ಕೆ. ಬಿ. ರಮೇಶನಾಯಕ
ಮೈಸೂರು: ಮಹಿಳಾ ಸಂಘಗಳಿಗೆ ಉತ್ತೇಜನ ನೀಡಿ ಅವುಗಳ ಆರ್ಥಿಕ ಪರಿಸ್ಥಿತಿಯನ್ನು ಬಲ ಪಡಿಸುವ ಜತೆಗೆ ಬಡ, ಮಧ್ಯಮ ವರ್ಗದವರಿಗೆ ಗುಣ ಮಟ್ಟದ ಶುಚಿ-ರುಚಿಯಾದ ಪೌಷ್ಟಿಕ ಆಹಾರ ವನ್ನು ಕೈಗೆಟುಕುವ ದರದಲ್ಲಿ ಪೂರೈಸಲು ಶೀಘ್ರ ದಲ್ಲೇ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಯಲ್ಲಿ ‘ಅಕ್ಕ ಕೆ-’ಯನ್ನು ಆರಂಭಿಸಲಾಗುತ್ತದೆ.
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಎರಡು ಸ್ಥಳಗಳಲ್ಲಿ ಕೆ- ಆರಂಭಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಇನ್ನೆರಡು ಪ್ರಸ್ತಾವನೆಗಳು ಅನುಮೋದನೆಗೆ ಕಾದಿವೆ. ಹಂತ ಹಂತವಾಗಿ ಬೇಡಿಕೆ ಇರುವ ಸ್ಥಳಗಳಲ್ಲಿ ತೆರೆಯಲು ಜಿಪಂ ಮುಂದಾಗಿದೆ.
ಅಕ್ಕ ಕೆಫೆ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಮಹಿಳಾ ಸ್ವಸಹಾಯ ಸಂಘಗಳಿಗೆ ಆಹಾರ ಪೂರೈಕೆ ಕ್ಷೇತ್ರದಲ್ಲಿ ಸುಸ್ಥಿರ ಜೀವನೋಪಾಯ ಚಟು ವಟಕೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ.
ಮಹಿಳೆಯರೇ ತಮ್ಮ ಜ್ಞಾನ ಮತ್ತು ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಂಡು ಜೀವನೋಪಾಯದೊಂದಿಗೆ ಸಬಲೀಕರಣದ ಬದುಕನ್ನು ರೂಪಿಸಿಕೊಳ್ಳಲು ನೆರವಾಗುವಂತೆ ಮಹಿಳಾ ಸ್ವಸಹಾಯ ಸಂಘಗಳಿಗೆ ಸಂಪೂರ್ಣ ಹೊಣೆ ನೀಡಲಾಗಿದೆ.
ಶೀಘ್ರ ಒಂದು ಪ್ರೀಮಿಯಂ, ಒಂದು ಕ್ಲಾಸಿಕ್ ಕೆಫೆ: ಮೈಸೂರು ಜಿಲ್ಲೆಗೆ ಎರಡು ಕೆ-ಗಳು ಅನುಮೋದನೆಗೊಂಡಿವೆ. ಮೈಸೂರು-ಮಡಿಕೇರಿ ಹೆದ್ದಾರಿಯ ಬೀಜಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಗೆರೆ ಗ್ರಾಮದಲ್ಲಿ ಪ್ರೀಮಿಯಂ ರೆಸ್ಟೋರೆಂಟ್, ಬೆಂಗಳೂರು-ಮಂಗಳೂರು ರಸ್ತೆಯ ಕಂಪಲಾಪುರ ಕೆಎಸ್‌ಆರ್‌ಟಿಸಿ ಬಸ್ ತಂಗುದಾಣದ ಹತ್ತಿರ ಕಿರು ಅಕ್ಕ ಕೆ-(ಕ್ಲಾಸಿಕ್) ತೆರೆಯಲಾಗುತ್ತಿದ್ದು, ಬೆಟ್ಟದಪುರದ ಶಾಂತವಿರಾಮ ದೇವಸ್ಥಾನದ ಬಳಿ ಮತ್ತು ಮೈಸೂರು ತಾಪಂ ಕಚೇರಿ ಆವರಣದಲ್ಲಿ ಕಿರು ಅಕ್ಕ ಕೆಫೆ(ಕ್ಲಾಸಿಕ್) ತೆರೆಯಲು ಸಲ್ಲಿಸಿರುವ ಪ್ರಸ್ತಾಪನೆಗೆ ಅನುಮೋದನೆ ನಿರೀಕ್ಷಿಸಲಾಗಿದೆ. ಅದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವರ ಸ್ವಕ್ಷೇತ್ರ ತಿ. ನರಸೀಪುರ ಪಟ್ಟಣ, ಬನ್ನೂರು ಪಟ್ಟಣ, ಎಚ್. ಡಿ. ಕೋಟೆ, ನಂಜನಗೂಡು ಪಟ್ಟಣದಲ್ಲೂ ಪ್ರೀಮಿಯಂ ರೆಸ್ಟೋರೆಂಟ್ ತೆರೆಯಲು ಚಿಂತನೆ ನಡೆಸಲಾಗಿದೆ. ಅತಿ ಹೆಚ್ಚಿನ ಕಾರ್ಮಿಕರು, ಜನಸಂದಣಿ ಇರುವ ಪ್ರದೇಶಗಳನ್ನೇ ಆಯ್ಕೆ ಮಾಡುವಂತೆ ಸರ್ಕಾರ ಸೂಚಿಸಿದ್ದು, ಹಂತ ಹಂತವಾಗಿ ಸರ್ಕಾರದ ಅನುಮೋದನೆ ಪಡೆಯಲಾಗುತ್ತದೆ.
ಸರ್ಕಾರದ ಅನುದಾನದಲ್ಲೇ ಕೆಫೆ: ಅಕ್ಕ ಕೆಫೆ ಸ್ಥಾಪನೆಗೆ ಆಯ್ಕೆಯಾಗುವ ಸ್ಥಳದ ಒಡೆತನ ಹಾಗೂ ಸ್ವಸಹಾಯ ಸಂಘಗಳ ನಡುವೆ ಒಡಂಬಡಿಕೆ ಮಾಡಿಕೊಳ್ಳಬೇಕಿದ್ದು, ಸರ್ಕಾರದ ಅನುದಾನದಲ್ಲೇ ಸಂಪೂರ್ಣ ಮೂಲ ಸೌಕರ್ಯವನ್ನು ಒದಗಿಸಲಾಗುತ್ತದೆ. ಪ್ರೀಮಿಯಂ ರೆಸ್ಟೋರೆಂಟ್‌ಗೆ ಸರ್ಕಾರ ೧೫ ಲಕ್ಷ ರೂ. , ಕ್ಲಾಸಿಕ್ ಕಿರು ಅಕ್ಕ ಕೆ-ಗೆ ೭ ಲಕ್ಷ ರೂ. ನೀಡಲಾಗುತ್ತದೆ. ಕೆ-ಯ ನವೀಕರಣ, ನೆಲಹಾಸು, ಗೋಡೆಗಳು ಮತ್ತು ಚಾವಣಿ, ಶೇಖರಣಾ ಕ್ಯಾಬಿನೆಟ್‌ಗಳು, ಕೊಳಾಯಿ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ, ರಶೀದಿ ಯಂತ್ರ ಖರೀದಿ, ಪೀಠೋಪಕರಣಗಳು, ಬ್ರ್ಯಾಂಡಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಕೆಫೆಗೆ ಬೇಕಾದ ವಸ್ತುಗಳಾದ ಪಾತ್ರೆಗಳು, ಓವನ್ಸ್, ಗ್ಯಾಸ್ ಸಿಲಿಂಡರ್, ಸ್ಟವ್, ಮಿಕ್ಸಿ, ಗ್ರೈಂಡರ್, ರೆಫ್ರಿಜರೇಟರ್ ಖರೀದಿಸಿಕೊಳ್ಳಬೇಕಿದೆ.
ಸದಸ್ಯರಿಂದಲೇ ನಿರ್ವಹಣೆ: ಅಕ್ಕ ಕೆಫೆಗಳಲ್ಲಿ ಗ್ರಾಹಕರಿಗೆ ಬೆಳಿಗ್ಗೆಯಿಂದ ರಾತ್ರಿಯ ತನಕ ಉತ್ತಮ ಗುಣಮಟ್ಟದ ತಿಂಡಿ, ಊಟವನ್ನು ಒದಗಿಸುವ ಜತೆಗೆ ಮಹಿಳಾ ಸದಸ್ಯರೇ ನಿರ್ವಹಣೆ ಮಾಡಬೇಕಿದೆ. ಸಂಘದ ಲೇಬಲ್ ವುಳ್ಳ ಉಡುಪುಗಳನ್ನು ಧರಿಸಿಕೊಂಡು ಅಡುಗೆ ತಯಾರಿಸುವುದು, ಸಪ್ಲೈ, ಕ್ಲೀನಿಂಗ್ ಮತ್ತಿತರ ಕಾರ್ಯವನ್ನು ನಿರ್ವಹಿಸಬೇಕು. ಸ್ಥಳೀಯ ಬೇಡಿಕೆಯ ಆಹಾರಗಳು, ರುಚಿಗೆ ಅನುಗುಣವಾಗಿ ಆಹಾರ ತಯಾರಿಕೆಯನ್ನು ಮಾಡುವುದು. ಬೆಳಿಗ್ಗೆ ಇಡ್ಲಿ, ವಡೆ, ಖಾರಾಬಾತ್, ಕೇಸರಿಬಾತ್, ಪೊಂಗಲ್, ಮಧ್ಯಾಹ್ನ ಮಿನಿಮೀಲ್ಸ್, ಚಪಾತಿ, ಮುದ್ದೆ ಊಟದ ಮೆನು ಇರುತ್ತದೆ.
ಸರ್ಕಾರಿ ಕಾರ್ಯಕ್ರಮಗಳಿಗೂ ಪೂರೈಕೆ: ಗ್ರಾಹಕರಿಗೆ ಉಣ ಬಡಿಸುವ ಜತೆಗೆ ಸರ್ಕಾರಿ ಸಭೆ, ಸಮಾರಂಭಗಳಿಗೂ ತಿಂಡಿ, ಊಟದ ವ್ಯವಸ್ಥೆ ಮಾಡಬೇಕಿದೆ. ನಿಗದಿಪಡಿಸಿದ ದರದಂತೆ ಪೂರೈಸಬೇಕಿದ್ದು, ಈಗಾಗಲೇ ಎರಡು-ಮೂರು ಸಂಘಗಳು ಜಿಪಂನಲ್ಲಿ ನಡೆದ ಸಭೆಗೆ ಆಹಾರ ಪೂರೈಸಿ ಮೆಚ್ಚುಗೆ ಪಡೆದಿವೆ. ಹಾಗಾಗಿ, ಶೀಘ್ರದಲ್ಲೇ ಸ್ವಸಹಾಯ ಸಂಘವನ್ನು ಆಯ್ಕೆ ಮಾಡಿ ಅಕ್ಕ ಕೆ-ಯ ಉಸ್ತುವಾರಿಯನ್ನು ನೀಡಲಾಗುತ್ತದೆ ಎಂದು ಅಽಕಾರಿಯೊಬ್ಬರು ಹೇಳಿದರು.
ಜಿಲ್ಲೆಯಲ್ಲಿ ‘ಅಕ್ಕ ಕೆಫೆ’ ತೆರೆಯಲು ರಾಜ್ಯ ಸರ್ಕಾರಕ್ಕೆ ನಾಲ್ಕು ಪ್ರಸ್ತಾವನೆಗಳನ್ನು ಸಲ್ಲಿಸಿದ್ದು, ಈಗಾಗಲೇ ಎರಡು ಕೆ-ಗಳನ್ನು ಆರಂಭಿಸಲು ಅನುಮೋದನೆ ನೀಡಿದೆ. ಮಹಿಳಾ ಸ್ವಸಹಾಯ ಸಂಘದ ಸದಸ್ಯರೇ ನಿರ್ವಹಣೆ ಮಾಡುವ ಈ ಕೆ-ಯಲ್ಲಿ ಗುಣಮಟ್ಟದ, ಶುಚಿಯಾದ ಊಟವನ್ನು ನೀಡಲಾಗುತ್ತದೆ. ಇದು ಮಹಿಳೆಯರನ್ನು ಆರ್ಥಿಕವಾಗಿ ಸಬಲರಾಗಿಸಲು ಸರ್ಕಾರದ ಬಹುನಿರೀಕ್ಷಿತ ಯೋಜನೆಯಾಗಿರುವ ಕಾರಣ ಅನುಷ್ಠಾನಕ್ಕೆ ಸಂಬಂಽಸಿದಂತೆ ಜಿಲ್ಲಾ ಸಮಿತಿ ನೋಡಿಕೊಳ್ಳಲಿದೆ. ಕೆ. ಎಂ. ಗಾಯತ್ರಿ, ಸಿಇಒ, ಜಿಪಂ
ಇಂದಿರಾ ಕ್ಯಾಂಟೀನ್‌ಗಳು ಈಗಾಗಲೇ ಚೆನ್ನಾಗಿ ನಡೆಯುತ್ತಿವೆ. ಮಹಿಳಾ ಸಂಘದವರೇ ನಿರ್ವಹಿಸುವಂತಹ ‘ಅಕ್ಕ ಕೆಫೆ’ಯನ್ನು ತೆರೆಯಲು ಸರ್ಕಾರ ಬೇಕಾದ ಸೌಕರ್ಯವನ್ನು ಒದಗಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಂತೆ ಜಿಲ್ಲೆಗೆ ಮೊದಲ ಹಂತದಲ್ಲಿ ಎರಡು ಕೆ-ಗಳನ್ನು ಮಂಜೂರು ಮಾಡಲಾಗಿದೆ. ಡಾ. ಎಚ್. ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ