ಕನ್ನಡ ರಾಜ್ಯೋತ್ಸವ ಬಂದರೆ ಸಾಕು ಕನ್ನಡದ ಮೇಲೆ ಅಭಿಮಾನ ಉಕ್ಕಿ ಹರಿಯುತ್ತದೆ. ಅಂಗಡಿ, ಹೋಟೆಲ್‌ಗಳು ಕನ್ನಡಮಯವಾಗಿರುತ್ತವೆ. ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಅಭಿಮಾನವನ್ನು ತೋರುವ ಈ ಅಭಿಮಾನಿಗಳಿಗೆ ಉಳಿದ ದಿನಗಳಲ್ಲಿ ಇವರ ಕನ್ನಡ ಅಭಿಮಾನ ಎಲ್ಲಿ ಹೋಗಿರುತ್ತದೆ ಎಂದು ಪ್ರಶ್ನಿಸಿದರೆ ಉತ್ತರ ಸಿಗುವುದಿಲ್ಲ.
ನವೆಂಬರ್‌ನಲ್ಲಿ ಕನ್ನಡ ಧ್ವಜ ಸ್ತಂಭಗಳಲ್ಲಿ ಧ್ವಜಾರೋಹಣ ಮಾಡಿದರೆ ಅದು ಸೂಕ್ತ ನಿರ್ವಹಣೆಯಿಲ್ಲದೇ ಹರಿದುಹೋಗಿದ್ದರೂ ಹಾಗೆಯೇ ಇರುತ್ತದೆ. ಧ್ವಜಸ್ತಂಭಗಳಿಗೆ ಬಣ್ಣ ಬಳಿದು ಮತ್ತೆ ಹೊಸ ಧ್ವಜಾರೋಹಣವಾಗುವುದು ನವೆಂಬರ್ ಬಂದಾಗಲೇ ಎನ್ನುವುದು ವಿಪರ್ಯಾಸದ ಸಂಗತಿಯಾಗಿದೆ. ಕನ್ನಡ ಧ್ವಜಾರೋಹಣ ಮಾಡಿದ ಮೇಲೆ ಸೂಕ್ತ ನಿರ್ವಹಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ.
ಇದನ್ನೂ ಓದಿ:-ದಾರಿ ತಪ್ಪಿದ ಮಕ್ಕಳನ್ನು ಮನೆ ತಲುಪಿಸುವ ಐಎಎಸ್ ಅಧಿಕಾರಿ
ಪ್ರತಿಯೊಬ್ಬರೂ ವರ್ಷಪೂರ್ತಿ ಕನ್ನಡದ ಮೇಲೆ ಅಭಿಮಾನ ತೋರಿಸಬೇಕು. ನವೆಂಬರ್ ತಿಂಗಳಿನಲ್ಲಿ ಮಾತ್ರ ಗುಂಪು ಕಟ್ಟಿಕೊಂಡು ಇಂಗ್ಲಿಷ್ ಫಲಕಗಳಿರುವ ಅಂಗಡಿಗಳ ಮೇಲೆ ದಾಳಿ ಮಾಡುವುದಲ್ಲ. ಹೊರ ರಾಜ್ಯದಿಂದ ಬಂದವರಿಗೆ ಮೊದಲು ಕನ್ನಡ ಓದಲು, ಬರೆಯಲು ಕಲಿಸಬೇಕು. ರಾಜ್ಯೋತ್ಸವ ಒಂದು ತಿಂಗಳಿಗೆ ಸೀಮಿತವಾಗದೇ ನಿತ್ಯೋತ್ಸವವಾಗಬೇಕು.
-ಎಂ. ಎಸ್. ಉಷಾ ಪ್ರಕಾಶ್, ಎಸ್.ಬಿ.ಎಂ.ಕಾಲೋನಿ, ಮೈಸೂರು





