ಮೈಸೂರು: ಹಪ್ಪಳ, ಸಂಡಿಗೆ, ಉಪ್ಪಿನಕಾಯಿ. . . ಹೀಗೆ ಸಣ್ಣ ಪ್ರಮಾಣದಲ್ಲಿ ಗೃಹ ಬಳಕೆ ವಸ್ತುಗಳನ್ನು ತಯಾರಿಸಿ ಕೆಲ ಮನೆಗಳಿಗೆ ಅವುಗಳನ್ನು ಮಾರಿ ಗೃಹಕೃತ್ಯದ ಜತೆಗೆ ಮನೆಯ ಸಣ್ಣಪುಟ್ಟ ಖರ್ಚುಗಳಿಗೂ ಆಗುವಷ್ಟು ಹಣ ಸಂಪಾದಿಸಿಕೊಳ್ಳುವ ದಾರಿ ಕಂಡುಕೊಂಡಿದ್ದ ಮಹಿಳೆ, ಬದಲಾದ ಕಾಲಘಟ್ಟದಲ್ಲಿ ಈ ರೀತಿಯ ಉತ್ಪನ್ನಗಳನ್ನು ಸಾಗರದಾಚೆಗೂ ತಲುಪಿಸುವ ಮೂಲಕ ರಫ್ತು ಉದ್ಯಮಕ್ಕೂ ಕಾಲಿಟ್ಟಿರುವುದು ಗೊತ್ತಿರುವ ಸಂಗತಿ.
ಮಹಿಳಾ ಸಬಲೀಕರಣಕ್ಕಾಗಿ ರಾಜ್ಯಸರ್ಕಾರ ತನ್ನ ಆಯವ್ಯಯದಲ್ಲಿ ಒಂದು ಭಾಗವನ್ನು ಮೀಸಲಿರಿಸುತ್ತಾ ಬಂದಿದೆ. ಮಹಿಳೆ ಯರಿಗೆ ಸ್ವ ಉದ್ಯೋಗದ ಮೂಲಕ ಆರ್ಥಿಕ ಸ್ವಾತಂತ್ರ್ಯ ಕಲ್ಪಿಸಲು ಸರ್ಕಾರ ಮಹಿಳಾ ಉದ್ಯಮಿಗಳಿಗಾಗಿ ‘ಉದ್ಯೋ ಗಿನಿ ಯೋಜನೆ’, ‘ಸ್ತ್ರೀ ಶಕ್ತಿ ಯೋಜನೆ’ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದೆ. ಉದ್ಯೋಗಿನಿ ಯೋಜನೆಯಡಿ ಮಹಿಳೆಯರು ಸ್ವ ಉದ್ಯೋಗಕ್ಕಾಗಿ ಬ್ಯಾಂಕುಗಳಿಂದ ೧ ರಿಂದ ೩ ಲಕ್ಷ ರೂ. ಗಳವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು. ಇದರಲ್ಲಿ ಸಾಮಾನ್ಯ ಮತ್ತು ವಿಶೇಷ ವರ್ಗದ ಮಹಿಳೆಯರಿಗೆ ಶೇ. ೩೦, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ಶೇ. ೫೦ರಷ್ಟು ಸಹಾಯಧನ ನೀಡಲಾಗುತ್ತದೆ.
ಕೃತಕ ಬುದ್ಧಿಮತೆ , ಕ್ವಾಂಟಮ್, ಬೋಂಟೆಕ್, ಬಾಹ್ಯಾ ಕಾಶ ಮತ್ತು ಹಸಿರು ತಂತ್ರಜ್ಞಾನಗಳಿಂದ ಕೂಡಿರುವ ಡಿಜಿಟಲ್ ಯುಗದಲ್ಲಿ ನಾವು ನಿಂತಿದ್ದೇವೆ. ೨೦೩೪ರ ವೇಳೆಗೆ ಕರ್ನಾಟಕವನ್ನು ಭಾರತದ ಪ್ರಮುಖ ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವಾಗಿ ಪರಿವರ್ತಿಸುವ ಸರ್ಕಾರದ ಗುರಿಗೆ ಬಾಹ್ಯಾಕಾಶ ತಂತ್ರಜ್ಞಾನ ನೀತಿ ೨೦೨೫-೩೦ ಸಹಕಾರಿಯಾಗ ಲಿದೆ. ಹೊಸ ಸ್ಟಾರ್ಟ್ ಅಪ್ ನೀತಿಯಿಂದ ಮುಂದಿನ ಐದು ವರ್ಷಗಳಲ್ಲಿ ಬಂಡವಾಳ ನೆರವು, ಮಾರುಕಟ್ಟೆ ಅವಕಾಶ, ಮೂಲ ಸೌಲಭ್ಯ, ಕೌಶಲಾಭಿವೃದ್ಧಿಯಂತಹ ಕ್ರಮಗಳ ಮೂಲಕ ೨೫,೦೦೦ ಸ್ಟಾರ್ಟ್ ಅಪ್‌ಗಳ ಸ್ಥಾಪನೆಗೆ ನೆರವಾಗುವ ಗುರಿಯನ್ನು ಸರ್ಕಾರ ಹೊಂದಿದೆ.
ಇದನ್ನು ಓದಿ: ಮಹಿಳಾ ಉದ್ಯಮಿಗಳಿಗೆ ಸರ್ಕಾರದ ಅಭಯ
ಸ್ತ್ರೀ ಶಕ್ತಿ ಯೋಜನೆಯು ಸ್ವ ಸಹಾಯ ಗುಂಪುಗಳಿಗೆ ೨೫ ಸಾವಿರ ರೂ. ಗಳಿಂದ ಒಂದು ಲಕ್ಷ ರೂ. ಗಳವರೆಗೆ ಬ್ಯಾಂಕ್ ಸಾಲಕ್ಕೆ ಶೇ. ೬ರ ಬಡ್ಡಿಯಲ್ಲಿ ಸಹಾಯಧನ ನೀಡುತ್ತದೆ. ಮಹಿಳಾ ಸ್ವ ಸಹಾಯ ಗುಂಪುಗಳನ್ನು ಸಂಘಟಿಸಿ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ ಗೊಳಿಸುವುದು ಸ್ತ್ರೀಶಕ್ತಿ ಯೋಜನೆಯ ಉದ್ದೇಶವಾಗಿದೆ.
ಮುದ್ರಾ ಯೋಜನೆ: ಯಾವುದೇ ಅಡಮಾನವಿಲ್ಲದೆ ಮಹಿಳೆಯರಿಗೆ ಹತ್ತು ಲಕ್ಷ ರೂ. ಗಳವರೆಗೆ ಈ ಯೋಜನೆಯಲ್ಲಿ ಸಾಲ ಪಡೆಯಲು ಅವಕಾಶವಿದೆ. ಈ ಸಾಲವು ಕೃಷಿಯೇತರ ವ್ಯವಹಾರಗ ಳಿಗೆ ಮಾತ್ರ ಸೀಮಿತವಾಗಿದೆ. ಜತೆಗೆ ೩ ರಿಂದ ೫ ವರ್ಷಗಳ ಮರು ಪಾವತಿ ಅವಽಯನ್ನು ಹೊಂದಿದೆ.
ಸೌಲಭ್ಯಗಳು: ಮಹಿಳೆಯರ ಹಕ್ಕುಗಳು, ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸುವ ಕಾರ್ಯಕ್ರಮಗಳೂ ಇವೆ. ಮಹಿಳಾ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳ ಜತೆಗೆ ಹಲವು ಸಂಘಟನೆಗಳೂ ಕೆಲಸ ಮಾಡುತ್ತಾ ಬಂದಿವೆ.
ಲಿಜ್ಜತ್ ಪಾಪಡ್: ಇದು ಮಸಾಲೆ ಮತ್ತು ಹಿಟ್ಟಿನಿಂದ ಮಾಡಿದ ತೆಳುವಾದ ಭಾರತೀಯ ಹಪ್ಪಳದ ಬ್ರ್ಯಾಂಡ್. ಸ್ವಾತಂತ್ರ್ಯಾ ನಂತರ ೧೯೫೦ರಲ್ಲಿ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮಹಿಳೆಯರ ಸಣ್ಣ ಗುಂಪಿನಿಂದ ಆರಂಭವಾದ ಈ ಉದ್ಯಮ ಇಂದು ಸರಿಸುಮಾರು ೪೫ ಸಾವಿರ ಮಹಿಳೆಯರಿಗೆ ಉದ್ಯೋಗ ನೀಡುವ ದೊಡ್ಡ ಸಹಕಾರ ಸಂಘವಾಗಿ ಬೆಳೆದುನಿಂತು ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಸೇವೆಗೆ ಹೆಸರುವಾಸಿಯಾಗಿದೆ.
ಕರ್ನಾಟಕದಲ್ಲೂ ೧೯೮೩ರಲ್ಲಿ ಕೇವಲ ಏಳು ಮಂದಿ ಸದಸ್ಯರೊಂದಿಗೆ ಪ್ರಾರಂಭವಾದ ಅವೇಕ್ (ಅಸೋಸಿಯೇಷನ್ ಆ- ವುಮೆನ್ ಎನಪ್ರೆನ್ಯೂರ‍್ಸ್ ಆ- ಕರ್ನಾಟಕ) ಸಂಸ್ಥೆಯಲ್ಲಿ ಇಂದು ೧,೨೦೦ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಸದಸ್ಯತ್ವ ಪಡೆಯುವ ಮೂಲಕ ಉದ್ಯಮ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸುತ್ತಿದ್ದಾರೆ.
ಉದ್ಯಮಶೀಲರಾಗಲು ಮುಂದೆ ಬರುವ ಮಹಿಳೆಯರಿಗೆ ತರಬೇತಿ ನೀಡುತ್ತಿರುವ ಅವೇಕ್, ಗ್ರಾಮ್, ರುಡ್‌ಸೆಟ್ ಜತೆಗೆ ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರು ಮಹಿಳಾ ಉದ್ಯಮಿಗಳಿಗೆ ನೆರವಾಗುವ ಉದ್ದೇಶದಿಂದ ‘ಉಬುಂಟು’ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ರತ್ನಪ್ರಭಾ ಅವರು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಮೊಳಕೆಯೊಡೆದ ‘ಉಬುಂಟು’ ಚಿಂತನೆಗೆ ನಿವೃತ್ತಿಯ ನಂತರ ರೂಪು ನೀಡಿದ್ದಾರೆ. ಮಹಿಳಾ ಉದ್ಯಮಿಗಳಿಗಾಗಿ ಪ್ರತ್ಯೇಕ ಕೈಗಾರಿಕಾ ನೀತಿ ಇರಲಿಲ್ಲ. ಇದನ್ನು ಮನಗಂಡ ರತ್ನಪ್ರಭಾ ಅವರು ೨೦೧೪-೧೯ರ ಕೈಗಾರಿಕಾ ನೀತಿಯಲ್ಲಿ ಮಹಿಳಾ ಕೈಗಾರಿಕಾ ನೀತಿಯನ್ನು ಸೇರ್ಪಡೆಗೊಳಿಸುವ ಮೂಲಕ ಪ್ರತ್ಯೇಕ ನೀತಿ ಜಾರಿಗೆ ದಾರಿ ಮಾಡಿಕೊಟ್ಟರು.
೨೦೧೯ರಲ್ಲಿ ಅಧಿಕೃತವಾಗಿ ಚಟುವಟಿಕೆ ಆರಂಭಿಸಿದ ಉಬುಂಟು ಸಂಸ್ಥೆಯಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಗೋವಾ, ಮಧ್ಯಪ್ರದೇಶ ರಾಜ್ಯಗಳ ಮಹಿಳಾ ಉದ್ಯಮಿಗಳ ಸಂಘಟನೆಗಳನ್ನು ಒಗ್ಗೂಡಿಸಿ ಒಕ್ಕೂಟ ರಚಿಸಲಾಗಿದ್ದು, ‘ಉಬುಂಟು’ವಿನಲ್ಲಿ ಇಂದು ೧೨ ರಾಜ್ಯಗಳ ೩೦ ಸಾವಿರ ಸದಸ್ಯರುಗಳಿದ್ದಾರೆ.
ಈ ಎಲ್ಲ ಸಂಘಟನೆಗಳ ಪ್ರಯತ್ನದ ಫಲವಾಗಿ ರಾಜ್ಯದ ಐದು ಜಿಲ್ಲೆಗಳಲ್ಲಿ ಮಹಿಳಾ ಉದ್ಯಮಿಗಳ ಪಾರ್ಕ್ ಆರಂಭಿಸಲಾಗಿದೆ. ಮಹಿಳಾ ಉದ್ಯಮಿಗಳ ಜ್ಞಾನ ಮತ್ತು ಕೌಶಲವೃದ್ಧಿಯನ್ನು ಆದ್ಯತೆಯಾಗಿ ಪರಿಗಣಿಸಿ ಮುಂದಡಿ ಇಡಲಾಗುತ್ತಿದೆ. ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಆನ್‌ಲೈನ್ ಮಾರುಕಟ್ಟೆ ಒದಗಿಸುವುದಲ್ಲದೆ, ಕಾರ್ಯಾಗಾರವನ್ನು ಆಯೋಜಿಸುವ ಮೂಲಕ ವಿನೂತನ ತಂತ್ರಜ್ಞಾನದ ಪರಿಚಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರದರ್ಶನ ಮೇಳಗಳಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಆ ಮೂಲಕ ಮಾರುಕಟ್ಟೆ ಕಂಡುಕೊಳ್ಳಲು ಅನುಕೂಲ ಕಲ್ಪಿಸಲಾಗುತ್ತಿದೆ.
ಇದನ್ನು ಓದಿ: ಕೊಡಗಿನಲ್ಲಿ ಇಂದು ಪುತ್ತರಿ ಹಬ್ಬದ ಸಂಭ್ರಮ
ಮಹಿಳೆಯರನ್ನು ಉದ್ಯಮ ಶೀಲರನ್ನಾಗಿಸಲು ಅವೇಕ್ ನಲ್ಲಿ ಪ್ರತಿ ಎರಡು ತಿಂಗಳಿ ಗೊಮ್ಮೆ ತರಬೇತಿ ಶಿಬಿರ ಆಯೋಜಿಸುತ್ತಾ ಬರಲಾಗು ತ್ತಿದೆ. ನಿಗದಿತ ಶುಲ್ಕ ಪಾವತಿಸಿ ತರಬೇತಿ ಪಡೆದವರಿಗೆ ಅವೇಕ್‌ನ ಸದಸ್ಯತ್ವ ನೀಡಲಾ ಗುತ್ತದೆ. ಜತೆಗೆ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಎಲ್ಲ ರೀತಿಯ ನೆರವನ್ನೂ ನೀಡಲಾಗುತ್ತದೆ. -ಎಸ್. ಸದಾಶಿವ, ಮುಖ್ಯ ತರಬೇತಿ ಸಂಯೋಜಕರು, ಅವೇಕ್
ಕೇಂದ್ರ ಸರ್ಕಾರ ಮುದ್ರಾ ಯೋಜನೆಗೆ ಹತ್ತು ಲಕ್ಷ ರೂ. ಮಿತಿ ನಿಗದಿಪಡಿಸಿರುವಂತೆ, ರಾಜ್ಯ ಸರ್ಕಾರ ಕೂಡ ಸಣ್ಣ ಉದ್ದಿಮೆಗಳಿಗೆ ಸಾಲದ ಮಿತಿಯನ್ನು ನಿಗದಿಪಡಿಸ ಬೇಕು. ಎಂಎಸ್‌ಎಂಇ ಸೆಲ್‌ನಲ್ಲಿ ಕೌನ್ಸಿಲಿಂಗ್ ಘಟಕವನ್ನು ತೆರೆದು ವಾರಕ್ಕೆ ಒಮ್ಮೆಯಾದರೂ ಬ್ಯಾಂಕ್‌ಗಳವರ ಜತೆಗೆ ನಮ್ಮಂತಹ ಸಂಘ-ಸಂಸ್ಥೆಗಳನ್ನೂ ಒಳಗೊಂಡು ಮಹಿಳಾ ಉದ್ಯಮಿಗಳ ಕೌನ್ಸಿಲಿಂಗ್ ನಡೆಸಬೇಕು. -ಜ್ಯೋತಿ ಬಾಲಕೃಷ್ಣ, ಸಹ ಸಂಸ್ಥಾಪಕರು ಹಾಗೂ ಗೌರವ ಕಾರ್ಯದರ್ಶಿ, ಉಬುಂಟು ಸಂಸ್ಥೆ
ಹದಿನಾಲ್ಕು ಜನ ಮಹಿಳೆ ಯರು ಸೇರಿ ಜ್ಯೋತಿ ಕಿರಣ ಮಹಿಳಾ ಸ್ವ ಸಹಾಯ ಸಂಘ ರಚಿಸಿಕೊಂಡಿದ್ದೆವು. ರೈತ ಮಹಿಳೆಯರಾಗಿದ್ದರಿಂದ ಕೃಷಿ ಜಮೀನುಗಳಲ್ಲಿ, ಕೊಡಗಿನ ಕಾಫಿ ತೋಟಗಳಲ್ಲಿ ಕೂಲಿ ಕೆಲಸಕ್ಕೆ ೨-೩ ತಿಂಗಳು ಹೋಗುತ್ತಿದ್ದೆವು. ಗ್ರಾಮ್ ಸಂಸ್ಥೆಯ ತರಬೇತಿಯ ನೆರವಿ ನಿಂದ ಕಳೆದ ಐದು ವರ್ಷಗಳಿಂದ ಕುಕೀಸ್ ಮಾಡುತ್ತಿ ದೆ ವೆ. ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಲ್ಲಿ ಈವೆಂಟ್ ನಡೆಯುವಾಗ, ಅಲ್ಲಿಗೆ ಹೋಗಿ ಮಳಿಗೆ ತೆರೆಯುತ್ತೇವೆ. ಈಗ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದೇವೆ. -ಪಾರ್ವತಿ, ಆಸರೆ ಸಂಜೀವಿನಿ -ಡ್ ಪ್ರಾಡಕ್ಟ್ಸ್, ಬಿಳಿಕೆರೆ





