Mysore
17
clear sky

Social Media

ಬುಧವಾರ, 07 ಜನವರಿ 2026
Light
Dark

ಸೌಕರ್ಯ ಗಮನಿಸಿ ಆಸ್ತಿ ಖರೀದಿಸಿ

Buy property with facilities in mind

ಮಧು ಎಸ್‌.ಪಿ

ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮದ ಸ್ಥಿತಿಗತಿ, ಸೈಟ್/ ಫ್ಲ್ಯಾಟ್/ಮನೆ ಖರೀದಿ ಮತ್ತು ಮಾರಾಟದ ಜವಾಬ್ದಾರಿಗಳು ಮತ್ತು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮಹತ್ವದೊಂದಿಗೆ ಮೈಸೂರು, ಕರ್ನಾಟಕದ ೨ನೇ ಅತಿ ದೊಡ್ಡನಗರವಾಗಿದ್ದು, ತನ್ನ ಸಾಂಸ್ಕ ತಿಕ ಪರಂಪರೆ, ಆಹ್ಲಾದಕರ ವಾತಾವರಣ ಮತ್ತು ವೇಗವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಉದ್ಯಮದ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ.

ಬೆಂಗಳೂರಿನಿಂದ ೧೩೯ ಕಿ.ಮೀ. ದೂರದಲ್ಲಿರುವ ಮೈಸೂರು, ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ಮತ್ತು ರಿಂಗ್ ರೋಡ್‌ನಂತಹ ಸಂಪರ್ಕ ಸೌಲಭ್ಯಗಳನ್ನು ಹೊಂದಿ ರಿಯಲ್ಎಸ್ಟೇಟ್‌ನಲ್ಲಿ ಹೂಡಿಕೆದಾರರಿಗೆಆಕರ್ಷಕ ತಾಣವಾಗಿದೆ. ಇಂದು ಐಟಿ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಕೈಗಾರಿಕಾ ವಲಯಗಳ ಬೆಳವಣಿಗೆಯಿಂದಾಗಿ ಮೈಸೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಗಣನೀಯವಾಗಿ ವಿಸ್ತರಿಸುತ್ತಿದೆ.

ಆ ಮೂಲಕ ಮೈಸೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಸ್ಥಿರವಾದ ಬೆಳವಣಿಗೆಯನ್ನು ಕಾಣುತ್ತಿದೆ. ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ, ಪೆರಿಫೆರಲ್ ರಿಂಗ್ ರೋಡ್, ಫಿಲ್ಮ್ ಸಿಟಿ, ಕ್ರಿಕೆಟ್ ಸ್ಟೇಡಿಯಂನಂತಹ ಉದ್ದೇಶಿತ ಯೋಜನೆಗಳು ಮೈಸೂರು ಹೊರವಲಯದ ಆಸ್ತಿಗಳ ಬೆಲೆಯನ್ನು ಹೆಚ್ಚಿಸಿವೆ. ಹೆಬ್ಬಾಳ, ನಂಜನಗೂಡಿನಂತಹ ಕೈಗಾರಿಕಾ ಪ್ರದೇಶಗಳಲ್ಲಿ ಐಟಿ ಕಂಪೆನಿಗಳು ಮತ್ತು ಇತರ ಕೈಗಾರಿಕೆಗಳಿಂದಾಗಿ ವಸತಿ ಮತ್ತು ವಾಣಿಜ್ಯ ಆಸ್ತಿಗಳ ಬೇಡಿಕೆ ಹೆಚ್ಚಿದೆ. ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೇವೆಗಳು, ಪ್ರವಾಸೋದ್ಯಮ ಈ ಬೆಳವಣಿಗೆಗೆ ಕಾರಣವಾಗಿವೆ. ಜೊತೆಗೆ, ಮೈಸೂರಿನ ಕಡಿಮೆ ಜೀವನ ವೆಚ್ಚ, ಶುದ್ಧ ವಾತಾವರಣ, ವಿಶಾಲವಾದ ರಸ್ತೆಗಳು ವಾಸಕ್ಕೆ ಆಕರ್ಷಕ ತಾಣವೆನ್ನಿಸಿವೆ.

ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ನಗರದ ಯೋಜಿತ ಅಭಿವೃದ್ಧಿಯಲ್ಲಿ ಮುಡಾ ಪ್ರಮುಖ ಪಾತ್ರ ವಹಿಸುತಿತ್ತು. ಆದರೆ ಕರ್ನಾಟಕ ಸರ್ಕಾರ ಮೈಸೂರಿನ ಉತ್ತಮವಾದ ಬೆಳವಣಿಗೆಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ರದ್ದುಪಡಿಸಿ ಮೈಸೂರು ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿದೆ. ಇತ್ತೀಚಿಗೆ ಕೇಳಿಬಂದ ಹಲವು ಹಗರಣಗಳಿಂದಾಗಿ ಅತಿ ಮುಡಾ ಹೆಚ್ಚು ಸುದ್ದಿಯಾಗಿತ್ತು. ಮೈಸೂರಿನಲ್ಲಿ ಆಸ್ತಿಯನ್ನು ಖರೀದಿಸುವವರಲ್ಲಿ ಭಯ, ಅಪನಂಬಿಕೆಯನ್ನು ಉಂಟುಮಾಡಿತ್ತು. ಆದರೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಯಿಂದಾಗಿ ನಗರದ ಯೋಜಿತ ಬೆಳವಣಿಗೆಗೆ ತ್ವರಿತಗತಿಯಲ್ಲಿ ಖರೀದಿದಾರರು ಮತ್ತು ಮಾರಾಟಗಾರರಿಗೆ ಅಗತ್ಯವಿರುವ ಕಾನೂನುಗಳನ್ನು ರೂಪಿಸಿ ಮತ್ತೊಮ್ಮೆ ಮೈಸೂರನ್ನು ರಾಷ್ಟ್ರದ ಉತ್ತಮ ಯೋಜಿತ ನಗರವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂಬ ಆಶಾಭಾವನೆ ಎಲ್ಲರದ್ದಾಗಿದೆ.

ಮೈಸೂರು, ಭಾರತದ ಯೋಜಿತ ಮತ್ತು ವಾಸ ಯೋಗ್ಯವಾದ ನಗರವಾಗಿದ್ದು, ಮೈಸೂರಿನಲ್ಲಿ ಆಸ್ತಿ ಹೊಂದಬೇಕೆಂಬುದು ವಿಶ್ವದ ಬೇರೆ ಬೇರೆ ಭಾಗದಲ್ಲಿ ವಾಸಿಸುತ್ತಿರುವ ಭಾರತೀಯರ ಕನಸಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಮೈಸೂರು ಪ್ರಶಾಂತವಾದ ವಾತಾವರಣ ಮತ್ತು ಅತ್ಯುತ್ತಮ ನಾಗರಿಕ ಸೌಲಭ್ಯಗಳನ್ನು ಹೊಂದುತ್ತಿರುವ ನಗರವಾಗಿರುವುದರಿಂದ, ಭಾರತದ ಇತರೆ ರಾಜ್ಯಗಳ ಹೆಚ್ಚು ಜನರು ಮೈಸೂರಿನಲ್ಲಿ ನೆಲೆಸಲು ಇಚ್ಛೆ ಪಡುತ್ತಿದ್ದಾರೆ. ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮವು ತನ್ನ ಯೋಜಿತ ಅಭಿವೃದ್ಧಿ, ಕೈಗೆಟುಕುವ ಬೆಲೆಗಳು ಮತ್ತು ಉತ್ತಮ ಜೀವನಗುಣಮಟ್ಟದಿಂದ ಹೂಡಿಕೆದಾರರಿಗೆ ಆಕರ್ಷಕ ಆಯ್ಕೆಯಾಗಿದೆ. ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ಕಾನೂನು ಜವಾಬ್ದಾರಿಗಳನ್ನು ಪಾಲಿಸುವುದು ಸುರಕ್ಷಿತ ಮತ್ತು ಲಾಭದಾಯಕ ವಹಿವಾಟಿಗೆ ಕಾರಣವಾಗುತ್ತದೆ.

ಮೈಸೂರು ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿರುವ ನಗರವಾಗಿದ್ದು, ಇಲ್ಲಿನ ಇತಿಹಾಸ ಪ್ರಸಿದ್ಧ ದಸರಾ ಉತ್ಸವ, ಪಾರಂಪರಿಕ ಅರಮನೆಗಳು, ಐತಿಹಾಸಿಕ ಸ್ಥಳಗಳಾದ ಶ್ರೀರಂಗಪಟ್ಟಣ, ಪ್ರವಾಸಿಗರ ನೆಚ್ಚಿನ ಬೃಂದಾವನ ಗಾರ್ಡನ್, ಮೃಗಾಲಯ ಮತ್ತು ಮೈಸೂರಿಗೆ ಹತ್ತಿರವಾಗಿರುವ ನಾಗರಹೊಳೆ, ಬಂಡೀಪುರ ಅಭಯಾರಣ್ಯಗಳು ಪ್ರಮುಖ ಯಾತ್ರಾ ಸ್ಥಳವಾಗಿರುವ ಚಾಮುಂಡಿಬೆಟ್ಟ, ನಂಜನಗೂಡು, ಮಲೈ ಮಹದೇಶ್ವರಬೆಟ್ಟ ಮತ್ತು ಊಟಿ ಗಿರಿಧಾಮಕ್ಕೆ ಹತ್ತಿರವಾಗಿರುತ್ತದೆ ಹಾಗೂ ಇತರೆ ಐತಿಹಾಸಿಕ ಪ್ರೇಕ್ಷಣೀಯ ಮತ್ತು ಯಾತ್ರಾ ಸ್ಥಳಗಳು ಪ್ರಪಂಚದ ಎಲ್ಲ ಭಾಗಗಳ ಪ್ರವಾಸಿಗರನ್ನು ಸೆಳೆಯುತ್ತಿವೆ. ಪತ್ರಿಕೆಗಳ ವರದಿ ಪ್ರಕಾರ ೨೦೨೪-೨೫ರಲ್ಲಿ ೪೦ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಮೈಸೂರಿಗೆ ಭೇಟಿ ನೀಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೈಸೂರು ನಗರವನ್ನು ದಕ್ಷಿಣ ಕರ್ನಾಟಕದ ಪ್ರವಾಸೋದ್ಯಮದ ಕೇಂದ್ರಬಿಂದುವಾಗಿ ಅಭಿವೃದ್ಧಿಪಡಿಸಲು ಯೋಜನೆಗಳನ್ನು ರೂಪಿಸುಸುತ್ತಿರುವುದರಿಂದ ಇನ್ನೂ ಹೆಚ್ಚು ಪ್ರವಾಸಿಗರನ್ನು ಸೆಳೆಯಬಹುದಾಗಿದೆ. ಕೈಗಾರಿಕಾ, ಐಟಿ ಮತ್ತು ಸೇವಾವಲಯಗಳ ಸ್ಥಾಪನೆಗೆ ಹೆಚ್ಚು ಉತ್ತೇಜನ ನೀಡಿದಲ್ಲಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬಹುದು ಮತ್ತು ವೃತ್ತಿಪರ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು, ಖಚಿತ ಕಾನೂನು ಮತ್ತು ಸುವ್ಯಸ್ಥೆಯ ಸ್ಥಾಪನೆ, ಹಿರಿಯ ನಾಗರಿಕರ ಭದ್ರತೆ, ಇವುಗಳನ್ನು ಖಚಿತಪಡಿಸುವ ಪ್ರಯತ್ನ ಮಾಡಿದಲ್ಲಿ ದೇಶದ ಅತ್ಯುತ್ತಮ ನಾಗರಿಕ ಸೌಲಭ್ಯವುಳ್ಳ ನಗರವನ್ನಾಗಿಸುತ್ತದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅವಶ್ಯಕವಿರುವ ಯೋಜಿತ ನಗರ ನಕ್ಷೆ ಯನ್ನು ಅಭಿವೃದ್ಧಿಪಡಿಸುವುದು, ಆಡಳಿತಾತ್ಮಕ ಅನುಮೋದನೆಗಳನ್ನು ಕಾಲಮಿತಿಯಲ್ಲಿ ನೀಡುವ ವ್ಯವಸ್ಥೆ ಯನ್ನು ಸರ್ಕಾರ ಮಾಡಿದಲ್ಲಿ ಅಭಿವೃದ್ಧಿದಾರರು ಕೂಡ ಕಾಲಮಿತಿಯೊಳಗೆ ತಮ್ಮ ಅತ್ಯುತ್ತಮವಾದ ಯೋಜನೆಗಳನ್ನು ಪೂರ್ಣಗೊಳಿಸಬಹುದು ಮತ್ತು ಮೈಸೂರು ನಗರವನ್ನು ಅತ್ಯುತ್ತಮ ನಾಗರಿಕನಗರವನ್ನಾಗಿ ರೂಪಿಸ ಬಹುದಾಗಿರುತ್ತದೆ. ಇದರಿಂದಾಗಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆದಾರರ ವಿಶ್ವಾಸ ಹೆಚ್ಚಾಗುತ್ತದೆ.

(ಲೇಖಕರು ರಿಷಭ್ ವೆಂಚರ‍್ಸ್ ಸಂಸ್ಥೆಯ ಪಾಲುದಾರರು ಹಾಗೂ ವ್ಯವಸ್ಥಾಪಕರು ಮತ್ತು ಕ್ರೆಡಾಯ್ ಸಂಸ್ಥೆ ಕಾರ್ಯಕಾರಿ ಸಮಿತಿ ಸದಸ್ಯ)

“೨೦೦೫ರಲ್ಲಿ ವಿಜಯನಗರ, ಬೋಗಾದಿ,ದಟ್ಟಗಳ್ಳಿ, ಜೆ.ಪಿ.ನಗರ ಮತ್ತು ಆಲನಹಳ್ಳಿ ಪ್ರದೇಶಗಳಲ್ಲಿ ವಸತಿ ನಿವೇಶನಗಳ ಬೆಲೆ ಚದರ ಅಡಿಗೆ ೧,೦೦೦-೨,೦೦೦ ರೂ.ಗಳಿದ್ದರೆ ೨೦೨೫ರ ಆರಂಭದಲ್ಲಿ ೬,೦೦೦-೮,೦೦೦ ರೂ.ಗಳನ್ನು ತಲುಪಿದೆ ಮತ್ತು ಅಪಾರ್ಟ್‌ಮೆಂಟ್‌ಗಳ ಬೆಲೆ ಚದರ ಅಡಿಗೆ ೫,೦೦೦-೭,೦೦೦ ರೂ.ಗಳವರೆಗೆ ಇದೆ. ನಗರದ ಪ್ರತಿಷ್ಠಿತ ಬಡಾವಣೆಗಳಾದ ಕುವೆಂಪುನಗರ, ಸರಸ್ವತಿಪುರಂ, ವಿಜಯನಗರ, ಸಿದ್ಧಾರ್ಥ ಬಡಾವಣೆ, ಗೋಕುಲಂ, ಯಾದವಗಿರಿಯಲ್ಲಿ ವಸತಿ ನಿವೇಶನಗಳ ಬೆಲೆ ಚದರ ಅಡಿಗೆ ೮,೦೦೦-೧೦,೦೦೦ ರೂ.ಗಳಿದ್ದು,ಪ್ರಮುಖ ವಾಣಿಜ್ಯ ನಿವೇಶನಗಳ ಚದರ ಅಡಿಗೆ ೧೨,೦೦೦-೧೫,೦೦೦ ರೂ. ಗಳವರೆಗೆ ಮಾರಾಟವಾಗುತ್ತಿದೆ.”

” ಮೈಸೂರಿನಲ್ಲಿ ಆಸ್ತಿ ಖರೀದಿಸುವಾಗ ಪರಿಣತ ಕಾನೂನು ಸಲಹೆಗಾರರಿಂದ ದಾಖಲೆಗಳ ಪರಿಶೀಲನೆ ಅತ್ಯಗತ್ಯ. ನಂಬಿಕೆಗೆ ಅರ್ಹರಾದ ಮತ್ತು ವೃತ್ತಿಪರ ಡೆವಲಪರ್ಸ್‌ಗಳನ್ನು ಆಯ್ದುಕೊಳ್ಳುವುದು ಮತ್ತು ವೃತ್ತಿಪರ ನೋಂದಾಯಿತ (RERA) ಮಧ್ಯವರ್ತಿಗಳ ಆಯ್ಕೆ ಅತಿಮುಖ್ಯ. ಆಸ್ತಿ ಖರೀದಿಸುವ ಮುನ್ನ ಆಸ್ತಿಯ ಮೌಲ್ಯವನ್ನು ಸರಿಯಾಗಿ ನಿರ್ಧರಿಸಲು ಮಾರುಕಟ್ಟೆ ಮೌಲ್ಯವನ್ನು ಅಧ್ಯಯನ ಮಾಡಬೇಕು ಮತ್ತು ಖರೀದಿಗೆ ಸಾಲದ ಅವಶ್ಯವಿದ್ದರೆ ಮಾರಾಟಗಾರರು ತಮ್ಮ ಆಸ್ತಿಯನ್ನು ಯಾವ ಯಾವ ಬ್ಯಾಂಕ್‌ಗಳೊಂದಿಗೆ ಅನುಮೋದನೆ ಪಡೆದಿರುತ್ತಾರೆ ಎಂಬುದನ್ನು ಗಮನಿಸಬೇಕು. ಖರೀದಿಸಲು ಇಚ್ಛಿಸಿರುವ ನಿವೇಶನ/ಮನೆ/ಫ್ಲಾ ಟ್ ಸಮುಚ್ಚಯದಿಂದ ಶಾಲೆ, ಬ್ಯಾಂಕ್, ಆಸ್ಪತ್ರೆ ಮತ್ತು ದಿನಬಳಕೆಯ ವಸ್ತುಗಳ ಅಂಗಡಿಗಳ ಸೌಕರ್ಯವನ್ನು ಗಮನಿಸಬೇಕು. ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ಅನುಮೋದಿತ ಆಸ್ತಿಗಳಿಗೆ ಆದ್ಯತೆ ನೀಡುವುದು ಸುರಕ್ಷಿತ. ಏಕೆಂದರೆ ಇವು ಕಾನೂನುಬದ್ಧವಾಗಿರುತ್ತವೆ ಮತ್ತು ಮೂಲಸೌಕರ್ಯಗಳನ್ನು ಒದಗಿಸುತ್ತವೆ. ಖರೀದಿದಾರರು RERA (Real Estate Regulatory Authority) ನೋಂದಾಯಿತ ಯೋಜನೆಗಳನ್ನು ಆಯ್ಕೆ ಮಾಡುವುದರಿಂದ ಪಾರದರ್ಶಕತೆ ಮತ್ತು ರಕ್ಷಣೆ ಖಾತರಿಯಾಗುತ್ತದೆ. ಖರೀದಿಯ ಸಮಯದಲ್ಲಿ ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳನ್ನು ಸರಿಯಾಗಿ ಪಾವತಿಸಬೇಕು ಮತ್ತು ಒಪ್ಪಂದದ ಷರತ್ತುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.”

ಆಸ್ತಿ ಮಾರಾಟದ ಜವಾಬ್ದಾರಿಗಳು:

ಆಸ್ತಿ ಮಾರಾಟದ ಸಮಯದಲ್ಲಿ ಮಾರಾಟಗಾರರು ಅಗತ್ಯವಿರುವ ಎಲ್ಲ ಕಾನೂನು ದಾಖಲೆಗಳನ್ನು ಸಿದ್ಧವಾಗಿಡಬೇಕು. ಆಸ್ತಿಯ ಮೌಲ್ಯವನ್ನು ಸರಿಯಾಗಿ ನಿರ್ಧರಿಸಲು ಮಾರುಕಟ್ಟೆ ದರವನ್ನು ಅಧ್ಯಯನ ಮಾಡಬೇಕು ಮತ್ತು ರಿಯಲ್ ಎಸ್ಟೇಟ್ ಏಜೆಂಟ್‌ (RERA) ಸೇವೆಯನ್ನು ಬಳಸುವುದರಿಂದ ಮಾರಾಟ ಪ್ರಕ್ರಿಯೆ ಸುಗಮವಾಗುತ್ತದೆ. ಆದರೆ, ಏಜೆಂಟ್‌ನ ವಿಶ್ವಾಸಾರ್ಹತೆಯನ್ನು ಖಾತರಿಪಡಿಸಿಕೊಳ್ಳಬೇಕು. ಉಅ ನಿಯಮಗಳನ್ನು ಅನುಸರಿಸುವುದು ಮಾರಾಟದ ಸಮಯದಲ್ಲಿ ಪಾರದರ್ಶಕತೆಯನ್ನು ಖಾತರಿಪಡಿಸುತ್ತದೆ ಮತ್ತು ಖರೀದಿದಾರರ ವಿಶ್ವಾಸವನ್ನು ಹೆಚ್ಚಿಸುತ್ತದೆ.

Tags:
error: Content is protected !!