ಕಸ – ರಕ್ಕಸ !
ಬೆಟ್ಟದ ಮೇಲೆ ಹಾವು ಹಿಡಿದು
ನಿಂತವನಲ್ಲ ರಕ್ಕಸ !
ನಿತ್ಯ ವಿಲೇವಾರಿ ಮಾಡದೆ,
ಎಲ್ಲೆಂದರಲ್ಲಿ ಕಸವನ್ನು ಎಸೆದು,
ಹಗಲಿರುಳು, ಹಾದಿ-ಬೀದಿಗಳಲ್ಲಿ
ಗಲ್ಲಿ ಗಲ್ಲಿಗಳಲ್ಲಿ, ಬೆಟ್ಟಗುಡ್ಡಗಳಂತೆ
ಕಸದ ರಾಶಿಗಳ ಸೃಷ್ಟಿಸುವವರೇ
ನಗರದ ನಿಜವಾದ ರಕ್ಕಸರು !
– ಮ.ಗು.ಬಸವಣ್ಣ , ಜೆಎಸ್‌ಎಸ್ ಬಡಾವಣೆ, ಮೈಸೂರು



