Mysore
25
haze

Social Media

ಗುರುವಾರ, 01 ಜನವರಿ 2026
Light
Dark

ಕಿಕ್ಕೇರಿ:ಕೆಸರು ಗದ್ದೆಯಂತಾದ ಅಮಾನಿ ಕೆರೆ ಏರಿ

ಕಿಕ್ಕೇರಿ: ಪಟ್ಟಣದಿಂದ ಸೊಳ್ಳೇಪುರ, ಕಳ್ಳನಕೆರೆ, ಕುಂದೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಿಕ್ಕೇರಿ ಗ್ರಾಮದ ಅಮಾನಿಕೆರೆ ಏರಿ ಅಕ್ಷರಶಃ ಕೆಸರು ಗದ್ದೆಯಾಗಿ ಮಾರ್ಪಟ್ಟಿದ್ದು, ಜನ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಏರಿ ರಸ್ತೆಯ ಮೂಲಕ ದಿನ ನಿತ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಾಲಾ ವಾಹನಗಳು, ಹಾಲಿನ ವಾಹನ, ಬೈಕ್ ಸಾವಾರರು ಸಂಚರಿಸುತ್ತಾರೆ. ಅಮಾನಿ ಕೆರೆ ಏರಿಯ ತುಂಬಾ ಹೊಂಡಗಳು ಬಿದ್ದಿವೆ. ಜೊತೆಗೆ ಏರಿಯ ಬದಿಯಲ್ಲಿ ಬೆಳೆದು ನಿಂತಿರುವ ಜಂಗಲ್ನಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.

ಒಂದೆರಡು ತಿಂಗಳ ಹಿಂದೆ ಹೇಮಾವತಿ ಇಲಾಖೆಯಿಂದ ಜಂಗಲ್ ಕ್ಲೀನ್ ಮಾಡುವುದಾಗಿ ಕಿಕ್ಕೇರಿ ಕೆರೆ ಕೋಡಿ ಸಮೀಪ ಮಾತ್ರ ನೆಪ ಮಾತ್ರಕ್ಕೆ ೨೦ ಮೀಟರ್ ನಷ್ಟು
ಜಂಗಲ್ ಕ್ಲೀನ್ ಮಾಡಿ, ಸಂಪೂರ್ಣವಾಗಿ ಜಂಗಲ್ ಕ್ಲೀನ್ ಮಾಡಿದ್ದೇವೆ ಎಂದು ಹೇಮಾವತಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿ ಬಿಲ್ ಪಡೆದುಕೊಂಡಿದ್ದಾರೆ ಎಂದು ಸೊಳ್ಳೇಪುರ ಗ್ರಾಮಸ್ಥರು ಆರೋಪಿಸಿದ್ದಾರೆ.

ಒಂದು ಮಳೆಯಾದರೂ ಸಾಕು ಕೆರೆ ಏರಿ ಕೆಸರಿನ ಗದ್ದೆಯಾಗಿ ಮಾರ್ಪಡುತ್ತದೆ. ೧.೫ ಕಿಲೋಮೀಟರ್ ಇರುವ ಕೆರೆ ಏರಿಯ ಎರಡೂ ಬದಿ ತಡೆಗೋಡೆ ನಿರ್ಮಾಣವಾಗಿಲ್ಲ.
ಕೆಸರಿನೀಂದ ಕೂಡಿದ ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ವಾಹನ ಚಾಲನೆ ಮಾಡಬೇಕಾದ ಸ್ಥಿತಿ ವಾಹನ ಸವಾರರಿಗೆ ಎದುರಾಗಿದೆ. ಒಂದು ವೇಳೆ ಆಯ ತಪ್ಪಿ ಬಿದ್ದರೆ ಪ್ರಾಣಕ್ಕೆ ಕುತ್ತು ನಿಶ್ಚಿತ. ಮಳೆ ಬಂದ ಸಂದರ್ಭದಲ್ಲಿ ಕೆರೆ ಏರಿಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ಸಾಕಷ್ಟು ನಡೆದಿವೆ. ಈ ಏರಿ ಮೇಲೆಶಾಲಾ ವಾಹನಗಳು ಸಂಚರಿಸುತ್ತವೆ. ಹಾಗಾಗಿ ಅನಾಹುತ ನಡೆಯುವ ಮುನ್ನ ಜನಪ್ರತಿನಿಧಿಗಳು, ಸಂಬಂಧ ಪಟ್ಟ ಹೇಮಾವತಿ ಇಲಾಖೆ ಕೂಡಲೇ ಕೆರೆ ಏರಿಯನ್ನು ದುರಸ್ತಿಪಡಿಸಿ ರಸ್ತೆಗೆ ಡಾಂಬರೀಕರಣ ಮಾಡಬೇಕು ಎಂದು ಸೊಳ್ಳೇಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅಲ್ಲದೆ, ಈ ಏರಿಯ ಮೇಲೆ ಸಂಚರಿಸುವಾಗ ಯಾರಿಗಾದರೂ ಪ್ರಾಣಾಪಾಯವಾದರೆ ಸಂಬಂಧಪಟ್ಟ ಇಲಾಖೆಯವರೆ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.

-ಮಹೇಶ್ ಕಿಕ್ಕೇರಿ

 

Tags:
error: Content is protected !!