ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಖಾಸಗಿ ಪ್ರಯೋಗಾಲಯಗಳ ಮೇಲಿನ ಅವಲಂಬನೆ ತಗ್ಗಿಸಿ, ಸರ್ಕಾರದ ಹಂತದ ಅತ್ಯಾಧುನಿಕ ಪರೀಕ್ಷಾ ಲ್ಯಾಬ್ ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ ನಡೆ. ಇತ್ತೀಚೆಗೆ ಕೇಂದ್ರ ಔಷಧ ಮಾನಕ ನಿಯಂತ್ರಣ ಸಂಸ್ಥೆ ನಡೆಸಿದ ತಪಾಸಣೆಗಳಲ್ಲಿ ಶೇ. ೫ ರಷ್ಟು ಔಷಧ ಮಾದರಿಗಳು ಕಳಪೆ ಗುಣಮಟ್ಟದ್ದೆಂದು ವರದಿಯಾಗಿವೆ.
ಖಾಸಗಿ ಲ್ಯಾಬ್‌ಗಳಲ್ಲಿ ಹಿತಾಸಕ್ತಿ ಸಂಘರ್ಷ ಮತ್ತು ವರದಿ ವಿಳಂಬದ ಸಾಧ್ಯತೆಗಳಿರುತ್ತವೆ. ಸರ್ಕಾರಿ ವಲಯದ ಆಧುನಿಕ ಉಪಕರಣಗಳು ಹಾಗೂ ಮಾನ್ಯತೆ ಹೊಂದಿದ ಸ್ವತಂತ್ರ ಲ್ಯಾಬ್‌ಗಳು ಕಾರ್ಯಾರಂಭ ಮಾಡಿದರೆ ಪರೀಕ್ಷಾ ಪ್ರಕ್ರಿಯೆ ವೇಗಗೊಳ್ಳುವುದಲ್ಲದೆ ವಿಶ್ವಾಸಾರ್ಹತೆಯೂ ಹೆಚ್ಚುತ್ತದೆ. ಪ್ರತಿಯೊಂದು ಜಿ ಹಂತದಲ್ಲಿಯೂ ಮಾದರಿ ಸಂಗ್ರಹಣಾಕೇಂದ್ರಗಳನ್ನು ಬಲಪಡಿಸಿ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆ ತಂದರೆ ನಕಲಿ ಔಷಧಗಳ ಜಲಕ್ಕೆ ಪರಿಣಾಮಕಾರಿ ತಡೆ ನೀಡಬಹುದು. ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಈ ಯೋಜನೆ ಕ್ರಾಂತಿಕಾರಿ ಹೆಜ್ಜೆಯಾಗಲಿದೆ.
-ಡಾ. ಎಚ್.ಕೆ.ವಿಜಯಕುಮಾರ್, ಬೆಂಗಳೂರು





