‘ಆಂದೋಲನ’ ದಿನಪತ್ರಿಕೆಯ ಆ.21ರ ಸಂಚಿಕೆಯ ಓದುಗರ ಪತ್ರಗಳ ವಿಭಾಗದಲ್ಲಿ ‘ಜನ ಸಾಮಾನ್ಯರ ದಸರಾವಾಗಲಿ’ ಎಂಬ ಶೀರ್ಷಿಕೆಯಡಿ ನಾನು ಬರೆದ ಓದುಗರ ಪತ್ರವೊಂದು ಪ್ರಕಟಗೊಂಡಿತ್ತು.
ಕಳೆದ ಬಾರಿಯ ದಸರಾದಲ್ಲಿ ಕೆಲವು ಮಧ್ಯವರ್ತಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಕಲಾವಿದರ ಬಳಿಯೇ ಕಮಿಷನ್ ಕೇಳಿದ ಆರೋಪ ಕೇಳಿಬಂದಿತ್ತಲ್ಲದೇ ಕೆಲ ದಸರಾ ಮಹೋತ್ಸಹವದ ಅನುದಾನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪವೂ ಇತ್ತು.
ಅಲ್ಲದೆ ದಸರಾ ಖರ್ಚು ವೆಚ್ಚಗಳ ವಿವರವನ್ನು ದಸರಾ ಮುಗಿದು 2 ತಿಂಗಳುಗಳು ಕಳೆದರೂ ನೀಡಿರಲಿಲ್ಲ. ಇದರಿಂದಾಗಿ ಸಾರ್ವಜನಿಕರಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.
ಈ ಮಧ್ಯೆ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಈ ಬಾರಿಯ ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಿ ಕಮಿಷನ್ ರೂಪದಲ್ಲಿ ಹಣ ಪೋಲಾಗುವುದನ್ನು ತಡೆಗಟ್ಟಲು ನಿಗಾವಹಿಸುವುದಾಗಿ ತಿಳಿಸಿದ್ದಾರೆ.
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.