ಕೆ. ಬಿ. ರಮೇಶನಾಯಕ
ಮೈಸೂರು: ನಾಲ್ಕೈದು ವರ್ಷಗಳಿಂದ ಕಾಡಂಚಿನ ಗ್ರಾಮಗಳತ್ತ ಹಾಗೂ ನಗರ ಪ್ರದೇಶಗಳತ್ತ ಮುಖ ಮಾಡಿ ದಾಳಿ ಮಾಡುತ್ತಿರುವ ಚಿರತೆಗಳಿಂ ದಾಗಿ ಎದುರಾಗುತ್ತಿರುವ ಅನಾಹುತ, ಬಿಕ್ಕಟ್ಟನ್ನು ತಡೆಯಲು ಹಾಗೂ ಗಾಯಗೊಂಡ ಚಿರತೆಗಳಿಗೆ ಚಿಕಿತ್ಸೆ ನೀಡಿ ಆರೈಕೆ ಮಾಡಲು ಇಲವಾಲದಲ್ಲಿ ಚಿರತೆ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರವನ್ನು ನಿರ್ಮಾಣ ಮಾಡಲು ಡಿಪಿಆರ್ ತಯಾರಾಗಿದ್ದು, ಶೀಘ್ರದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆ ಇದೆ.
ಮೈಸೂರು-ಹುಣಸೂರು ರಸ್ತೆಯಲ್ಲಿರುವ ಇಲವಾಲದ ಅರಣ್ಯ ಪ್ರದೇಶದಲ್ಲಿ ಗುಜರಾತ್ ಮಾದರಿಯಲ್ಲಿ ಅತ್ಯಾ ಧುನಿಕ ಶೈಲಿಯಲ್ಲಿ ಪುನರ್ವಸತಿ ಕೇಂದ್ರ ನಿರ್ಮಾಣ ಮಾಡಲು ವಿಸ್ತೃತ ಯೋಜನಾ ವರದಿ ತಯಾರಾಗಿದ್ದು, ಸರ್ಕಾರದ ಒಪ್ಪಿಗೆಗೆ ಕಾಯಲಾಗುತ್ತಿದೆ. ಈ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತರೆ ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ಚಿರತೆ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಆರಂಭಿಸಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ.
೪ ವರ್ಷಗಳಿಂದ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ತಿ.ನರಸೀಪುರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಚಿರತೆ ದಾಳಿಗೆ ಸಿಲುಕಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ವಿಚಾರ ರಾಜ್ಯಾದ್ಯಂತ ಸದ್ದು ಮಾಡಿತ್ತು. ಮಾನವ ಪ್ರಾಬಲ್ಯದ ಭೂ ಪ್ರದೇಶದಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುವುದು, ಸುಗ್ಗಿಯ ಕಾಲದಲ್ಲಿ ಗ್ರಾಮಗಳತ್ತ ಬರುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ.
ಗ್ರಾಮಸ್ಥರು ನೀಡುವ ಮಾಹಿತಿ ಆಧರಿಸಿ ಬೋನನ್ನು ಇಟ್ಟು ಸೆರೆಯಾದ ಚಿರತೆಗಳನ್ನು ಮೃಗಾಲಯಗಳಿಗೆ ತರಲಾಗುತ್ತದೆ ಅಥವಾ ಕಾಡಿಗೆ ಮರಳಿ ಬಿಡಲಾಗುತ್ತದೆ. ಆದರೆ, ಕೆಲವೊಮ್ಮೆ ಚಿರತೆಗಳು ಬೇರೆ ಬೇರೆ ಕಾರಣಗಳಿಂದಾಗಿ ಗಾಯಗೊಂಡಾಗ ಬನ್ನೇರು ಘಟ್ಟ ಅಥವಾ ಕೂರ್ಗಳ್ಳಿ ಚಾಮುಂಡೇಶ್ವರಿ ಸಂರಕ್ಷಣಾ ಮತ್ತು ಪುನರ್ವಸತಿ ಕೇಂದ್ರದಲ್ಲಿ ಇರಿಸಿ ಆರೈಕೆ ಮಾಡ ಲಾಗುತ್ತಿತ್ತು. ಕೆಲವೊಮ್ಮೆ ತುರ್ತು ಇರು ವಂತಹ ಚಿರತೆಗಳನ್ನು ಬನ್ನೇರುಘಟ್ಟಕ್ಕೆ ಸಾಗಿಸಲು ೧೫೦ ಕಿಮೀ ದೂರ ಕೊಂಡೊಯ್ಯ ಬೇಕಾಗಿದೆ. ಹೀಗಾಗಿ, ಮೈಸೂರು ವಲಯದಲ್ಲಿ ಪುನರ್ವಸತಿ ಕೇಂದ್ರ ವನ್ನು ನಿರ್ಮಾಣ ಮಾಡಲು ಡಿಪಿಆರ್‌ನ್ನು ತಯಾರಿಸಿ ಅರಣ್ಯ ಇಲಾಖೆ ಸಚಿವರಿಗೆ ಸಲ್ಲಿಸಲಾಗಿದೆ.
೭೦ ಕೋಟಿ ರೂ. ವೆಚ್ಚದ ಡಿಪಿಆರ್: ಮೈಸೂರು, ಮಂಡ್ಯ, ಹಾಸನ ಜಿಲ್ಲೆ ಗಳಿಗೆ ಹತ್ತಿರವಾಗುವ ಇಲವಾಲದಲ್ಲಿ ಚಿರತೆ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ನಿರ್ಮಿಸಲು ೭೦ ಕೋಟಿ ರೂ. ವೆಚ್ಚದ ಡಿಪಿಆರ್ ತಯಾರಾಗಿದೆ. ಇಲವಾಲದ ಬಳಿ ಇರುವ ಅರಣ್ಯದಲ್ಲಿ ೯೨ ಎಕರೆ ಜಾಗವನ್ನು ಗುರುತಿಸ ಲಾಗಿದ್ದು, ಚಿರತೆಗಳನ್ನು ಇಲ್ಲಿಗೆ ತಂದು ಆರೈಕೆ ಮಾಡಲು ಬೇಕಾದ ಎಲ್ಲ ರೀತಿಯ ಮೂಲಸೌಲಭ್ಯವನ್ನು ಹೊಂದಿರುತ್ತದೆ.
ಮೈಸೂರಿನ ಇಲವಾಲದಲ್ಲಿ ಚಿರತೆ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾ ಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸಚಿವ ಸಂಪುಟದಲ್ಲಿ ಅನುಮೋದನೆ ಕೊಡಿಸಲು ಮನವಿ ಮಾಡಲಾಗಿದೆ. ಈಗಾಗಲೇ ಅರಣ್ಯ ಸಚಿವರು ಯೋಜನೆ ಜಾರಿಗೆ ಒಪ್ಪಿಗೆ ನೀಡಿದ್ದಾರೆ. ಅನುದಾನ ಮಂಜೂರಾದರೆ ಚಿರತೆಗಾಗಿ ಪ್ರತ್ಯೇಕ ಕೇಂದ್ರ ಆರಂಭವಾಗಲಿದೆ. -ಡಾ. ಐ. ಬಿ. ಪ್ರಭುಗೌಡ, ಡಿಸಿಎ-, ಮೈಸೂರು ವನ್ಯಜೀವಿ ವಿಭಾಗ
ಏನೇನು ಸೌಲಭ್ಯಗಳು ಇರಲಿವೆ?
ಕೇಂದ್ರದ ಸುತ್ತಲೂ ತಂತಿಬೇಲಿ-ಕಣ್ಗಾವಲು ಹಾದಿ
ಸಂರಕ್ಷಣಾ ವಾಹನ ಮತ್ತು ಆಂಬ್ಯುಲೆನ್ಸ್
ಪ್ರಾಥಮಿಕ ಹಂತದ -ರೆನ್ಸಿಕ್ ಸೌಲಭ್ಯ
ಪ್ರಾಥಮಿಕ ಹಂತದ ಡಯಾಗ್ನೋಸಿಸ್ ವ್ಯವಸ್ಥೆ
ತೀವ್ರ ನಿಗಾ ನಿಯಂತ್ರಣ ಕೊಠಡಿ
ಟ್ರೀಟ್‌ಮೆಂಟ್ ಅಂಡ್ ಟ್ರಾನ್ಸಿಟ್ ಸೆಂಟರ್
ಕ್ವಾರಂಟೈನ್ ಸೆಂಟರ್
ಮುಕ್ತ ಗಂಡು-ಹೆಣ್ಣು ವಿಹಾರದ ಕೊಠಡಿ
ಮರಣೋತ್ತರ ಪರೀಕ್ಷಾ ಕೊಠಡಿ