ಗುಂಡ್ಲುಪೇಟೆ: ಪಟ್ಟಣದ ಎಪಿಎಂಸಿ ಅವರಣದಲ್ಲಿ ಕಸ, ತರಕಾರಿಗಳ ತ್ಯಾಜ್ಯದ ರಾಶಿ ರಾರಾಜಿಸುತ್ತಾ ಅನೈರ್ಮಲ್ಯ ಉಂಟು ಮಾಡುತ್ತಿದ್ದ ಕುರಿತು ‘ಆಂದೋಲನ’ ದಿನ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬಳಿಕ ಎಚ್ಚೆತ್ತ ಎಪಿಎಂಸಿ ಆಡಳಿತ ಮಂಡಳಿ ಆವರಣವನ್ನು ಸ್ವಚ್ಛಗೊಳಿಸಿದೆ.
ಎಪಿಎಂಸಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಪ್ರತಿ ಅಂಗಡಿ ಮಳಿಗೆ ಬಳಿಗೆ ತೆರಳಿ ವರ್ತಕರು ಮತ್ತು ರೈತರಿಗೆ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಸ್ವಚ್ಛತೆ ಕಾಪಾಡುವಂತೆ ಜಾಗೃತಿ ಮೂಡಿಸಬೇಕಿದೆ.
ಮಾರುಕಟ್ಟೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಬೇಕು. ರಸ್ತೆ ಅಭಿವೃದ್ಧಿ ಮಾಡಬೇಕು ಎಂಬ ಒತ್ತಾಯವೂ ಕೇಳಿಬಂದಿದ್ದು ಆದಷ್ಟು ಬೇಗ ಅಭಿವೃದ್ಧಿ ಕೆಲಸ ನಡೆಸುವಂತೆ ರೈತರು, ಸಾರ್ವ ಜನಿಕರು ಆಗ್ರಹಿಸಿದ್ದಾರೆ.





