ಫಲಿಸಿದ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಹೊಸ ಸುಧಾರಣೆ ಕ್ರಮಗಳು
ಮೈಸೂರು : ರಾಜ್ಯದಲ್ಲಿ ಪ್ರತಿವರ್ಷ ಮಳೆಗಾಲ ಮುಗಿಯುತ್ತಿದ್ದಂತೆ ಆರಂಭವಾಗುತ್ತಿದ್ದ ಮಹಾಮಾರಿ ಡೆಂಗ್ಯು ಜ್ವರಕ್ಕೆ ಹಲವಾರು ಮರಣ ಸಂಭವಿಸುತ್ತಿದ್ದವು. ಆದರೆ, ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಇದರ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿರುವ ಜತೆಗೆ, ಶೂನ್ಯಕ್ಕೆ ಕುಸಿದಿದೆ. ಪ್ರತಿವರ್ಷ ಕಾಡುತ್ತಿದ್ದ ಡೆಂಗ್ಯು ಜ್ವರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೈಗೊಂಡ ಹೊಸ ಸುಧಾರಣಾ ಕ್ರಮಗಳು ಫಲ ನೀಡಿವೆ.
ಮುಂಗಾರು ಮಳೆಯ ಬೆನ ಹಿಂದೆಯೇ ಡೆಂಗ್ಯು, ಚಿಕುನ್ ಗುನ್ಯಾ, ಮಲೇ ರಿಯಾ ಮೊದಲಾದ ಸಾಂಕ್ರಾ ಮಿಕ ರೋಗಗಳು ಹರಡಿ ಜನರು ಪರಿತಪಿಸದಂತೆ ಕ್ರಮವಹಿಸಿದ ರಿಂದಾಗಿ ಯಾವುದೇ ಡೆಂಗ್ಯು ಪ್ರಕರಣಗಳಲ್ಲಿ ಸಾವು ಸಂಭವಿಸಿಲ್ಲ. ಕಳೆದ ವರ್ಷಕೆ ಹೋಲಿಸಿದರೆ ಈ ಬಾರಿ ಶೂನ್ಯ ದಾಖಲಾಗಿರುವ ದು ಗಮನಾರ್ಹ. ಜತೆಗೆ, ಇಲಾಖೆಯ ಅಧಿಕಾರಿ ಗಳು ನಿಟ್ಟುಸಿರು ಬಿಡುವಂತಾಗಿದೆ. ಮೈಸೂರು ವಿಭಾಗದಲ್ಲಿ ೨೦೨೫ರ ಜನವರಿ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ, ಮೈಸೂರು, ದಕ್ಷಿಣ ಕನ ಡ, ಮಂಡ್ಯ, ಚಿಕ ಮಗಳೂರು, ಚಾಮರಾಜನಗರ, ಕೊಡಗು, ಹಾಸನ, ಉಡುಪಿ ಸೇರಿದಂತೆ ಒಟ್ಟು ಎಂಟು ಜಿಲ್ಲೆ ಗಳಿಂದ ೪೬,೮೬೦ ಸಂಶಯಾಸ್ಪದ ಡೆಂಗ್ಯು ಪ್ರಕರಣಗಳ ಸಂಖ್ಯೆ ದಾಖಲಾಗಿದ್ದರೆ, ೪೧,೪೨೯ ಮಂದಿಗೆ ಸಿರಂ ಮಾದರಿ ಗಳನ್ನು ಪರೀಕ್ಷಿಸಿದಾಗ ೬೬೩ ಡೆಂಗ್ಯು ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲಾ ಡೆಂಗ್ಯು ಬಾಽತರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲಾಗಿ, ಎಲ್ಲರೂ ಗುಣಮುಖವಾಗಿರುವುದರಿಂದ ಸಾವಿನ ಪ್ರಕರಣ ದಾಖಲಾಗಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೭,೩೨೦ ಸಂಶಯಾಸ್ಪದ ಪ್ರಕರಣಗಳು ದಾಖಲಾಗಿದ್ದು, ೨೦ ಪ್ರಕರಣಗಳು ಖಚಿತವಾಗಿವೆ. ಮಂಡ್ಯ ಜಿಲ್ಲೆಯಲ್ಲಿ ೩,೦೦೯ ಪ್ರಕರಣಗಳು ದಾಖಲಾಗಿ, ೧೩೩ ಪ್ರಕರಣಗಳು ದೃಢವಾಗಿರುವುದು ದಾಖಲಾಗಿದೆ. ಆದರೆ, ಎಲ್ಲಿಯೂ ಸಾವಿನ ಪ್ರಕರಣಗಳು ಇಲ್ಲದೇ ಇರುವುದು ಅಽಕಾರಿಗಳ ಮನದಲ್ಲಿ ಸಂತಸವನ್ನುಂಟು ಮಾಡಿದೆ.
ಇದನ್ನು ಓದಿ: ಕೆ.ಆರ್.ಪೇಟೆ | ಲಾರಿ ಚಕ್ರಕ್ಕೆ ಸಿಲುಕಿ ಇಬ್ಬರು ಮಹಿಳೆ ಸಾವು
ಡೆಂಗ್ಯು ಇಳಿಕೆಗೆ ಕಾರಣವೇನು? : ಡೆಂಗ್ಯು ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ೨೦೨೪ರಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಪಟ್ಟಿಗೆ ಡೆಂಗ್ಯು ಜ್ವರವನ್ನೂ ಸೇರಿಸಿತ್ತು. ೨೦೨೦ರ ಸಾಂಕ್ರಾಮಿಕ ರೋಗಗಳ ಕಾಯ್ದೆ ತಿದ್ದುಪಡಿ ನಿಯಮಾವಳಿಗಳಡಿ ನಿಯಮ ಉಲ್ಲಂಸಿದವರಿಗೆ ದಂಡ ವಿಧಿಸಲಾಗುತ್ತದೆ.
ನೀರಿನ ಶೇಖರಣೆಯಾದರೆ, ಸಂಪ್, ಓವರ್‌ಹೆಡ್ ಟ್ಯಾಂಕ್ ಗಳನ್ನು ಸುರಕ್ಷಿತವಾಗಿ ಮುಚ್ಚದಿದ್ದರೆ ಜಿಲ್ಲಾಧಿಕಾರಿ ಗಳನ್ನು ಒಳಗೊಂಡ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ದಂಡ ವಸೂಲಿ ಮಾಡುತ್ತಾರೆ.
ಹೀಗಾಗಿ, ಸ ಳೀಯ ಮಟ್ಟದಲ್ಲಿ ಹಲವಾರು ಸುಧಾರಣಾ ಕ್ರಮಗಳು ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈ ಗೊಂಡಿದ್ದ ರಿಂದಾಗಿ ಮರಣ ಪ್ರಮಾಣ ಇಳಿಕೆಯಾಗಲು ಮೂಲ ಕಾರಣವಾಗಿದೆ.
ಜಿಲ್ಲಾವಾರು ನಾಯಿ ಕಡಿತ ಪ್ರಕರಣ
ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರ ಎಚ್ಚೆತ್ತುಕೊಂಡಿರುವ ಅಽಕಾರಿಗಳು ಅಗತ್ಯಕ್ರಮಕ್ಕೆ ಮುಂದಾಗಿರುವ ನಡುವೆಯೇ ೨೦೨೫-೨೬ರಲ್ಲಿ ಮೈಸೂರು ವಿಭಾಗದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಎಂಟು ಜಿಲ್ಲೆಗಳ ಪೈಕಿ ಚಾಮರಾಜನಗರ ಜಿಲ್ಲೆಯಲ್ಲಿ ಅತಿ ಕಡಿಮೆ, ಹಾಸನ ಜಿಲ್ಲೆಯು ಮೊದಲನೇ ಸ್ಥಾನದಲ್ಲಿದೆ. ಮೈಸೂರು ೧೬,೭೮೯, ದಕ್ಷಿಣ ಕನ್ನಡ ೨೨,೧೬೯, ಮಂಡ್ಯ ೧೮,೭೧೪, ಚಿಕ್ಕಮಗಳೂರು ೯,೦೨೧, ಚಾಮರಾಜನಗರ ೩,೩೩೩, ಕೊಡಗು ೪,೪೬೫, ಹಾಸನ ೨೩,೫೨೬, ಉಡುಪಿ ಜಿಲ್ಲೆ ೯,೫೪೬ ಸೇರಿದಂತೆ ೧,೦೭,೫೬೩ ಪ್ರಕರಣ ದಾಖಲಾಗಿದ್ದರೆ, ನಾಲ್ಕು ಮರಣ ಪ್ರಕರಣಗಳು ಸಂಭವಿಸಿವೆ.
ಹಾವು ಕಡಿತಕೆ ೨೩ ಬಲಿ
ಹಾವುಗಳ ಕಡಿತದಿಂದ ಪಾರು ಮಾಡಲು ಚಿಕಿತ್ಸೆ ನೀಡಿದರೂ ಗ್ರಾಮಾಂತರ ಪ್ರದೇಶದ ಹೊಲಗದ್ದೆಗಳಲ್ಲಿ ಹಾವು ಕಚ್ಚುವಿಕೆಯಿಂದ ಈ ವರ್ಷ ೨೩ ಮರಣ ಪ್ರಕರಣಗಳು ದಾಖಲಾಗಿವೆ. ಮೈಸೂರು ೬೪೨, ದಕ್ಷಿಣ ಕನ್ನಡ ೬೩೪, ಮಂಡ್ಯ ೬೬೪, ಚಿಕ್ಕಮಗಳೂರು ೪೯೬, ಚಾಮರಾಜನಗರ ೩೪೯, ಕೊಡಗು ೧೭೫, ಹಾಸನ ೭೪೧, ಉಡುಪಿ ಜಿಲ್ಲೆ ೩೮೮ ಸೇರಿದಂತೆ ೪,೦೮೯ ಹಾವು ಕಡಿತ ಪ್ರಕರಣಗಳು ದಾಖಲಾಗಿದ್ದು, ೪,೦೮೪ ಮಂದಿಗೆ ಚಿಕಿತ್ಸೆ ನೀಡಲಾಗಿದೆ. ೨೩ ಮಂದಿ ಸಾವನ್ನಪ್ಪಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣ ಸಂಭವಿಸಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ.
–ಕೆ. ಬಿ. ರಮೇಶ್ ನಾಯಕ





