2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ; ಹುಲಿ ಸಂರಕ್ಷಿತಾರಣ್ಯ ಮಾದರಿಯಲ್ಲಿ ನಿರ್ಮಿಸಲು ಚಿಂತನೆ
ನವೀನ್ ಡಿಸೋಜ
ಮಡಿಕೇರಿ: ಅರಣ್ಯದಂಚಿನಲ್ಲಿ ನಡೆಯುತ್ತಿರುವ ಕಾಡಾನೆಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಹಾಸನ ಮತ್ತು ಕೊಡಗಿನಲ್ಲಿ ಆಣಿ ವಿಹಾರಧಾಮ ನಿರ್ಮಿಸಲು ಸರ್ಕಾರ ಮುಂದಾಗಿದೆ.ಈ ಕುರಿತು ಇತ್ತೀಚೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಬೆಳಗಾವಿ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ.
ಅರಣ್ಯದಂಚಿನ ಗ್ರಾಮಗಳು ಮತ್ತು ಕೋಟಿ ಜಮೀನುಗಳಿಗೆ ಲಗ್ಗೆ ಇಡುವ ಕಾಡಾನೆಗಳ ಉಪಟಳ ತಡೆಗೆ ಇಂತಹದೊಂದು ಹೊಸ ಪ್ರಯೋಗದ ಅಗತ್ಯತೆ ಬಗ್ಗೆ ಇತ್ತೀಚೆಗೆ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅರಣ್ಯ ಸಚಿವರೊಂದಿಗೆ ಚರ್ಚಿಸಿದ್ದರು. ಸದ್ಯ ಅದೇ ಯೋಜನೆಯನ್ನು ಕಾರ್ಯ ರೂಪಕ್ಕೆ ತರುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಚಿಂತನೆ ನಡೆಸಿದೆ.
ಈ ಹಿಂದೆ ಬೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ನಿವೃತ್ತ ಮುಖ್ಯಸ್ಥ ಸಿ.ಬಿ.ಕುಶಾಲಪ್ಪ ಮತ್ತು ಹಿರಿಯ ತಜ್ಞರ ತಂಡ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿತ್ತು. ಕಾಡಿನಿಂದ ತೋಟಗಳಿಗೆ ಬಂದು ಇಲ್ಲಿಯೇ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಮರಳಿಸುವುದು ಅಥವಾ ಕಾಡಿನಲ್ಲಿರಿಸಿ ಬೇಲಿ ಹಾಕುವುದು ಅವೈಜ್ಞಾನಿಕ ಕ್ರಮವಾಗಿದ್ದು, ಈ ಆಣೆಗಳಿಗಾಗಿಯೇ ಒಂದು ಸ್ಥಳವನ್ನು ಗುರುತಿಸಿ ಅಲ್ಲಿ ಅವುಗಳಿಗೆ ಬೇಕಾದ ನೀರು, ಆಹಾರ ಲಭಿಸುವಂತೆ ಮಾಡುವುದು. ಬಳಿಕ ಈ ಪ್ರದೇಶಕ್ಕೆ ಕಾಡಾನೆಗಳನ್ನು ಹಂತಹಂತವಾಗಿ ಸಾಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಆನೆ ವಿಹಾರಧಾಮಗಳು ಹುಲಿ ಸಂರಕ್ಷಿಕಾರಣ್ಯಗಳ ಮಾದರಿಯಲ್ಲಿಯೇ ಇರಲಿದೆ.
ಕಾಡಿನಿಂದ ಕಾಫಿ ತೋಟಗಳಿಗೆ ಬಂದು ನೆಲೆಸಿ ತೋಟದಾನೆಗಳಾಗಿಯೇ ಮಾರ್ಪಟ್ಟಿರುವ ಆನೆಗಳನ್ನು ಒಂದು ಸ್ಥಳಕ್ಕೆ ಸ್ಥಳಾಂತರಿಸಬೇಕಾದರೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಇದಲ್ಲದೆ ೨ ಸಾವಿರ ಹೆಕ್ಟೇರ್ ಗೆ ರೈಲ್ವೆ ಬ್ಯಾರಿಕೇಡ್ ಬೇಲಿ ನಿರ್ಮಾಣ ಮಾಡಬೇಕಿದೆ. ಅನುದಾನವೂ ಬೇಕಾಗಲಿದೆ. ಪ್ರಕ್ರಿಯೆ ನಡೆಸಬೇಕಾಗುತ್ತದೆ. ಇದೊಂದು ಪ್ರಾಯೋಗಿಕ ಅದೊಂದು ಬೃಹತ್ ಯೋಜನೆಯಾಗಿದ್ದು, ಹೆಚ್ಚು ಯೋಜನೆಯಾಗಿದ್ದು, ಕಾರ್ಯರೂಪಕ್ಕೆ ಯಶಸ್ವಿಯಾದರೆ ಕಾಡಾನ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇದೊಂದು ಮೈಲಿಗಲ್ಲಾಗಲಿದೆ.
ಕಾಡಾನೆ ಮಾನವ ಸಂಘರ್ಷ ಮಿತಿ ಮೀರುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ತಜ್ಞರ ಸಲಹೆಯಂತೆ ಈ ಜೋಡ ಯೋಜನೆ ಬಗ್ಗೆ ಅರಣ್ಯ ಸಚಿವರೊಂದಿಗೆ ಚರ್ಚಿಸಲಾಗಿತ್ತು, ತಿತಿಮತಿ ಭಾಗದಲ್ಲಿ ಈ ಯೋಜನೆಗೆ ಸೂಕ್ತ ಜಾಗ ಗುರುತಿಸುವ ಬಗ್ಗೆ ಚರ್ಚೆ ನಡೆದಿದೆ. ತಜ್ಞರು ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರ ಈ ಯೋಜನೆಯ ರೂಪುರೇಷೆ ಸಿದ್ಧಪಡಿಸಲಿದೆ. -ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ
ನಾಗರಹೊಳೆ ಬಫರ್ ಜೋನ್‌ನಲ್ಲಿ ಪ್ರಯೋಗ..?
ಕಾಡಾನೆಗಳನ್ನು ಒಂದೆಡೆ ಬಿಟ್ಟು ಸಂರಕ್ಷಿತ ಪ್ರದೇಶವನ್ನು ಸೃಷ್ಟಿಸುವುದಾದರೇ ಅದಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಫರ್ ಜೋನ್ ಉತ್ತಮ ಆಯ್ಕೆ ಎಂಬ ಸಂಜೆಯೂ ತೆಳಿ ಬಂದಿದೆ. ನಾಗರಹೊಳೆ ಬಮ್ ಜೋನ್‌ನಲ್ಲಿ ಹಾರಿಗಳಿಗೆ ನೀರು ಲಭ್ಯವಿರುವಂತೆ ನೋಡಿಕೊಳ್ಳಲು ತೆರೆಗಳ ಅಭಿವೃದ್ಧಿ, ಆಹಾರ, ನರಳು ಸಿಗುವಂತಾಗಲು ಬೇರಾಗುವ ಮರಗಳನ್ನು ನೆಟ್ಟು ಬೆಳೆಸುವುದೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬಯದು ಎಂದು ಸಲಹೆ ನೀಡಲಾಗಿದೆ. ತೊಡಗಿನಲ್ಲಿ ನಿರ್ಮಾಣವಾಗುವ ಆಣಿ ವಿಹಾರಧಾಮಲ್ಲಿ ಸಿಸಿಮಸಿ ಬಳಿ ಜಾಗ ಇರುವ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಿರುವುದಾಗಿ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದು, ಹುಲಿ ಸಂರಕ್ಷಿತಾರಣ್ಯದ ಬ ಬೋನ್‌ನಲ್ಲಿ ಬರುವ ಈ ಪ್ರದೇಶದಲ್ಲಿ ಆನೆ ವಿಹಾರಧಾಮ ನಿರ್ಮಿಸಲು ತೆರೆಗಳ ಅಭಿವೃದ್ಧಿ ಸೇರಿದಂತೆ ಅನೇಕ ಕಾರ್ಯಗಳಾಗಬೇಕಿದೆ.





