ಪುನೀತ್ ಮಡಿಕೇರಿ
ಇಲಾಖೆಯಲ್ಲಿ ಸಿಬ್ಬಂದಿ ನೇಮಕಕ್ಕೆ ಪ್ರವಾಸೋದ್ಯಮಿಗಳ ಆಗ್ರಹ
ಮಡಿಕೇರಿ: ಕೊಡಗಿನಲ್ಲಿ ಪ್ರವಾಸೋದ್ಯಮ ಇಲಾಖೆಯನ್ನು ಮುನ್ನಡೆಸಲು ನಾವಿಕನೇ ಇಲ್ಲದಾಗಿದ್ದು, ಕಳೆದ ಒಂದು ವರ್ಷದಿಂದ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಹುದ್ದೆ ಖಾಲಿ ಉಳಿದಿದೆ.
ಇಲಾಖೆಯಲ್ಲಿ ಖಾಯಂ ಸಿಬ್ಬಂದಿ ಕೂಡ ಇಲ್ಲದಿರುವುದರಿಂದ ರಚನಾತ್ಮಕ ಕೆಲಸಗಳೂ ನಡೆಯುತ್ತಿಲ್ಲ. ಪ್ರಮುಖವಾಗಿ ಹೋಂ ಸ್ಟೇ ನೋಂದಣಿಗೆ ಸಂಬಂಧಿಸಿದ ಪ್ರಕ್ರಿಯೆ ಮೇಲೂ ಇದರಿಂದ ಪರಿಣಾಮ ಉಂಟಾಗಿದೆ. ೨೦೧೮ರ ನಂತರ ಸತತ ಮೂರು ವರ್ಷಗಳ ಕಾಳಜಿಯನ್ನು ಕಾಡಿದ್ದ ಪ್ರಾಕೃತಿಕ ವಿಕೋಪ, ಅತಿವೃಷ್ಟಿ ಹಾಗೂ ನಂತರ ಜಗತ್ತಿಗೆ ಕಂಟಕವಾಗಿದ್ದ ಕೊರೊನ ಸೋಂಕು ಕೊಡಗಿನ ಪ್ರವಾಸೋದ್ಯಮವನ್ನು ಸ್ವಲ್ಪ ಹಿಂದಕ್ಕೆ ತೆಗೆದುಕೊಂಡು ಹೋಗಿತ್ತು. ಆದರೆ, ನಂತರದ ದಿನಗಳಲ್ಲಿ ನಿಧಾನಕ್ಕೆ ಚೇತರಿಸಿಕೊಂಡ ಜಿ, ಮತ್ತೆ ಸಹಜ ಸ್ಥಿತಿಗೆ ಬಂದಿದೆ. ಕಳೆದ ೪ ವರ್ಷ ಗಳಿಂದ ಈಚೆಗೆ ಪ್ರವಾಸಿಗರ ಸಂಖ್ಯೆ ಮೊದಲಿನಂತೆ ಹೆಚ್ಚಳವಾಗಿದೆ. ಪ್ರವಾಸಿ ಚಟುವಟಿಕೆಗಳೂ ಬಿರುಸು ಗೊಂಡಿದ್ದು, ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೆಲಸವೂ ನಡೆದಿದೆ.
ನೀತಿ ನಿಯಮಗಳ ಚೌಕಟ್ಟಿನೊಳಗೆ ವ್ಯವಸ್ಥೆ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಇರುವ ಜಿಯ ಪ್ರವಾಸೋದ್ಯಮ ಇಲಾಖೆಯಲ್ಲಿ ಪ್ರಮುಖ ಹುದ್ದೆಯೇ ಒಂದು ವರ್ಷದಿಂದ ಖಾಲಿ ಉಳಿದಿದೆ. ಉಪ ವಿಭಾಗಾಧಿಕಾರಿಗೆ ಹೆಚ್ಚುವರಿಯಾಗಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಹುzಯ ಜವಾಬ್ದಾರಿ ವಹಿಸಿದ್ದರೂ ಅವರ ಮೂಲ ಇಲಾಖೆ ಕಾರ್ಯಭಾರದ ಒತ್ತಡ ಇರುವುದರಿಂದ ಪ್ರವಾಸೋದ್ಯಮ ಇಲಾಖೆ ಸೊರಗಿದೆ.
ಕೊಡಗು ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಯಂ ಸಿಬ್ಬಂದಿ ಕೂಡ ಇಲ್ಲ. ಮಂಜೂರಾದ ೫ ಹುzಗಳಿದ್ದರೂ ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಉಳಿದ ೪ ಹುದ್ದೆಗಳು ಖಾಲಿ ಇವೆ. ಪ್ರವಾಸೋದ್ಯಮವನ್ನೇ ನಂಬಿರುವ ಕೊಡಗಿನಂಥ ಜಿಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಈ ದುಸ್ಥಿತಿಯಿಂದಾಗಿಯೇ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ ಎನ್ನುತ್ತಾರೆ ಪ್ರವಾಸೋದ್ಯಮಿಗಳು.
ಕೊಡಗು ಪ್ರವಾಸೋದ್ಯಮ ಇಲಾಖೆಗೆ ಉಪನಿರ್ದೇಶಕರಾಗಿ ೨೦೨೩ರ ನವೆಂಬರ್‌ನಲ್ಲಿ ವರ್ಗಾಗೊಂಡು ಬಂದಿದ್ದ ಅನಿತಾ ಭಾಸ್ಕರ್ ಸುಮಾರು ಒಂದೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿ ಇಲಾಖೆಗೆ ಜೀವ ತುಂಬುವ ಕೆಲಸ ಮಾಡಿದರು. ಇವರ ಕೆಲಸವನ್ನು ಸ್ಥಳೀಯ ಪ್ರವಾಸೋದ್ಯಮಿಗಳು ಈಗಲೂ ಸ್ಮರಿಸಿಕೊಳ್ಳುತ್ತಾರೆ. ಅನಧಿಕೃತ ಹೋಂ ಸ್ಟೇಗಳ ಕಾರ್ಯಾ ಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಇವರು, ತಮ್ಮ ಕಾರ್ಯ ಅವಧಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೋಂ ಸ್ಟೇಗಳ ನೋಂದಣಿಗೆ ಕಾರಣಕರ್ತರಾಗಿದ್ದರು.
ಅನಿತಾ ಭಾಸ್ಕರ್ ವರ್ಗಾವಣೆಗೊಂಡ ನಂತರ ಕೊಡಗು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಹುದ್ದೆ ಖಾಲಿ ಇದೆ. ಇವರ ಅವಧಿಯಲ್ಲಿ ಆರಂಭವಾದ ಯೋಜನೆಗಳೂ ನನೆಗುದಿಗೆ ಬಿದ್ದಿವೆ. ಹೋಂ ಸ್ಟೇ ನೋಂದಣಿ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತಿದೆ. ಜಿಯಾದ್ಯಂತ ಗುರುತಿಸಲಾಗಿದ್ದ ಹೊಸ ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಮತ್ತು ಇವುಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಕೆಲಸ ಕೂಡ ಆಗುತ್ತಿಲ್ಲ. ಪ್ರಮುಖವಾಗಿ ರಾಜ್ಯ ಸರ್ಕಾರ ಕರ್ನಾಟಕ ಪ್ರವಾಸೋದ್ಯಮ ನೀತಿ ೨೦೨೪-೨೯ ಜಾರಿಗೆ ಬಂದಿದ್ದು ಇದರ ಪರಿಣಾಮಕಾರಿ ಅನುಷ್ಠಾನಕ್ಕೂ ತೊಂದರೆ ಆಗಿದೆ.
” ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರಾಗಿದ್ದ ಅನಿತಾ ಭಾಸ್ಕರ್ ಅವರ ವರ್ಗಾವಣೆ ನಂತರ ಉಪವಿಭಾಗಾಧಿಕಾರಿ ಆ ಹುದ್ದೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಉಪನಿರ್ದೇಶಕರ ಹುದ್ದೆಯ ಅಗತ್ಯತೆ ನನ್ನ ಗಮನಕ್ಕೂ ಬಂದಿದೆ. ಈಗ ಸಾಮಾನ್ಯ ವರ್ಗಾವಣೆ ಆರಂಭವಾಗಿದ್ದು, ಈ ವಿಷಯದಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು.”
-ಡಾ.ಮಂಥರ್ ಗೌಡ, ಮಡಿಕೇರಿ ಶಾಸಕ
” ಪ್ರವಾಸೋದ್ಯಮಕ್ಕೆ ಕೊಡಗು ಜಿಲ್ಲೆಯ ಕಾಣಿಕೆ ದೊಡ್ಡದಿದೆ. ಪ್ರವಾಸೋದ್ಯಮ ಇಲ್ಲಿನ ಪ್ರಮುಖ ಆದಾಯ ಮೂಲವೂ ಹೌದು. ಆದರೆ, ಇಲ್ಲಿನ ಪ್ರವಾಸೋದ್ಯಮ ಇಲಾಖೆಯನ್ನು ಮುನ್ನಡೆಸುವವರೇ ಇಲ್ಲ. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಹುದ್ದೆ ಖಾಲಿ ಇರುವುದರಿಂದ ಯಾವುದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಉಪ ವಿಭಾಗಾಧಿಕಾರಿಗೆ ಪ್ರವಾಸೋದ್ಯಮ ಇಲಾಖೆ ಉಸ್ತುವಾರಿ ವಹಿಸಲಾಗಿದೆ. ಆದರೆ ಅವರ ಮೂಲ ಹುದ್ದೆಯ ಕಾರ್ಯಭಾರವೇ ಸಾಕಷ್ಟಿರುವಾಗ ಪ್ರವಾಸೋದ್ಯಮ ಇಲಾಖೆ ಕಡೆಗೆ ಗಮನ ಹರಿಸಲು ಸಾಧ್ಯ ಆಗುತ್ತಿಲ್ಲ.
-ಮೋಂತಿ ಗಣೇಶ್, ಅಧ್ಯಕ್ಷರು, ಕೊಡಗು ಜಿ ಹೋಮ ಸ್ಟೇ ಅಸೋಸಿಯೇಷನ್





