Mysore
21
broken clouds

Social Media

ಸೋಮವಾರ, 26 ಜನವರಿ 2026
Light
Dark

ಓದುಗರ ಪತ್ರ: ಅಪಾಯ ಸ್ಥಿತಿಯಲ್ಲಿ ಕೆ.ಎಡತೊರೆ ಬಸ್ ನಿಲ್ದಾಣ

ಓದುಗರ ಪತ್ರ

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯಿಂದ ಹುಣಸೂರು ಕಡೆಗೆ ತೆರಳುವ ಮಾರ್ಗ ಮಧ್ಯೆ ಇರುವ ಹಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕೆ.ಎಡತೊರೆ ಗ್ರಾಮವು ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಗ್ರಾಮವಾಗಿದೆ.

ಹುಣಸೂರು ಮತ್ತು ಎಚ್.ಡಿ.ಕೋಟೆ ನಡುವೆ ದಿನ ನಿತ್ಯ ಸಾವಿರಾರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸಂಚಾರ ಮಾಡುತ್ತಾರೆ. ಕೆ.ಎಡತೊರೆ ಗ್ರಾಮದಲ್ಲಿ ಹಳೆಯ ಬಸ್ ನಿಲ್ದಾಣವಿದೆ. ಈ ನಿಲ್ದಾಣದಲ್ಲಿ ರಾತ್ರಿ ವೇಳೆ ಕಿಡಿಗೇಡಿಗಳು ಮದ್ಯಪಾನ, ಧೂಮಪಾನ ಮಾಡಿ ಮದ್ಯದ ಬಾಟಲಿಗಳನ್ನು ಬಿಸಾಡಿ ಹೋಗುತ್ತಾರೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮಳೆ ಬಂದ ಸಂದರ್ಭದಲ್ಲಿ ಅಥವಾ ಬೇಸಿಗೆಯಲ್ಲಿ ಈ ಬಸ್ ನಿಲ್ದಾಣದ ಒಳಗೆ ಆಶ್ರಯ ಪಡೆಯಬೇಕು. ಆದರೆ ಈ ಬಸ್ ನಿಲ್ದಾಣಕ್ಕೆ ಪ್ರವೇಶ ಮಾಡಲೂ ಆಗುತ್ತಿಲ್ಲ. ತುಂಬಾ ಹಳೆಯದಾಗಿರುವುದರಿಂದ ಯಾವುದೇ ಸಂದರ್ಭದಲ್ಲಾದರೂ ಕುಸಿದು ಬೀಳುವ ಸಂಭವವಿದೆ.

ಆದ್ದರಿಂದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಾಗೂ ತಾಲ್ಲೂಕಿನ ಜನಪ್ರತಿನಿಧಿಗಳು,ಶಾಸಕರು, ಸಂಸದರು, ಕೂಡಲೇ ಈ ಬಗ್ಗೆ ಗಮನ ಹರಿಸಿ ಕೆ.ಎಡತೊರೆ ಗ್ರಾಮದಲ್ಲಿ ಹೊಸ ಹಾಗೂ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಮಾಡಿಕೊಡಲು ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

-ಸಿದ್ದಲಿಂಗೇಗೌಡ, ಹೈರಿಗೆ, ಎಚ್. ಡಿ. ಕೋಟೆ ತಾಲ್ಲೂಕು

Tags:
error: Content is protected !!