ಮೈಸೂರು ನಗರದ ಜೆಎಲ್‌ಬಿ ರಸ್ತೆಯ ಪಂಚವಟಿ ಹೋಟೆಲ್ ಎದುರಿನ ಫುಟ್ ಪಾತ್‌ನಲ್ಲಿ ಹಾಗೂ ಲಕ್ಷ್ಮೀಪುರಂ ಪೊಲೀಸ್ ಠಾಣೆ ಮತ್ತು ಆರ್‌ಟಿಒ ಸರ್ಕಲ್ ಮಧ್ಯದ ಪುಟ್ ಪಾತ್‌ನಲ್ಲಿ ಸುಮಾರು ೧ ತಿಂಗಳಿನಿಂದ ಕುಡಿಯುವ ನೀರಿನ ಪೈಪ್ ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಪೈಪ್‌ನಿಂದ ಹೊರ ಬಂದ ನೀರು ಫುಟ್‌ಪಾತ್ನಲ್ಲಿ ನಿರಂತರ ವಾಗಿ ಹರಿಯುವುದರಿಂದ ಪಾದಚಾರಿಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ. ಒಂದು ತಿಂಗಳಿನಿಂದಲೂ ಈ ರೀತಿಅವ್ಯವಸ್ಥೆ ಉಂಟಾಗಿದ್ದರೂ ಸಂಬಂಧ ಮೈಸೂರು ಮಹಾನಗರ ಪಾಲಿಕೆ ಅಥವಾ ವಾಣಿವಿಲಾಸ ವಾಟರ್ ವರ್ಕ್ಸ್‌ನ ಅಧಿಕಾರಿಗಳು ಗಮನ ಹರಿಸದೇ ನಿರ್ಲಕ್ಷ್ಯವಹಿಸಿರುವುದು ಸರಿಯಲ್ಲ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಒಡೆದಿರುವ ಕುಡಿಯುವ ನೀರಿನ ಪೈಪ್ ಅನ್ನು ದುರಸ್ತಿಪಡಿಸಿ ನೀರು ಪೋಲಾಗುವುದನ್ನು ತಡೆಗಟ್ಟಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವರೇ ಕಾದು ನೋಡಬೇಕಿದೆ.
– ಮಂಜುನಾಥ ಹೆಗಡೆ, ೨ನೇ ಮುಖ್ಯ ರಸ್ತೆ, ಚಾಮುಂಡಿಪುರಂ, ಮೈಸೂರು





