Mysore
27
scattered clouds

Social Media

ಶನಿವಾರ, 30 ಮೇ 2026
Light
Dark

ಹುಣಸೂರಿನಲ್ಲಿ ಡ್ರಗ್ಸ್ ಪತ್ತೆಯಾಗಿದ್ದ ಪ್ರಕರಣ: ಮೂವರ ಬಂಧನ

ಮೈಸೂರು: ಹುಣಸೂರು ಬಳಿಯ ತೋಟದ ಮನೆಯೊಂದ ರಲ್ಲಿ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತಗಳನ್ನು ವಶಕ್ಕೆ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಅಂತರರಾಜ್ಯ ಮಾದಕ ಜಾಲದ ಮೂವರನ್ನು ಬಂಧಿಸಿದ್ದಾರೆ.

ಹುಣಸೂರಿನ ರತ್ನಪುರಿ ಬಳಿಯ ದಾಸನಪುರ ತೋಟದ ಮನೆಯ ಮೇಲೆ ದಾಳಿ ನಡೆಸಿದ್ದ ಜಿಲ್ಲಾ ಪೊಲೀಸರ ತಂಡ ಅಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಲ್ಲದೆ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿತ್ತು.

ನಂತರ ಇಬ್ಬರೂ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳ ಪಡಿಸಿದ್ದು, ಅವರುಗಳ ಸಿಮ್ ಕಾರ್ಡ್‌ಗಳ ಪರಿಶೀಲನೆ ನಡೆಸಿದ ವೇಳೆ ಆರೋಪಿಗಳ ಸಂಪರ್ಕದಲ್ಲಿ ಇದ್ದ ಇಬ್ಬರು ಮುಂಬೈ ಹಾಗೂ ಒಬ್ಬರು ಒಡಿಶಾದ ಕಟಕ್‌ನಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿತ್ತು.

ಹೀಗಾಗಿ ಜಿಲ್ಲಾ ಎಸ್‌ಪಿ ಅವರ ಸೂಚನೆ ಮೇರೆಗೆ ಐದು ಮಂದಿ ಪೊಲೀಸ್ ಅಧಿಕಾರಿಗಳ ತಂಡ ಬುಧವಾರ ಮುಂಬೈ ಹಾಗೂ ಒಡಿಶಾಗೆ ತೆರಳಿತ್ತು.

ನಂತರ ಅಲ್ಲಿನ ಪೊಲೀಸ್ ನೆರವಿನೊಂದಿಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಮತ್ತೊಬ್ಬನ ವಿಳಾಸ ಪತ್ತೆಗೆ ಜಾಲ ಬೀಸಿದ್ದಾರೆ.

ಹುಣಸೂರು ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಇಬ್ಬರು ಆರೋಪಿಗಳು ಒಡಿಶಾದಲ್ಲಿ ಕೂಡ ಓರ್ವ ಜಾಲದಲ್ಲಿ ಇದ್ದ ಬಗ್ಗೆ ಬಾಯ್ಬಿಟ್ಟಿದ್ದರು. ಈ ಸಂಬಂದ ಅಲ್ಲಿಗೆ ತೆರಳಿದ್ದ ಪೊಲೀಸರು, ಸ್ಥಳೀಯ ಪೊಲೀಸರ ನೆರವಿನಿಂದ ಮಾದಕ ವಸ್ತು ಸಾಗಾಣೆ ಮಾಡುತ್ತಿದ್ದ ರಾಜಾ ಸಹಾನಿ ಎಂಬಾತನನ್ನು ಬಂಧಿಸಿದ್ದು, ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿ ಮೈಸೂರಿಗೆ ಕರೆತರುತ್ತಿದ್ದಾರೆ.

ಎಫ್‌ಎಸ್‌ಎಲ್ ವರದಿಯಲ್ಲಿ ಸಾಬೀತು:  ಹುಣಸೂರಿನಲ್ಲಿ ವಶಕ್ಕೆ ಪಡೆಯಲಾಗಿದ್ದ ೭.೩೫ ಕೆಜಿ ಮೆಫೆ ಡ್ರೋನ್, ೪೧ ಕೆಜಿ ಮಾದಕ ವಸ್ತು ತಯಾರಿಕೆಯ ಕಚ್ಛಾ ವಸ್ತು ಸೇರಿದಂತೆ ಸುಮಾರು ೪೮ ಕೆಜಿ ಮಾದಕ ವಸ್ತುಗಳನ್ನು ಜಿಲ್ಲಾ ಪೊಲೀಸರು ನ್ಯಾಯಾ ಲಯದಲ್ಲಿ ತೆರಳಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಅವುಗಳನ್ನು ಎಫ್ ಎಸ್‌ಎಲ್ ವಿಭಾಗಕ್ಕೆ ರವಾನಿಸಿದ್ದರು. ಇದೀಗ ಅಲ್ಲಿ ದೊರಕಿದ್ದು ಮಾದಕ ವಸ್ತುಗಳು ಎಂಬುದು ವರದಿಯಲ್ಲಿ ಸಾಬೀತಾಗಿದೆ.

Tags:
error: Content is protected !!