Mysore
25
haze

Social Media

ಗುರುವಾರ, 29 ಜನವರಿ 2026
Light
Dark

ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರಿಗೆ ಸಂಕಷ್ಟ

ಲಕ್ಷ್ಮಿಕಾಂತ್ ಕೊಮಾರಪ್ಪ

ಹೂವು ಅರಳುತ್ತಿರುವುದರಿಂದ ಕಾಫಿ ಕೊಯ್ಲಿಗೆ ಅಡ್ಡಿ; ಹೆಚ್ಚುವರಿ ಕಾರ್ಮಿಕ ವೆಚ್ಚವನ್ನು ಭರಿಸಬೇಕಾದ ಅನಿವಾರ್ಯತೆ

ಸೋಮವಾರಪೇಟೆ: ತಾಲ್ಲೂಕಿನ ಗ್ರಾಮೀಣ, ನಗರ ಭಾಗಗಳಲ್ಲಿ ಕಳೆದ ವಾರ ಸುರಿದವರ್ಷಧಾರೆಯಿಂದ ಕಾಫಿ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದು, ಗಿಡಗಳಲ್ಲಿ ಹೂವು ಅರಳುತ್ತಿ ರುವುದರಿಂದ ಕಾಫಿ ಕೊಯ್ಲು ಮಾಡಲು ಸಾಧ್ಯವಾಗದೆ ನಷ್ಟ ಅನುಭವಿಸುತ್ತಿದ್ದಾರೆ.

ಕೊಡಗು ಮತ್ತು ಹಾಸನ ಜಿಲ್ಲೆಯಲ್ಲಿ ಕಾಫಿ ಕುಯ್ಲು ಕಾಲದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಹೂ ಅರಳಿದ್ದು, ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಹೂವು ಅರಳಿರುವುದರಿಂದ ಕೊಯ್ಲು ಕಾರ್ಯ ಸುಮಾರು ಹದಿನೈದು ದಿನಗಳವರೆಗೆ ವಿಸ್ತರಿಸಬಹುದು. ಇದ ರಿಂದ ರೈತರು ಹೆಚ್ಚುವರಿ ಕಾರ್ಮಿಕ ವೆಚ್ಚವನ್ನು ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಅಕಾಲಿಕ ಮಳೆಯಿಂದ ಕೊಡಗಿನ ಸೋಮವಾರಪೇಟೆ, ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು, ಆಲೂರು ತಾಲ್ಲೂಕುಗಳ ಕಾಫಿ ತೋಟಗಳಲ್ಲಿ ಶೇ.೪೦ ಭಾಗದಷ್ಟು ಹೂ ಅರಳಿದ್ದು, ಬೆಳಗಾರರು ಕಾಫಿ ಕುಯ್ಲನ್ನು ವಿಳಂಬ ಮಾಡುತ್ತಿದ್ದಾರೆ. ಅಕಾಲಿಕ ಮಳೆಯಿಂದ ಕಾಫಿ ಗಿಡಗಳಲ್ಲಿ ಅವಧಿಗೆ ಮುನ್ನವೇ ಮೊಗ್ಗು ಅರಳಿದ್ದು, ರೈತರು ಕೊಯ್ಲು ಮಾಡಲು ಸಾಧ್ಯವಾಗದೆ ದಿನ ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನವರಿಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಕಾಫಿ ಗಿಡಗಳಲ್ಲಿ ಕಾಯಿ ಬೇಗನೆ ಹಣ್ಣಾಗುತ್ತಿವೆ. ಜೊತೆಗೆ ಮಳೆಯಿಂದ ಕಾಫಿ ಹಣ್ಣು ಉದುರಿ ನಷ್ಟವಾಗುತ್ತಿದೆ. ಗಿಡಗಳಿಗೆ ರೋಗ ಭೀತಿಯೂ ಎದುರಾಗಿದ್ದು, ಉದುರಿದ ಹಣ್ಣನ್ನು ಅಲ್ಲಿಯೇ ಬಿಟ್ಟರೆ ಗಿಡಗಳಿಗೆ ಬೆರಿ ಬೋರರ್ ಸಮಸ್ಯೆ ತಗುಲುವ ಸಾಧ್ಯತೆಯೂ ಇದೆ.

ಕಾಫಿ ಬೆಳೆಯಲ್ಲಿ ಹೂವಿನ ಪಾತ್ರ ಮಹತ್ವದಾಗಿದೆ. ವಾರ್ಷಿಕ ಬೆಳೆಯಾದ ಕಾಫಿ ತೋಟದಲ್ಲಿ ಪ್ರತಿ ವರ್ಷ ಬೆಳೆಗಾರರು ಜನವರಿ, ಫೆಬ್ರವರಿ ತಿಂಗಳಲ್ಲಿ ಕುಯ್ಲು ಮಾಡಿ ಏಪ್ರಿಲ್ ನಂತರ ಮಳೆ ಬಾರದಿದ್ದರೆ ಕೃತಕವಾಗಿ ಸ್ಪಿಂಕ್ಲರ್ ಮೂಲಕ ನೀರು ಸಿಂಪಡಿಸುತ್ತಾರೆ. ಇದರಿಂದ ಮುಂದಿನ ವರ್ಷದ ಫಸಲು ಉತ್ತಮವಾಗುತ್ತದೆ. ಆದರೆ ಇದೀಗ ಇತ್ತೀಚೆಗೆಸುರಿದ ಅಕಾಲಿಕ ಮಳೆಯಿಂದ ಕೆಲವೆಡೆ ಕಾಫಿ ಹೂವು ಸರಿಯಾಗಿ ಅರಳದೆ ನಷ್ಟವಾಗಿದ್ದು, ಇದು ಮುಂದಿನ ವರ್ಷ ಕಾಫಿ ಫಸಲಿನ ಮೇಲೆ ಪರಿಣಾಮ ಬೀರಲಿದೆ.

ಕೆಲ ಕಾರ್ಮಿಕರು ತಮಿಳುನಾಡು, ದಾವಣಗೆರೆ ಭಾಗದಿಂದ ಮಲೆನಾಡಿಗೆ ಬಂದಿದ್ದು, ಈ ಕಾರ್ಮಿಕರಿಗೆ ವಸತಿ ಆಹಾರದ ವ್ಯವಸ್ಥೆ ಕಾಫಿ ಬೆಳಗಾರರ ವ್ಯವಸ್ಥೆ ಮಾಡಬೇಕಿದೆ. ದಿನದಿಂದ ದಿನಕ್ಕೆ ಹಾವು ಏಣಿ ಆಟದಂತೆ ಕಾಫಿ ದರ ಏರಿಳಿಕೆ ಕಾಣುತ್ತಿದ್ದು, ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಕಾರ್ಮಿಕರು ದುಬಾರಿ ಬೆಲೆ ಕೇಳುತ್ತಿದ್ದಾರೆ. ಒಂದು ಕೆಜಿ ಕಾಫಿ ಕೊಯ್ಲಿಗೆ ಆರರಿಂದ ಎಂಟು ರೂ.ವರೆಗೆ ದರ ನಿಗದಿಪಡಿಸುತ್ತಿದ್ದು, ಕಾರ್ಮಿಕರಿಗೆ ಕೆಲಸ ನೀಡಲು ಸಾಧ್ಯವಾಗದೆ ಅವರು ತಮ್ಮ ಊರಿಗೆ ಹೋದರೆ ಬೆಳೆಗಾರರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಕಾಡು ಬೆಕ್ಕುಗಳ ಪಾಲಾಗುತ್ತಿರುವ ಕಾಫಿ ಹಣ್ಣು…: 

ಮಲೆನಾಡು ಪಶ್ಚಿಮಘಟ್ಟ ಭಾಗದಲ್ಲಿ ಕಂಡು ಬರುವ ಕಾಡುಬೆಕ್ಕು ಕಾಫಿ ಹಣ್ಣುಗಳನ್ನು ಇಷ್ಟಪಡುವುದು ಸಾಮಾನ್ಯ. ಆದರೆ ಈ ವರ್ಷ ಕಾಫಿ ಕುಯ್ಲು ವಿಳಂಬವಾಗಿರುವುದರಿಂದ ಗಿಡದಲ್ಲಿರುವ ಕಾಫಿ ಹಣ್ಣುಗಲ್ಲಾ  ಕಾಡುಬೆಕ್ಕುಗಳ ಪಾಲಾಗುತ್ತಿವೆ. ಇದು ಬೆಳೆಗಾರರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

” ಅಕಾಲಿಕ ಮಳೆಯಿಂದಕಾಫಿ ಗಿಡಗಳಲ್ಲಿ ಅವಧಿಗೆ ಮುನ್ನವೇ ಮೊಗ್ಗು ಅರಳುತ್ತಿದೆ. ಜನವರಿಯಲ್ಲಿ ಬಂದ ಅಕಾಲಿಕ ಮಳೆಯಿಂದ ಹೂ ಅರಳಿ ಕಾಫಿ ಗಿಡಗಳಲ್ಲಿ ಕಾಫಿ ಕಾಯಿ ಬೇಗನೆ ಹಣ್ಣಾಗುತ್ತಿದೆ. ಮಳೆಯಿಂದ ಗಿಡಗಳಲ್ಲಿ ರೋಗ ಭೀತಿ ಉಂಟಾಗಿದೆ. ಅಕಾಲಿಕ ಮಳೆ ಹಾಗೂ ಬಿಸಿಲಿನಿಂದ ಗಿಡಗಳಿಗೆ ಬೆರಿ ಬೋರರ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

-ಹಿರಿಕರ ರಮೇಶ್, ಕಾಫಿ ಬೆಳೆಗಾರರು,

” ಸೋಮವಾರಪೇಟೆ ಮತ್ತು ಸಕಲೇಶಪುರ ಭಾಗದ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆ ಬೀಳುತ್ತಿರುವು ದರಿಂದ ಕಾಫಿ ತೋಟದಲ್ಲಿ ಹೂ ಅರಳಿದೆ. ಇದು ಕೊಯ್ಲಿಗೆ ತೊಂದರೆ ಉಂಟು ಮಾಡಿದೆ. ಕೆಲವು ಗಿಡಗಳಲ್ಲಿ ಕಾಫಿ ಹಣ್ಣು ಉದುರುತ್ತಿದೆ. ವನ್ಯಪ್ರಾಣಿಗಳ ಉಪಟಳ, ಕಾರ್ಮಿಕರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ನಡುವೆಯೂ ಕೃಷಿ ಮಾಡಿದ್ದ ಬೆಳೆಗಾರರು ಈಗ ನಷ್ಟ ಅನುಭವಿಸುವಂತಾಗಿದೆ.”

 -ಶ್ರೀಕಾಂತ್ ಪಾಲಳ್ಳಿ, ಕಾಫಿ ಬೆಳೆಗಾರರು, ಸಕಲೇಶಪುರ 

 

 

Tags:
error: Content is protected !!