Mysore
19
overcast clouds

Social Media

ಶನಿವಾರ, 10 ಜನವರಿ 2026
Light
Dark

ಜನವರಿ.21ರಿಂದ ಮುಡುಕುತೊರೆ ಜಾತ್ರಾ ಮಹೋತ್ಸವ ಸಂಭ್ರಮ

ಎಂ.ನಾರಾಯಣ

ದೇವಾಲಯದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಈ ಬಾರಿಯೂ ರಥೋತ್ಸವ ಇಲ್ಲ 

ತಿ.ನರಸೀಪುರ: ಕಾವೇರಿ ನದಿ ದಡದಲ್ಲಿರುವ ತಾಲ್ಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀ ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಜಿಲ್ಲೆಯ ದೊಡ್ಡ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಐತಿಹಾಸಿಕ ಮುಡುಕುತೊರೆ ಜಾತ್ರಾ ಮಹೋತ್ಸವವು ಜ.೨೧ರಂದು  ಸಾಂಪ್ರದಾಯಿಕ ಹಾಗೂ ಧಾರ್ಮಿಕ ಪೂಜಾ ಕಾರ್ಯಕ್ರಮ ಅಂಕುರಾರ್ಪಣೆಯೊಂದಿಗೆ ಪ್ರಾರಂಭವಾಗಲಿದೆ.

ದೇಗುಲದ ಕಾಮಗಾರಿ ನಡೆಯುತ್ತಿರುವುದರಿಂದ ಈ ಬಾರಿಯೂ ಜಾತ್ರಾ ಪೂಜೆಗಳನ್ನು ಹೊರತುಪಡಿಸಿ ಉಳಿದಂತೆ ಉತ್ಸವ ಮೆರವಣಿಗೆ, ರಥೋತ್ಸವ ನಡೆಯುವುದಿಲ್ಲ. ಆದರೆ ಪ್ರತಿದಿನ ನಿಗದಿತ ಪೂಜಾ ಕೈಂಕರ್ಯ ಗಳು ಮಾತ್ರ ನಡೆಯಲಿವೆ.ಶ್ರೀ ಭ್ರಮ ರಾಂಬ ಸಮೇತ ಮಲ್ಲಿಕಾರ್ಜುನಸ್ವಾಮಿ ಬ್ರಹ್ಮ ರಥೋತ್ಸವದ ಜಾತ್ರಾ ಮಹೋತ್ಸವದಲ್ಲಿ ದನಗಳ ಜಾತ್ರೆ ನಡೆಯುವುದು ವಾಡಿಕೆಯಾಗಿದ್ದು, ಈಗ ದೇವಾಲಯದ ಜೀರ್ಣೋದ್ಧಾರದ ಅಂಗವಾಗಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ಬ್ರಹ್ಮರಥೋತ್ಸವ, ಮಹೋತ್ಸವಗಳನ್ನು ನಡೆಸಲು ಆಗಮಶಾಸ್ತ್ರದಲ್ಲಿ ಅವಕಾಶಗಳು ಇರುವುದಿಲ್ಲವಾದ್ದರಿಂದ ಕಳೆದ ವರ್ಷದಂತೆಯೇ ಈ ಬಾರಿಯೂ ದನಗಳ ಜಾತ್ರೆ ಮತ್ತು ಭಕ್ತರು ನಡೆಸುವ ಅರವಟ್ಟಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಭಕ್ತರಿಗೆ ದರ್ಶನಕ್ಕೆ ಮತ್ತು ಸೇವೆಗಳಿಗೆ ಈ ಬಾರಿಯೂ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಅಧಿಕಾರಿಗಳ ಸಭೆ ನಡೆಸಿ ಜಾತ್ರೋತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ಹಾಗೂ ದನಗಳ ಪರಿಷೆಗೆ ಅಗತ್ಯವಾದ ಕುಡಿಯುವ ನೀರು, ಬಟ್ಟೆ ಬದಲಿಸುವ ಕೊಠಡಿ, ತಾತ್ಕಾಲಿಕ ಶೌಚಾಲಯ, ದೇಗುಲಗಳಿಗೆ ವಿದ್ಯುತ್ ದೀಪಾಲಂಕಾರ, ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

” ಮುಡುಕುತೊರೆ ಮಲ್ಲಿಕಾರ್ಜುನ ದೇವಾಲಯದ ಜೀರ್ಣೋದ್ಧಾರ ಪ್ರಗತಿಯಲ್ಲಿದ್ದು, ಈ ಬಾರಿಯ ಜಾತ್ರೆಯಲ್ಲೂ ಉತ್ಸವಮೂರ್ತಿ ಮೆರವಣಿಗೆ, ಉತ್ಸವಗಳು ಇರುವುದಿಲ್ಲ. ಜಾತ್ರಾ ಪೂಜಾ ಕೈಂಕರ್ಯ ಎಂದಿನಂತೆ ನೆರವೇರಲಿದ್ದು, ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಮಹೋತ್ಸವದ ಅಂಗವಾಗಿ ವಿವಿಧ ಇಲಾಖೆಗಳಿಗೆ ನೀಡಿರುವ ಮೂಲ ಸೌಲಭ್ಯದ ಕಾರ್ಯಗಳಿಗೆ ಅನುಮೋದನೆ ದೊರಕಿದ್ದು, ಶೀಘ್ರದಲ್ಲೇ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.”

-ವೆಂಕಟೇಶ್ ಪ್ರಸಾದ್, ಸಮೂಹ ದೇವಾಲಯಗಳ ಅಧಿಕಾರಿ

” ದನಗಳ ಜಾತ್ರೆ, ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ. ಕಾಮಗಾರಿ ನಡೆಯುತ್ತಿದ್ದು, ಮುಂದಿನ ವರ್ಷ ಪೂರ್ಣಗೊಂಡು ಜಾತ್ರೆ ರಥೋತ್ಸವ ನಡೆಯುವ ಸಾಧ್ಯತೆಗಳಿವೆ. ಧಾರ್ಮಿಕ ಕಾರ್ಯಗಳು ಎಂದಿನಂತೆ ನಡೆಯಲಿವೆ. ಉತ್ಸವ ಮತ್ತು ರಥೋತ್ಸವ ಇರುವುದಿಲ್ಲ. ಅರವಟ್ಟಿಗೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ತಾಲ್ಲೂಕು ಆಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆವತಿಯಿಂದ ಸಾಂಸ್ಕ ತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.”

-ಆನಂದ್ ದೀಕ್ಷಿತ್, ಆಗಮಿಕರು, ವೈದ್ಯನಾಥೇಶ್ವರ ಮತ್ತು ಸಮೂಹ ದೇವಾಲಯ

Tags:
error: Content is protected !!