ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ ತಾಲ್ಲೂಕು ಅಡಳಿತ ಸೌಧದದಲ್ಲಿರುವ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳಿಗೆ ಹಿರಿಯ ನಾಗರಿಕರು, ವಿಶೇಷ ಚೇತನರು, ಸಾರ್ವಜನಿ ಕರು ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಬರುತ್ತಾರೆ. ಆದರೆ ಇಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ. ಹಾಗಾಗಿ ಕಚೇರಿ ಆವರಣದಲ್ಲಿರುವ ಮರ ಗಿಡಗಳ ಕೆಳಗೆ ಅಥವಾ ಖಾಲಿ ಜಾಗವನ್ನು ಆಶ್ರಯಿಸುತ್ತಾರೆ.
ಮಳೆಗಾಲ ಮತ್ತು ಬೇಸಿಗೆಯ ಬಿಸಿಲಿನ ಸಂದರ್ಭದಲ್ಲಿ ಜನರಿಗೆ ಬಹಳ ತೊಂದರೆ ಉಂಟಾ ಗುತ್ತಿದೆ. ಬಿಪಿ,ಶುಗರ್ ಇನ್ನಿತರ ಕಾಯಿಲೆಗಳಿರುವವರೂ ಕೂಡ ಕಚೇರಿ ಕೆಲಸಕ್ಕೆ ಬರುತ್ತಾರೆ. ಕೆಲವೊಮ್ಮೆ ಕೆಲಸ- ಕಾರ್ಯಗಳು ಆಗುವುದು ತಡವಾದಾಗ ಇಂಥವರು ಸುಸ್ತಾಗಿ ಕುಸಿದು ಬಿದ್ದಿರುವ ಘಟನೆಗಳೂ ನಡೆದಿವೆ. ಆದ್ದರಿಂದ ಕಚೇರಿ ಆವರಣದಲ್ಲಿ ಕಚೇರಿ ಕೆಲಸಗಳಿಗೆ ಬಂದು ಕಾಯುವ ಸಾರ್ವಜನಿಕರಿಗೆ ಕೂರಲು ಅನುಕೂಲವಾಗುವಂತೆ ಆಸನ ವ್ಯವಸ್ಥೆ ಮಾಡಿಕೊಡಬೇಕು, ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಗಳು, ಜನಪ್ರತಿನಿಽಗಳು ಗಮನ ಹರಿಸಬೇಕಿದೆ.
– ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಎಚ್. ಡಿ. ಕೋಟೆ ತಾಲ್ಲೂಕು





