ಜಿಲ್ಲೆಯ ಭೂ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲು ನಿರ್ಧಾರ; ಕಾನೂನು ಹೋರಾಟಕ್ಕೆ ರೈತರ ಮನವಿ
ಮಡಿಕೇರಿ: ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಸುಮಾರು ೧೧ ಸಾವಿರ ಹೆಕ್ಟೇರ್‌ಗಳಷ್ಟು ಸಿ ಮತ್ತು ಡಿ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಬೇಕೆನ್ನುವ ಆದೇಶ ಜಿಲ್ಲೆಯ ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ.
ನ್ಯಾಯಾಂಗ ಹೋರಾಟದ ಮೂಲಕ ಸರ್ಕಾರ ಮತ್ತೆ ಈ ಜಾಗವನ್ನು ಸ್ವಾಧೀನಪಡೆಸಿಕೊಳ್ಳಬೇಕೆಂಬ ಒತ್ತಾಯ ಜೋರಾಗಿದೆ. ಅರಣ್ಯ ಪ್ರದೇಶವೆಂದು ಗುರುತಿಸಿಕೊಳ್ಳುವ ಡೀಮ್ಡ್ (ಸಿ – ಡಿ) ಸಂಕೋಲೆಯಲ್ಲಿ ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಸಿಲುಕಿದ್ದು, ರೈತರ ನೆಮ್ಮದಿಗೆ ತೂಗುಗತ್ತಿಯಾಗಿ ಪರಿಣಮಿಸಿದೆ. ಅನೇಕ ದಶಕಗಳಿಂದ ಉಳುಮೆ ಮಾಡುತ್ತಿರುವ ಈ ಭೂಮಿಗೆ ದಾಖಲೆಗಳನ್ನು ಪಡೆಯಲು ರೈತರು ಹೆಣಗಾಡುತ್ತಿದ್ದಾರೆ. ರೈತರಿಗೆ ಈಗ ಭೂಮಿ ಕಳೆದುಕೊಳ್ಳುವ ಭೀತಿಯೂ ಎದುರಾಗಿದ್ದು, ರೈತ ಸಂಘಟನೆಗಳು ಈ ಬಗ್ಗೆ ಸರ್ಕಾರದ ಗಮನ ಸೆಳೆದು ಭೂಮಿ ಉಳಿಸಿಕೊಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
೧೯೯೧, ೧೯೯೪ರಲ್ಲಿ ಸರ್ಕಾರದ ಆದೇಶಾನುಸಾರ ಅರಣ್ಯ ಇಲಾಖೆ ವ್ಯಾಪ್ತಿಯ ಸಿ ಮತ್ತು ಡಿ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಲಾಗಿದ್ದು, ಈ ಭೂಮಿಗಳನ್ನು ಲ್ಯಾಂಡ್ ಬ್ಯಾಂಕ್‌ನಲ್ಲಿ ಸೇರಿಸಲಾಗಿದೆ. ಲ್ಯಾಂಡ್ ಬ್ಯಾಂಕ್‌ನಲ್ಲಿ ರಾಜ್ಯಾದ್ಯಂತ ೧,೩೧,೮೬೬ ಹೆಕ್ಟೇರ್ ಭೂಮಿಯಿದ್ದು, ಇದನ್ನು ಕೇವಲ ಸಾರ್ವಜನಿಕ ಹಿತಾಸಕ್ತಿಗೆ ಮಾತ್ರ ಬಳಸಬೇಕೆನ್ನುವ ಷರತ್ತಿದೆ.
ಆದರೆ, ಇದೇ ವ್ಯಾಪ್ತಿಯಲ್ಲಿನ ೧೧,೭೨೨. ೨೯ ಹೆಕ್ಟೇರ್ ಭೂಮಿಯನ್ನು ಇತ್ತೀಚೆಗೆ ಪೂರ್ಣ ಪ್ರಮಾಣದಲ್ಲಿ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ ಎನ್ನುವ ಅಂಶ ರೈತರ ಆತಂಕಕ್ಕೆ ಕಾರಣವಾಗಿದೆ. ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಲಕ್ಷಾಂತರ ಸಾಗುವಳಿದಾರರು ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿ ಮಂಜೂರಾತಿ ನಿರೀಕ್ಷೆಯಲ್ಲಿದ್ದಾರೆ. ಆದರೆ ಸಿ ಮತ್ತು ಡಿ ಅಥವಾ ಡೀಮ್ಡ್ ಅರಣ್ಯ ಭೂಮಿ ಕುರಿತ ಅಸ್ಪಷ್ಟತೆಯನ್ನೇ ಮುಂದಿಟ್ಟುಕೊಂಡು ಭೂಮಿ ಮಂಜೂರು ಮಾಡಲಾಗುತ್ತಿಲ್ಲ. ಜೊತೆಗೆ ನಾನಾ ಕಡೆ ಅರಣ್ಯ ವ್ಯಾಪ್ತಿಯಲ್ಲಿರುವ ವಸತಿ, ಜಮೀನುಗಳಿಗೆ ಗ್ರಾ. ಪಂ. ಗಳಲ್ಲಿ ತೆರಿಗೆ ಪಾವತಿ ಮಾಡುತ್ತಿದ್ದರೂ ಅಗತ್ಯ ದಾಖಲೆಗಳು ದೊರೆಯದಂತಾಗಿದೆ.
ಕೊಡಗು ಜಿಲ್ಲೆಗೆ ಸಂಬಂಽಸಿದ ಪ್ರಕರಣವೊಂದರಲ್ಲಿ ರಾಜ್ಯ ಸರ್ಕಾರವು ೧೯೯೧, ೧೯೯೪ರ ಆದೇಶಗಳನ್ನು ನ್ಯಾಯಾಲಯದ ಗಮನಕ್ಕೆ ತಾರದ ಪರಿಣಾಮವಾಗಿ, ಈಗಾಗಲೇ ಒಟ್ಟು ೧೧,೭೨೨. ೨೯ ಹೆಕ್ಟೇರ್ ಸಿ ಮತ್ತು ಡಿ ಭೂಮಿ ಅರಣ್ಯ ಇಲಾಖೆಗೆ ವರ್ಗಾಯಿಸಬೇಕೆನ್ನುವ ಆದೇಶ ಹೊರಬಿದ್ದಿದೆ. ಈ ಆದೇಶದಿಂದಾಗಿ ರೈತರಲ್ಲಿ ಆತಂಕ ಉಂಟಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ಕಾನೂನು ಹೋರಾಟದ ಮೂಲಕ ಮತ್ತೆ ಸಿ – ಡಿ ಭೂಮಿಯನ್ನು ವಶಕ್ಕೆ ಪಡೆದು ರೈತರಿಗೆ ಹಕ್ಕುಪತ್ರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳಿಗೂ ಈ ಬಗ್ಗೆ ಸಾಕಷ್ಟು ಮನವಿ ಪತ್ರಗಳು ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲು ನಿರ್ಧರಿಸಲಾಗಿದೆ.
ಸಿ ಮತ್ತು ಡಿ ಲ್ಯಾಂಡ್‌ಗೆ ಸಂಬಂಧಪಟ್ಟಂತೆ ಕೊಡಗಿನ ವ್ಯಕ್ತಿಯೊಬ್ಬರು ಎಲ್ಲ ಜಾಗವನ್ನೂ ಅರಣ್ಯ ಇಲಾಖೆ ತನ್ನ ಸುಪರ್ದಿಗೆ ಪಡೆಯಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಸೂಕ್ತ ವಾದ ಮಂಡಿಸದಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಸರ್ಕಾರದಿಂದಲೂ ನಿರ್ಧಾರ ಸಾಧ್ಯವಿಲ್ಲ. -ಎ. ಎಸ್. ಪೊನ್ನಣ್ಣ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಶಾಸಕರು
ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆಗೆ ಸಂಬಂಧಪಟ್ಟಂತೆ ಈಗಾಗಲೇ ಅರಣ್ಯ ಸಚಿವರನ್ನು ಭೇಟಿ ಮಾಡಿದ್ದೇವೆ. ಕಂದಾಯ ಮತ್ತು ಅರಣ್ಯ ಇಲಾಖೆಗಳ ಜಂಟಿ ಸರ್ವೆ ಆಗಬೇಕು. ಅಽಕಾರಿಗಳ ಬದಲಾವಣೆಯಿಂದ ಜಿಲ್ಲೆಯಲ್ಲಿ ಸಮಸ್ಯೆಯಾಗುತ್ತಿದೆ. ೪ನೇ ಸೆಕ್ಷನ್ ಕೆಲವು ಜಾಗಕ್ಕೆ ಹಾಗೂ ಸಿ ಮತ್ತು ಡಿ ಲ್ಯಾಂಡ್ ವ್ಯಾಪ್ತಿಗೂ ಬರುತ್ತಿದೆ. ಆಕ್ಷೇಪಣೆ ಸಲ್ಲಿಸುವ ಕೆಲಸ ನಿರಂತರವಾಗಿ ಆಗಬೇಕಿದೆ. ಕಾನೂನು ರೀತಿಯಲ್ಲಿ ಹೋರಾಟ ಮಾಡಬೇಕಾಗಿದೆ. -ಡಾ. ಮಂಥರ್ ಗೌಡ, ಮಡಿಕೇರಿ ಶಾಸಕ
ಸಿ ಮತ್ತು ಡಿ ಭೂಮಿಯನ್ನು ಅರಣ್ಯ ಇಲಾಖೆ ಸುಪರ್ದಿಗೆ ನೀಡಲಾಗಿದೆ ಎನ್ನಲಾಗುತ್ತಿರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ರೈತರು ಪರಿಸರ ವಿರೋಽಗಳಲ್ಲ. ಆದ್ದರಿಂದ ಸಿ – ಡಿ ಲ್ಯಾಂಡ್ ಒತ್ತುವರಿ ಮಾಡಿಕೊಂಡವರಿಗೆ ಸಣ್ಣ ಪ್ರಮಾಣದಲ್ಲಿ ಖಾತೆ ಮಾಡಿಕೊಡಬೇಕು. -ರವಿ ಕಾಳಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ
ಸಿ ಮತ್ತು ಡಿ ಲ್ಯಾಂಡ್ ಘೋಷಣೆಗೂ ಮುಂಚೆಯಿಂದಲೂ ರೈತರು ಆ ಜಾಗದಲ್ಲಿ ಕೃಷಿ ಮಾಡಿಕೊಂಡು ಬಂದಿದ್ದಾರೆ. ಸಿ ಮತ್ತು ಡಿ ಲ್ಯಾಂಡ್‌ನ್ನು ಕಂದಾಯ ಇಲಾಖೆ ಗಿಡ ಬೆಳೆಸಲು ಅರಣ್ಯ ಇಲಾಖೆಗೆ ಷರತ್ತುಗಳ ಮೇಲೆ ನೀಡಿದ್ದು, ಅದನ್ನು ಸರ್ಕಾರ ವಾಪಸ್ ಪಡೆಯಬಹುದಾಗಿದೆ. ಹೀಗಾಗಿ ೩ರಿಂದ ೫ ಎಕರೆವರೆಗೆ ಒತ್ತುವರಿದಾರರಿಗೆ ಖಾತೆ ಮಾಡಿಕೊಡುವಂತಾಗಬೇಕು. -ಧರ್ಮಜ ಉತ್ತಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಫಾರೆಸ್ಟ್ ಲ್ಯಾಂಡ್, ದೇವರಕಾಡನ್ನು ಉಳಿಸುವ ಕೆಲಸ ಮಾಡಬೇಕಿದೆ. ಆದರೆ, ಹಲವು ರೈತರು ಸಿ ಮತ್ತು ಡಿ ಲ್ಯಾಂಡ್‌ನಲ್ಲಿ ಒತ್ತುವರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಿಂದಿನ ಸರ್ಕಾರಗಳ ಅವಽಯಲ್ಲಿಯೇ ಸಿ ಮತ್ತು ಡಿ ಲ್ಯಾಂಡ್‌ನ್ನು ವಾಪಸ್ ಪಡೆಯಲು ಅನುಮತಿ ನೀಡಲಾಗಿದೆ. ಕೊಡಗು ಹಾಗೂ ಮಲೆನಾಡು ಭಾಗಗಳಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. -ಸುಜಾ ಕುಶಾಲಪ್ಪ, ವಿಧಾನ ಪರಿಷತ್ ಸದಸ್ಯರು