Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ಬಿಜೆಪಿ ತೆಕ್ಕೆಗೆ ಸರಗೂರು ಪಟ್ಟಣ ಪಂಚಾಯಿತಿ

ಸರಗೂರು: ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಸತತ ಎರಡನೇ ಬಾರಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಸೋಮವಾರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ರಾಧಿಕಾ ಶ್ರೀನಾಥ್ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಶಿವಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಬಿಸಿಎಂ ಎ ವರ್ಗ ಮಹಿಳೆಗೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ರಾಧಿಕಾ ಶ್ರೀನಾಥ್, ಚೈತ್ರಾ ಸ್ವಾಮಿ ನಾಮಪತ್ರ ಸಲ್ಲಿಸಿದ್ದರು.

ಅದೇ ರೀತಿ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಶಿವಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಸಿದರು. ನಂತರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ರಾಧಿಕಾ ಶ್ರೀನಾಥ್ ಅವರು ಬಿಜೆಪಿಯ ೬ ಮತಗಳನ್ನು ಪಡೆದು ವಿಜಯಿಯಾದರೆ, ಚೈತ್ರ ಸ್ವಾಮಿ ಅವರು ೨ ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ರಿಂದ ಅವಿರೋಧವಾಗಿ ಆಯ್ಕೆಯಾದರು. ತಹಸಿಲ್ದಾರ್ ರುಕಿಯಾಬೇಗಂ, ಉಪ ತಹಸಿಲ್ದಾರ್ ಸುನಿಲ್, ಮುಖ್ಯಾಧಿಕಾರಿ ಎಸ್. ಎಸ್. ಮಂಜುನಾಥ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಸದಸ್ಯರಾದ ವಿನಾಯಕ ಪ್ರಸಾದ್, ನೂರಾಳಸ್ವಾಮಿ, ದಿವ್ಯಾನವೀನ್ ಕುಮಾರ್, ಸಣ್ಣತಾಯಮ್ಮ, ಉಮಾ ರಾಮು ಹಾಜರಿದ್ದರು. ಗೈರಾದ ಸದಸ್ಯರು: ಪಟ್ಟಣ ಪಂಚಾಯಿತಿಯ ಕಾಂಗ್ರೆಸ್ ಪಕ್ಷದ ಸದಸ್ಯರಾದ ಶ್ರೀನಿವಾಸ್, ಚಲುವಕೃಷ್ಣ, ಕಾಂಗ್ರೆಸ್ ಬೆಂಬಲಿತ ಸದಸ್ಯೆ ಹೇಮಾವತಿ ರಮೇಶ್ ಅವರು ಚುನಾವಣೆಯಲ್ಲಿ ಭಾಗಿಯಾಗದೆ ಗೈರಾಗಿದ್ದರು.

ಬಿಜೆಪಿಯ ೬ ಮಂದಿ ಸದಸ್ಯರು, ಜಾ.ದಳದ ಇಬ್ಬರು ಸದಸ್ಯರು ಮಾತ್ರ ಹಾಜರಿದ್ದರು. ಒಟ್ಟು ೧೨ ಮಂದಿ ಸದಸ್ಯ ಬಲವಿದ್ದು, ಓರ್ವ ಸದಸ್ಯ ಮೃತಪಟ್ಟಿದ್ದಾರೆ. ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗ ದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಬಿಜೆಪಿ ಜಿಲ್ಲಾಧ್ಯಕ್ಷ ಎಲ್. ಆರ್. ಮಹದೇವ ಸ್ವಾಮಿ, ಬಿಜೆಪಿ ಮುಖಂಡ ಎಂ. ಕೃಷ್ಣನಾಯಕ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಲ್. ಆರ್. ಮಹದೇವಸ್ವಾಮಿ ಮಾತನಾಡಿ, ಪಕ್ಷದ ವರಿಷ್ಠರ ಆದೇಶದ ಮೇರೆಗೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಸರಗೂರಿನಲ್ಲಿ ಬಿಜೆಪಿ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಗದ್ದುಗೆ ಏರಿದೆ. ಇದರಿಂದಾಗಿ ಮೈತ್ರಿಗೆ ಹಿನ್ನೆಡೆಯಾಗುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಈ ಕುರಿತು ಮೈತ್ರಿ ಪಕ್ಷಗಳ ವರಿಷ್ಠರು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಮುಖಂಡ ಎಂ. ಕೃಷ್ಣನಾಯಕ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕಂದಲಿಕೆ ಗುರುಸ್ವಾಮಿ, ಜಿಲ್ಲಾ ಗ್ರಾಮಾಂತರ ಕಾರ್ಯದರ್ಶಿ ಮನುಗನಹಳ್ಳಿ ಮಂಜು, ಶ್ರೀನಾಥ್, ಸಿ. ಕೆ. ಗಿರೀಶ್, ಎಂ. ವೆಂಕಟಸ್ವಾಮಿ, ಹಂಚೀಪುರ ಗುರುಸ್ವಾಮಿ, ಪುರದಶೆಡ್ಡು ಲೋಕೇಶ್, ಪ್ರಶಾಂತ್, ಎಚ್. ಎಂ. ಲೇಖನ್ ಕುಮಾರ್, ಗಣಪತಿ, ರಾಜು, ಶಿವಶಂಕರ್, ಲಂಕೆ ರಮೇಶ್, ಗೋಪಾಲಸ್ವಾಮಿ, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು

 

Tags: