Mysore
26
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಡಿಸಿ ಎಚ್ಚರಿಕೆ; ರಸ್ತೆಗೆ ಮತ್ತೊಮ್ಮೆ ಡಾಂಬರೀಕರಣ

ಮಂಜು ಕೋಟೆ

ಕೋಟೆ: ನಗರೋತ್ಥಾನ ಯೋಜನೆಯಡಿ ಅಸಮರ್ಪಕವಾಗಿ ನಡೆದಿದ್ದ ಕಾಮಗಾರಿ

ಎಚ್.ಡಿ.ಕೋಟೆ: ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ನಡೆದಿದ್ದ ರಸ್ತೆ ಕಾಮಗಾರಿಗಳು ಸಮರ್ಪಕವಾಗಿಲ್ಲದ ಬಗ್ಗೆ ಜಿಲ್ಲಾಧಿಕಾರಿಗಳು ನೀಡಿದ ಎಚ್ಚರಿಕೆಯಿಂದ ಎಚ್ಚೆತ್ತ ಗುತ್ತಿಗೆದಾರರು ಮತ್ತು ಅಽಕಾರಿಗಳು ಮತ್ತೊಮ್ಮೆ ರಸ್ತೆ ಕಾಮಗಾರಿಯ ದುರಸ್ತಿಯನ್ನು ನಡೆಸಿದ ಘಟನೆ ನಡೆದಿದೆ.

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಒದಗಿಸುವಲ್ಲಿ ಮತ್ತು ಅಭಿವೃದ್ಧಿ ಕೆಲಸ ನಡೆಸುವಲ್ಲಿ, ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಹಿಂದೆ ಇದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಬರುವ ಅಲ್ಪ ಸ್ವಲ್ಪ ಅನುದಾನದಲ್ಲೂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ನಿರ್ವಹಿಸದೆ ನಿರ್ಲಕ್ಷಿಸುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು

ಮೂರು ತಿಂಗಳ ಹಿಂದೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿರವರು ಪಟ್ಟಣದ ವ್ಯಾಪ್ತಿಯ ವಾರ್ಡುಗಳಲ್ಲಿ ನಡೆದಿರುವ ನಗರೋತ್ಥಾನ ಯೋಜನೆಯಡಿ ಕೋಟ್ಯಂತರ ರೂ. ವೆಚ್ಚದ ಡಾಂಬರೀಕರಣ ಮತ್ತು ಸಿಸಿ ರಸ್ತೆಗಳ ಕಾಮಗಾರಿಗಳನ್ನು ಅಽಕಾರಿಗಳ ತಂಡದೊಂದಿಗೆ ಪರಿಶೀಲಿಸಿದಾಗ ಸಮರ್ಪಕವಾಗಿ ಕಾಮಗಾರಿ ನಡೆಯದಿರುವುದು ಬೆಳಕಿಗೆ ಬಂದಿತ್ತು.

ತಕ್ಷಣ ಕಾಮಗಾರಿಗಳನ್ನು ನೋಡಿಕೊಳ್ಳಬೇಕಾಗಿದ್ದ ಇಂಜಿನಿಯರ್ ಸುರೇಶ್ ಅವರನ್ನು ಅಮಾನತ್ತುಗೊಳಿಸಿ ಗುತ್ತಿಗೆದಾರರಿಗೆ ಕಾಮಗಾರಿಯ ಬಿಲ್‌ಅನ್ನು ತಡೆಹಿಡಿಯಲಾಗಿತ್ತು. ಕ್ಯಾಡ್ ಸಂಸ್ಥೆಯ ಪಿಎಂಸಿ ಚೇತನ್ ಮತ್ತು ಮಸ್ತಿ ಉಲ್ಲಾ ಇಇ ನರಸು ಕಾರಂತ್, ಸಹಾಯಕ ಅಭಿಯಂತರ ಮಂಜುನಾಥ್, ಪಿಡಿ ಪ್ರಿಯದರ್ಶಿನಿ ಮತ್ತಿತರರು ಪುರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳನ್ನು ಮತ್ತೊಮ್ಮೆ ೪-೫ ಬಾರಿ ಪರಿಶೀಲಿಸಿ ಉಂಟಾಗಿರುವ ಲೋಪವನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರು.

ಪಟ್ಟಣದ ಹೌಸಿಂಗ್ ಬೋರ್ಡ್, ಸಿದ್ದಪ್ಪಾಜಿ ರಸ್ತೆ, ಜೂನಿಗೇರಿ ಬೀದಿ, ಚಾಕಹಳ್ಳಿ ವ್ಯಾಪ್ತಿಯ ಆರು ರಸ್ತೆಗಳಿಗೆ ಮತ್ತೊಮ್ಮೆ ಗುತ್ತಿಗೆದಾರರು ಅಧಿಕಾರಿಗಳ ಸಮ್ಮುಖದಲ್ಲಿ ಡಾಂಬರೀಕರಣ ಮಾಡಿದ್ದಾರೆ. ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ತಮ್ಮ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿದಾಗ ಮಾತ್ರ ಹಿಂದುಳಿದಿರುವ ಪಟ್ಟಣ ಅಭಿವೃದ್ಧಿಯತ್ತ ಸಾಗಬಹುದು ಎನ್ನುವುದು ಜನರ ಅನಿಸಿಕೆಯಾಗಿದೆ.

” ಕೋಟೆ ಪುರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿದಾಗ ಕಾಮಗಾರಿಯು ಸಮರ್ಪಕವಾಗಿ ಇಲ್ಲದಿರುವುದು ತಿಳಿದುಬಂದಿತ್ತು. ಕ್ರಿಯಾ ಯೋಜನೆಯಂತೆ ಸರ್ಕಾರದ ಅನುದಾನದಲ್ಲಿ ಸಮರ್ಪಕವಾಗಿ ಕಾಮಗಾರಿ ನಡೆಯಬೇಕೆಂಬುದು ನನ್ನ ಉದ್ದೇಶವಾಗಿದೆ. ಹೀಗಾಗಿ ತಪ್ಪಿತಸ್ಥರನ್ನು ಅಮಾನತ್ತು ಮಾಡಲಾಗಿದೆ. ಸಮರ್ಪಕವಾಗಿ ಕೆಲಸ ನಿರ್ವಹಿಸಲು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದರಿಂದ ರಸ್ತೆಯ ಕಾಮಗಾರಿಯ ಮತ್ತೊಮ್ಮೆ ನಡೆಯಲು ಸಾಧ್ಯವಾಗಿದೆ”.

-ಜಿ. ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾಧಿಕಾರಿ

Tags:
error: Content is protected !!