Mysore
17
few clouds

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಮನೆ ಬಾಗಿಲಿದೆ ಬರಲಿದೆ ಆರೋಗ್ಯ ಸೇವೆ

ಜ.15ರಂದು ಮೈಸೂರಿನಲ್ಲಿ ಗೃಹ ಆರೋಗ್ಯ ಯೋಜನೆ ಜಾರಿ

ಎಚ್. ಎಸ್. ದಿನೇಶ್‌ಕುಮಾರ್
ಮೈಸೂರು: ಆಧುನಿಕ ಜೀವನ ಶೈಲಿ ಸೇರಿದಂತೆ ಅನೇಕ ಕಾರಣಗಳಿಂದ ಇಂದು ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ರಕ್ತದೊತ್ತಡ ಮತ್ತು ಮಧುಮೇಹ ಹಲವು ಕಾಯಿಲೆಗೆ ಮೂಲವಾಗುತ್ತಿವೆ. ಹೆಚ್ಚಿನ ಜನರು ತಮಗೆ ಮಧುಮೇಹ, ರಕ್ತದೊತ್ತಡ ಇದ್ದರೂ ತಪಾಸಣೆ ಮಾಡಿಸಿಕೊಳ್ಳುತ್ತಿಲ್ಲ. ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಜಾರಿಗೊಳಿಸಿದ್ದು,ಜ. ೧೫ರಿಂದ ಮೈಸೂರು ಜಿಲ್ಲೆಯಲ್ಲಿ ಸೇವೆ ಆರಂಭವಾಗಲಿದೆ.

ಈ ಮೊದಲು ರಕ್ತದೊತ್ತಡ, ಮಧುಮೇಹ ಅಂದರೆ ಅದು ಶ್ರೀಮಂತರ ಕಾಯಿಲೆ ಎಂದೇ ಹೇಳುತ್ತಿದ್ದರು. ಆದರೀಗ ಜಾತಿ, ಮತ, ಧರ್ಮವೆನ್ನದೆ, ವಯಸ್ಸಿನ ಮಿತಿಯೂ ಇಲ್ಲದೇ ಎಲ್ಲರಲ್ಲಿಯೂ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಇದರ ಜೊತೆಗೆ ಕ್ಯಾನ್ಸರ್ ಕೂಡ ಜನರನ್ನು ಬಾಽಸುತ್ತಿದೆ. ಮೊದಲ ಹಂತದಲ್ಲಿ ಈ ಕಾಯಿಲೆ ಗೊತ್ತಾಗುವುದೇ ಇಲ್ಲ.

ಆಧುನಿಕ ಜೀವನ ಶೈಲಿ, ಅತಿಯಾದ ಒತ್ತಡ, ನಿಯಮಿತ ವ್ಯಾಯಾಮ, ಉತ್ತಮ ಆಹಾರ ಪದ್ದತಿಯನ್ನು ಅನುಸರಿಸದೇ ಇರುವುದರಿಂದ ಹೆಚ್ಚಿನ ಜನರಿಗೆ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಕಾಯಿಲೆಗಳು ಬರಲು ಕಾರಣವಾಗತ್ತಿದೆ. ಇದನ್ನು ಆರಂಭಿಕ ಹಂತದಲ್ಲಿಯೇ ತಪಾ ಸಣೆ ಮಾಡಿಸಿಕೊಂಡಲ್ಲಿ ಚಿಕಿತ್ಸೆ ಆರಂಭಿಸ ಬಹುದು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ, ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ‘ಗೃಹ ಆರೋಗ್ಯ’ ಯೋಜನೆಗೆ ಮೈಸೂರಿನಲ್ಲಿ ಜ. ೧೫ ರಂದು ಚಾಲನೆ ನೀಡುತ್ತಿದೆ.

ಏನಿದು ಗೃಹ ಆರೋಗ್ಯ ಯೋಜನೆ?
ಜನರ ಆರೋಗ್ಯದ ಬಗ್ಗೆ ಖಾಳಜಿ ಹೊಂದುವ ಹಾಗೂ ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಯೋಜನೆಯೇ ‘ಗೃಹ ಆರೋಗ್ಯ’ ಯೋಜನೆ. ಗೃಹ ಆರೋಗ್ಯ ಯೋಜನೆ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ಜನರ ಆರೋಗ್ಯವನ್ನು ಪರಿಶೀಲಿಸುತ್ತಾರೆ.

ವಿಶೇಷವಾಗಿ ೩೦ ವರ್ಷ ದಾಟಿದ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ತಪಾಸಣೆ ಮಾಡುತ್ತಾರೆ. ಪ್ರಮುಖವಾಗಿ ಮಧು ಮೇಹ, ರಕ್ತದೊತ್ತಡ, ಕ್ಯಾನ್ಸರ್ ಇದೆಯೇ ಎಂಬುದನ್ನು ತಪಾಸಣೆ ನಡೆಸಿ, ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ.

ಔಷಧವೂ ಉಚಿತ
ಕಾಯಿಲೆ ದೃಢಪಟ್ಟಲ್ಲಿ ಔಷಽಗಳನ್ನು ಮನೆ ಬಾಗಿಲಿಗೆ ಹೋಗಿ ತಲುಪಿಸಲಿದ್ದಾರೆ. ಇನ್ನು ಔಷಧಗಳನ್ನು ಉಚಿತವಾಗಿ ಪ್ರತಿ ತಿಂಗಳು ನಿರಂತರವಾಗಿ ಮನೆಗೆ ಕಳುಹಿಸುವ ವ್ಯವಸ್ಥೆಯನ್ನು ಯೋಜನೆಯಡಿ ಮಾಡಲಾಗುತ್ತಿದೆ. ಈ ಯೋಜನೆ ಮೂಲಕ ಕಾಯಿಲೆ ಇರುವವರು ಸರ್ಕಾರಿ ಆಸ್ಪತ್ರೆಗೆ ಬಂದು ಔಷಽ ತಗೆದುಕೊಂಡು ಹೋಗಬಹುದಾಗಿದೆ. ತೆಗೆದು ಕೊಂಡು ಹೋಗಲಿಕ್ಕಾಗದೇ ಇದ್ದವರಿಗೆ, ಮನೆಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ತಲುಪಿಸುವ ಕೆಲಸವನ್ನು ಮಾಡಲಾಗುತ್ತದೆ.

Tags:
error: Content is protected !!