ರಾಜ್ಯದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದು, ರಾಜ್ಯದ ರಾಜ್ಯಪಾಲರಾಗಿ ಮಹಿಳೆಯೊಬ್ಬರು ಅಽಕಾರ ವಹಿಸಿಕೊಳ್ಳುತ್ತಿರುವುದು ಇದು ಎರಡನೆಯ ಬಾರಿಯಾಗಿದೆ.
ಈ ಹಿಂದೆ ವಿ.ಎಸ್.ರಮಾದೇವಿಯವರು ಡಿಸೆಂಬರ್ ೧೯೯೯ ರಿಂದ ಆಗಸ್ಟ್ ೨೦೦೨ ರವರೆಗೆ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು. ದಸರಾ ಸಂದರ್ಭದಲ್ಲಿ ರಾಜ್ಯದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಅಧಿಕಾರ ವಹಿಸಿಕೊಳ್ಳುತ್ತಿರುವುದು ಶುಭ ಸಂಕೇತವಾಗಿದೆ ಎನ್ನಬಹುದು. ಹಾಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ತಮ್ಮ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದರ ಹಿನ್ನೆಲೆಯಲ್ಲಿ ಹೊಸ ನೇಮಕವಾಗಿದೆ.
ನೂತನ ರಾಜ್ಯಪಾಲರು, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದು, ರಾಜ್ಯ ಸರ್ಕಾರದ ಜೊತೆ ಉತ್ತಮ ಸಮನ್ವಯ ಸಾಽಸಿ, ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ ಎಂದು ಆಶಿಸೋಣ.
-ಕೆ.ವಿ.ವಾಸು, ಮೈಸೂರು


