ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ
ಬೇರೆಬೇರೆ ಆಂಗಲ್ಗಳಲ್ಲಿ ಸರಣಿ ಫೋಟೋಗಳ ಸೆರೆ ಪಟ್ಟಣಗೆರೆ ಶೆಡ್ನಲ್ಲಿ ಮಹಜರ್ ಮಾಡುವಾಗ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ರೇಣುಕಾಸ್ವಾಮಿಯ ಶವ ಮಲಗಿಸಿದ್ದ ರೂಮಿನಲ್ಲಿ ಬೇರೆಬೇರೆ ಆಂಗಲ್ಗಳಲ್ಲಿ ೧೨ ಫೋಟೋಗಳನ್ನು ತೆಗೆಸಿದರು. ಕೃತ್ಯ ನಡೆದ ಸ್ಥಳದಲ್ಲಿ ಮಹಜರ್ ಮಾಡುವಾಗ ಫೋಟೋಗಳನ್ನು ತೆಗೆಯಲಾಯಿತು. ರೇಣುಕಾಸ್ವಾಮಿಯ ಮೃತದೇಹವನ್ನು ಮನೆಯ ಒಳಗೆ ಇಟ್ಟ ಜಾಗ ಅದಾಗಿತ್ತು.
ಅದೇ ಜಾಗದಲ್ಲಿ ರೇಣುಕಾಸ್ವಾಮಿಗೆ ಹೊಡೆಯಲುಮ ಉಪಯೋಗಿಸಿದ ಮರದ ರೆಂಬೆಯ ತುಂಡು ಬಿದ್ದಿದ್ದ ಜಾಗದಲ್ಲಿ ೨ ಫೋಟೋ ತೆಗೆಸಿದರು. ಮತ್ತದೇ ಜಾಗದಲ್ಲಿ ರೇಣುಕಾಸ್ವಾಮಿಗೆ ಹೊಡೆಯಲು ಉಪಯೋಗಿಸಿದ ಲಾಠಿ ಬಿದ್ದದ್ದನ್ನು ೨ ಫೋಟೋ ತೆಗೆಸಿದರು. ಅಶೋಕ್ ಲೈಲ್ಯಾಂಡ್ ಲಾರಿಗೆ ರೇಣುಕಾಸ್ವಾಮಿಯನ್ನು ಅವನ ಬನಿಯನ್ನೊಂದಿಗೆ ನೇತುಹಾಕಲು ಪ್ರಯತ್ನಿಸಿದಾಗ, ಆತ ಕೆಳಗೆ ಬಿದ್ದು, ತಲೆ ಬಂಪರ್ಗೆ ಹೊಡೆದು ರಕ್ತ ಬಿದ್ದಿತ್ತು. ಆ ಬಂಪರ್ಗೆ ಅಂಟಿಕೊಂಡಿದ್ದ ರಕ್ತದ ಸ್ಯಾಂಪಲ್ ಅನ್ನು ಎಫ್ಎಸ್ಎಲ್ ಟೀಂ ಸಂಗ್ರಹಿಸುತ್ತಿದ್ದಾಗ ಮಹಜರ್ ಮಾಡಲು ಬಂದ ಇಬ್ಬರು ಸಾಕ್ಷಿದಾರರು, ಪೊಲೀಸ್ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ, ಎ-ಎಸ್ಎಲ್ ಟೀಂ ಮೂವರು ಅಧಿಕಾರಿಗಳು ಸೇರಿದಂತೆ ಒಂದು ಫೋಟೋ ತೆಗೆಸಿದರು.
ಕೃತ್ಯಕ್ಕೆ ಸಂಬಂಧಿಸಿದಂತೆ ನಾವೆಲ್ಲ ತೋರಿಸಿದ ವಸ್ತುಗಳನ್ನು (ಲಾಠಿ, ಮರದ ರೆಂಬೆಗಳು, ಖಾಲಿ ನೀರಿನ ಬಾಟಲ್ಗಳು, ಮಣ್ಣು, ನೈಲಾನ್ ಹಗ್ಗ) ಬಟ್ಟೆಯಲ್ಲಿ ಸೀಲ್ ಮಾಡಿ ಜೋಡಿಸಿಡುವಾಗ ಒಂದು ಫೋಟೋ ತೆಗೆಸಿದರು.
ಇದಾದ ನಂತರ ನಾಗರಾಜ್ ಒಬ್ಬರನ್ನು ಹೊರತುಪಡಿಸಿ, ಉಳಿದ ನಮ್ಮನ್ನೆಲ್ಲ (ದರ್ಶನ್, ಪವಿತ್ರಾ ಗೌಡ, ಪ್ರದೋಷ್, ರಾಘವೇಂದ್ರ, ಲಕ್ಷ್ಮಣ್, ವಿನಯ್, ಪವನ್, ನಂದೀಶ್ ಮತ್ತು ದೀಪಕ್) ಪೊಲೀಸ್ ಸ್ಟೇಷನ್ಗೆ ವಾಪಸ್ ಕರೆದುಕೊಂಡು ಬಂದರು.
ಸ್ಕಾರ್ಪಿಯೋ ಕಾರು, ಜೀಪ್ ಮಹಜರ್ಗೆ ಕರೆದೊಯ್ದ ಟೀಂ:
೧೩.೦೬.೨೦೨೪ರಂದು ನನ್ನ ಸ್ವಇಚ್ಛಾ ಹೇಳಿಕೆಯನ್ನು ಪೊಲೀಸರು ಎರಡನೇ ಬಾರಿಗೆ ಪಡೆದುಕೊಂಡರು. ಅದೇ ದಿನ ರಾತ್ರಿ ನಾನು ಸ್ಟೇಷನ್ನಲ್ಲಿ ಇದ್ದಾಗ ೯ರಿಂದ ೧೦ ಗಂಟೆ ಸುಮಾರಿಗೆ ಒಬ್ಬರು ಪೊಲೀಸ್ ನಿರೀಕ್ಷಕರು ಬಂದು ನನ್ನ ಸ್ಕಾರ್ಪಿಯೋ ಕಾರು ಮತ್ತು ವಿನಯ್ ಅವರ ಜೀಪ್ ಅನ್ನು ಮಹಜರ್ ಮಾಡಬೇಕು ಎಂದು ತಿಳಿಸಿದರು. ಅವರೊಂದಿಗೆ ಇಬ್ಬರು ಮಹಜರ್ ಸಾಕ್ಷಿದಾರರು ಬಂದಿದ್ದರು.
ನಂತರ ಪೊಲೀಸರು ನಾನು(ಪ್ರದೋಷ್), ವಿನಯ್, ದೀಪಕ್, ನಾಗರಾಜ್, ಲಕ್ಷ್ಮಣ್, ನಂದೀಶ್ ಮತ್ತು ಪವನ್ ಅವರನ್ನುಕರೆದುಕೊಂಡು ಮಾಗಡಿ ರೋಡ್ ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಹೋದರು. ಆ ಸಮಯದಲ್ಲಿ ಎಫ್ಎಸ್ ಎಲ್ ಟೀಮ್ ಮತ್ತು ಫಿಂಗರ್ ಪ್ರಿಂಟ್ಸ್ ಟೀಮ್ ಕೂಡ ಬಂದಿದ್ದವು.
ಸ್ಕಾರ್ಪಿಯೋ ಕಾರಿನಲ್ಲಿ ಕೂದಲಿನ ಎಳೆ ಸಂಗ್ರಹ: ಮಾಗಡಿರೋಡ್ ಪೊಲೀಸ್ ಠಾಣೆಗೆ ಹೋದಾಗ, ಎಫ್ಎಸ್ಎಲ್ ಟೀಮ್ನವರು ನನ್ನ ಸ್ಕಾರ್ಪಿಯೋ(KA01-MG-7375) ಕಾರಿನಲ್ಲಿ ಡ್ರೈವಿಂಗ್ ಸೀಟು ಮತ್ತು ಅದರ ಹಿಂದಿನ ಸೀಟುಗಳಿಂದ ಕೂದಲಿನ ಎಳೆಗಳನ್ನು ಸಂಗ್ರಹಿಸಿದರು. ನಂತರ ನನ್ನ ಕಾರಿನಲ್ಲಿ ಇದ್ದ After Dark ಕಂಪೆನಿಯ ಒಂದು ಪರ್ ಫ್ಯೂಮ್ ಬಾಟಲ್ ಅನ್ನೂ ಸಂಗ್ರಹಿಸಿದರು. ಕಾರಿನಲ್ಲಿ ಎರಡು ನೀರಿನ ಬಾಟಲ್ಗಳು ಇದ್ದವು ಅವುಗಳನ್ನು ತೆಗೆದುಕೊಂಡು, ಅದರಲ್ಲಿದ್ದ ನೀರನ್ನು ಚೆಲ್ಲಿ, ಖಾಲಿ ಬಾಟಲ್ಗಳನ್ನು ಮಾತ್ರ ತೆಗೆದುಕೊಂಡರು.
ಅದೇ ಸಮಯದಲ್ಲಿ ಫಿಂಗರ್ ಪ್ರಿಂಟ್ಸ್ ಟೀಮ್ನವರು ನನ್ನ ಕಾರಿನ ಡ್ರೈವಿಂಗ್ ಸೀಟು, ಅದರ ಪಕ್ಕದ ಸೀಟು ಮತ್ತು ಕಾರಿನ ಡೋರ್ಗಳ ಹತ್ತಿರ ಚೆಕ್ ಮಾಡುತ್ತಿದ್ದರು.
ಸ್ಕಾಚ್ ವಿಸ್ಕಿ ಬಾಟಲ್, ಲೈಟರ್; ಸೀಜ್ ಆದ ವಿನಯ್ ಜೀಪ್ನ ಮಹಜರ್: ನಂತರ ಫಿಂಗರ್ಪ್ರಿಂಟ್ಸ್ ಟೀಮ್ನವರು ವಿನಯ್ ಅವರ ಜೀಪ್ನಲ್ಲಿ (ಓಅ೦೪ಘೆಅ೦೦೦೬) ಡ್ರೈವಿಂಗ್ ಸೀಟು ಹಾಗೂ ಪಕ್ಕದ ಸೀಟುಗಳಲ್ಲಿ ಚೆಕ್ ಮಾಡುತ್ತಿದ್ದರು. ಎಫ್ಎಸ್ಎಲ್ ಟೀಮ್ನವರು ಜೀಪ್ನ ಸೀಟುಗಳಲ್ಲಿ ಇದ್ದ ಕೂದಲಿನ ಎಳೆಗಳನ್ನು ಸಂಗ್ರಹಿಸಿರುತ್ತಾರೆ. ಅದೇ ಜೀಪ್ನಲ್ಲಿ ಒಂದು ಸಿಗರೇಟ್ ಲೈಟರ್, ಚಿವಾಸ್ ರೀಗಲ್ ಸ್ಕಾಚ್ ವಿಸ್ಕಿಯ ಒಂದು ಬಾಟಲ್ ಇತ್ತು.
ಅವರೆಡನ್ನೂ ಸೀಜ್ ಮಾಡಿದರು. ಅಲ್ಲದೆ ಒಂದೆರಡು ನೀರಿನ ಬಾಟಲ್ಗಳು ಇದ್ದವು, ಅವುಗಳಲ್ಲಿ ಇದ್ದ ನೀರನ್ನು ಚೆಲ್ಲಿ ಖಾಲಿ ಬಾಟಲ್ಗಳನ್ನು ತೆಗೆದುಕೊಂಡರು. ಅಲ್ಲಿ ಇದ್ದ ಮಹಜರ್ ಸಾಕ್ಷಿದಾರರು ಇದನ್ನೆಲ್ಲ ಹೇಳಿ, ಒಬ್ಬರಿಂದ ಲ್ಯಾಪ್ಟಾಪ್ನಲ್ಲಿ ಟೈಪ್ ಮಾಡಿಸಿದರು. ಈ ಎಲ್ಲ ಮಹಜರ್ ಪ್ರಕ್ರಿಯೆಯನ್ನು ಫೋಟೋ ತೆಗೆಸಿದರು.
ವಿನಯ್ ಅವರ ಜೀಪಿನ ಮುಂದೆ ಎಡದಿಂದ ಬಲಕ್ಕೆ ನನ್ನನ್ನು ಕರೆದುಕೊಂಡು ಬಂದ ಪೊಲೀಸ್ ನಿರೀಕ್ಷಕರು, ಅವರ ಪಕ್ಕದಲ್ಲಿ ಇಬ್ಬರು ಮಹಜರ್ ಸಾಕ್ಷಿದಾರರು, ವಿನಯ್ ಮತ್ತು ದೀಪಕ್ ಅವರನ್ನು ನಿಲ್ಲಿಸಿಕೊಂಡು ಫೋಟೋ ತೆಗೆಸಿದರು. ಆ ಸಮಯದಲ್ಲಿ ಫಿಂಗರ್ ಪ್ರಿಂಟ್ಸ್ ಟೀಮ್ನವರು ಪೊಲೀಸ್ ಸಿಬ್ಬಂದಿಗೆ ಹೇಳಿ ಬೆರಳಚ್ಚು ಮಾಡಿಸುತ್ತಿದ್ದರು.
ನನ್ನ ಸ್ಕಾರ್ಪಿಯೋ ಕಾರಿನ ಮುಂದೆ ಲಕ್ಷ್ಮಣ್, ಅವರ ಪಕ್ಕದಲ್ಲಿ ನಾನು, ನನ್ನ ಪಕ್ಕದಲ್ಲಿ ನಂದೀಶ್, ನಾಗರಾಜ್, ಪವನ್ ಮತ್ತು ಪೊಲೀಸ್ ನಿರೀಕ್ಷಕರು ಹಾಗೂ ಅವರ ಪಕ್ಕದಲ್ಲಿ ಮಹಜರ್ ಸಾಕ್ಷಿದಾರರು ನಿಂತುಕೊಂಡು ಫೋಟೋ ತೆಗೆಸಿದರು. ಆ ಸಮಯದಲ್ಲಿ ಮಹಜರ್ ಸಾಕ್ಷಿದಾರರು ಅವರ ಪಕ್ಕದಲ್ಲಿ ನಿಂತಿದ್ದ ಪೊಲೀಸ್ ಸಿಬ್ಬಂದಿಗೆ ಹೇಳಿ ಬೆರಳಚ್ಚು ಮಾಡಿಸುತ್ತಿದ್ದರು.
ಅದಾದ ನಂತರ ನಮ್ಮನ್ನು ಮಧ್ಯರಾತ್ರಿ ೧೨ ಗಂಟೆ ಅಷ್ಟೊತ್ತಿಗೆ ಅನ್ನಪೂರ್ಣೇಶ್ವರಿ ಪೊಲೀಸ್ ಸ್ಟೇಷನ್ಗೆ ವಾಪಸ್ ಕರೆದುಕೊಂಡು ಹೋದರು. ನಂತರ ಮಹಜರ್ ಮಾಡಿದ ದಾಖಲೆಗಳಿಗೆ ನಮ್ಮ ಸಹಿ ಪಡೆದರು. (ನಂತರದ ದಿನಗಳಲ್ಲಿ ಪ್ರದೋಷ್ ನ್ಯಾಯಾಲಯದ ಆದೇಶ ತಂದು ತಮ್ಮ ಸ್ಕಾರ್ಪಿಯೋ ವಾಹನವನ್ನು ಬಿಡುಗಡೆ ಮಾಡಿಸಿಕೊಂಡರು) ೧೪.೦೬.೨೦೨೪ರಂದು ಮಧ್ಯಾಹ್ನ ೧೨ ಗಂಟೆಯಷ್ಟೊತ್ತಿಗೆ ಅನ್ನಪೂರ್ಣೇಶ್ವರಿ ಸ್ಟೇಷನ್ನ ಪೊಲೀಸ್ ಅಧೀಕ್ಷಕರು ನನ್ನನ್ನು ಮುಂದಿನ ತನಿಖೆಗಾಗಿ ಕರೆದರು.




