Mysore
15
clear sky

Social Media

ಬುಧವಾರ, 24 ಡಿಸೆಂಬರ್ 2025
Light
Dark

ಇಂಜಿನಿಯರ್ ಅಮಾನತ್ತು: ಇತರ ಅಧಿಕಾರಿಗಳಲ್ಲಿ ನಡುಕ

ಮಂಜು ಕೋಟೆ

ಕೋಟೆ ಪುರಸಭೆ ಸದಸ್ಯರ ಮನೆ ಮುಂಭಾಗದಲ್ಲೇ ಕಳಪೆ ಕಾಮಗಾರಿ ಆರೋಪ

ಎಚ್.ಡಿ.ಕೋಟೆ: ಪುರಸಭಾ ಸದಸ್ಯರು ವಾಸಿಸುವ ಮನೆಮುಂಭಾಗದಲ್ಲಿ ನಡೆಸಿದ ಕಳಪೆ ಡಾಂಬರೀಕರಣ ಕಾಮಗಾರಿಯನ್ನು ಡಿಸಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿ, ಇದಕ್ಕೆ ಕಾರಣರಾದ ಪುರಸಭೆ ಅಧಿಕಾರಿ ಸುರೇಶ್ ಅವರನ್ನು ಅಮಾನತ್ತುಗೊಳಿಸಿರುವುದು ತಾಲ್ಲೂಕಿನಲ್ಲಿ ಇತರ ಅಧಿಕಾರಿಗಳು ಮತ್ತು ಗುತ್ತಿಗೆದಾರರಲ್ಲಿ ನಡುಕ ಮೂಡಿಸಿದೆ.

ಹಿಂದುಳಿದಿರುವ ಪಟ್ಟಣದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 2 ವರ್ಷಗಳ ಹಿಂದೆ ನಗರೋ ತಾನ ಯೋಜನೆಯಡಿ 9 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ, ಇದರಲ್ಲಿ 5 ಕೋಟಿ ರೂ.ಗಳನ್ನು ಡಾಂಬರೀ ಕರಣ ರಸ್ತೆ ಸಿಸಿ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಗಾಗಿ ಬಳಸಲು ಸೂಚಿಸಿತ್ತು. ಆದರೆ, ಪುರಸಭೆ ಅಧಿಕಾರಿ ಮತ್ತು ಸದಸ್ಯರುಗಳು ತಮಗೆ ಅನುಕೂಲವಾಗುವ ಕಡೆಗೆ ಕಾಮಗಾರಿಗಳ ಪಟ್ಟಿ ತಯಾರಿಸಿದ್ದರು. ಟೆಂಡರ್ ಪಡೆದ ಗುತ್ತಿಗೆದಾರ ಅವಧಿ ಮುಗಿದರೂ ಕೆಲಸ ಪೂರ್ಣಗೊಳಿಸಿಲ್ಲ ಮತ್ತು ನಡೆದಿರುವ ಕೆಲಸಗಳು ಕಳಪೆಯಾಗಿವೆ ಎಂಬ ಆರೋಪವಿತ್ತು.

ಸಿದ್ದಪ್ಪಾಜಿ ರಸ್ತೆಯ ಪುರಸಭಾ ಪುರಸಭಾ ಸದಸ್ಯ ನರಸಿಂಹಮೂರ್ತಿಯವರ ಮನೆ ಮುಂಭಾಗ ಮತ್ತು ಮಾಜಿ ಅಧ್ಯಕ್ಷರಾದ ಶಿವಮ್ಮ ಅವರ ವಾರ್ಡಿನ ಚಾಕಳ್ಳಿ ಗ್ರಾಮದ ಮಾದೇಶ್ವರ ದೇವಸ್ಥಾನದ ಡಾಂಬರೀಕೃತ ರಸ್ತೆ, ಹೌಸಿಂಗ್ ಬೋರ್ಡಿನ ಪುರಸಭಾ ಸದಸ್ಯರಾದ ಮಧು ಕುಮಾರ್ ಅವರ ಮನೆ ಮುಂಭಾಗದ ಸಿಮೆಂಟ್‌ ರಸ್ತೆಯನ್ನು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಮತ್ತು ಪಿಡಿ ಶುಭ ಮತ್ತಿತರ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದರು.

ಈ ಈ ವೇಳೆ ಡಾಂಬರೀಕೃತ ರಸ್ತೆ 75 ಎಎಂ ಮತ್ತು ಸಿಮೆಂಟ್ ರಸ್ತೆ 150 ಎಂಎಂ ದಪ್ಪವಿದ್ದು ಗುಣಮಟ್ಟದ್ದಾಗಿವೆ ಎಂದು ಪುರಸಭೆಯ ಕಿರಿಯ ಅಭಿಯಂತರ ಸುರೇಶ್ ದಾಖಲಾತಿಯಲ್ಲಿ ನಮೂದಿಸಿ ದ್ದರು. ಆದರೆ ವಾಸ್ತವವಾಗಿ ಡಾಂಬರೀಕರಣ ರಸ್ತೆ 55 ಎಂಎಂ ಮತ್ತು ಸಿಮೆಂಟ್ ರಸ್ತೆ 100 ಎಂಎಂ ಇರುವುದು ಕಂಡುಬಂದಿದೆ.

ಹೀಗಾಗಿ ಸ್ಥಳದಲ್ಲಿದ್ದ ಪುರಸಭೆಯ ಅಧಿಕಾರಿಗಳು, ಗುತ್ತಿಗೆದಾರರನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡು, ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಮಾಡಿದ್ದೀರಿ. ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿ, ತಕ್ಷಣವೇ ಸುರೇಶ್ ಅವರನ್ನು ಅಮಾನತ್ತುಗೊಳಿಸಿ ಮತ್ತಷ್ಟು ತನಿಖೆ ನಡೆಸಲು ಮುಂದಾಗಿದ್ದಾರೆ.

ಪುರಸಭಾ ಸದಸ್ಯರುಗಳ ಮನೆಗಳ ಬಳಿಯೇ ಅಭಿವೃದ್ಧಿ ಕೆಲಸಗಳು ಕಳಪೆಯಾಗಿರುವುದು, ಹಣ ದುರುಪಯೋಗವಾಗಿರುವುದು ಆಡಳಿತದ ಬಗ್ಗೆ ಅನೇಕ ಅನುಮಾನಗಳನ್ನು ಮೂಡಿಸಿದೆ.

ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದು ತಾಲ್ಲೂಕಿನ ಅಧಿಕಾರಿಗಳು ಮತ್ತು ಗುತ್ತಿಗೆದಾರರಲ್ಲಿ ನಡುಕ ಮೂಡಿಸಿದೆ.

ಸರ್ಕಾರದ ಅನುದಾನ ಮತ್ತು ಸವಲತ್ತುಗಳನ್ನು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ನಿಯಮಾನುಸಾರವಾಗಿ ಮಾಡಬೇಕು. ಲೋಪ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾವು ಮುಂದಾಗಿದ್ದೇವೆ. ಪ್ರಾರಂಭದಲ್ಲಿ ಪುರಸಭೆ ಅಧಿಕಾರಿಯನ್ನು ಅಮಾನತ್ತು ಗೊಳಿಸಲಾಗಿದ್ದು, ಇದು ಇತರರಿಗೆ ಎಚ್ಚರಿಕೆ ಘಂಟೆಯಾಗಲಿದೆ.
-ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ

Tags:
error: Content is protected !!