿಗೆ ಸಮೀಪಿಸುತ್ತಿದ್ದಂತೆ ಪೂರ್ಣ ಪ್ರಮಾಣದ ತಾಲೀಮು ನಡೆಸಲಿದ್ದಾರೆ ಎಂದು ಹೇಳಿದರು. ವಸ್ತುಪ್ರದರ್ಶನ ಆವರಣದಲ್ಲಿ ಮೂರು ದಿನ ಕುಶಾಲು ತೋಪು ಸಿಡಿಸಿ ಗಜಪಡೆ, ಅಶ್ವಾರೋಹಿ ದಳಗಳಿಗೆ ಭಾರೀ ಶಬ್ದದ ಪರಿಚಯ ಮಾಡಿಕೊಡಲಾಗುತ್ತದೆ. ಅ. 12ರಂದು ಜಂಬೂಸವಾರಿ ವೇಳೆ ಕುಶಾಲು ತೋಪು ಸಿಡಿಸಲಾಗುತ್ತದೆ ಎಂದರು.

ದಸರಾ ಗಜಪಡೆ ಹಾಗೂ ಕುದುರೆಗಳ ಸಮ್ಮುಖದಲ್ಲಿ ಪೂರ್ಣ ಪ್ರಮಾಣದ ತಾಲೀಮು ನಡೆಸಲಾಗುತ್ತದೆ. ಕುಶಾಲು ತೋಪು ಸಿಡಿಸಿದಾಗ ಆನೆ, ಕುದುರೆಗಳು ಬೆದರದಿರಲೆಂದು ತಾಲೀಮು ನಡೆಸಲಾಗುವುದು. -ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತರು.

Tags: