Mysore
27
scattered clouds

Social Media

ಮಂಗಳವಾರ, 27 ಜನವರಿ 2026
Light
Dark

ಓದುಗರ ಪತ್ರ: ಇ 20 ಮಿಶ್ರಿತ ಇಂಧನದ ಬಗ್ಗೆ ಜಾಗೃತಿ ಅತ್ಯಗತ್ಯ

ಓದುಗರ ಪತ್ರ

ಇ೨೦ (೨೦% ಎಥೆನಾಲ್ + ೮೦% ಪೆಟ್ರೋಲ್) ಮಿಶ್ರಿತ ಇಂಧನದ ಪರಿಚಯವು ಒಂದು ದೂರದೃಷ್ಟಿಯ ನಿರ್ಧಾರವಾಗಿದೆ. ಆದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಕುರಿತು ಅನೇಕ ತಪ್ಪುಮಾಹಿತಿಗಳು ಹರಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಇ೨೦ ಇಂಧನದಿಂದಾಗಿ ವಾಹನದ ಮೈಲೇಜ್ ಕಡಿಮೆಯಾಗುತ್ತದೆ, ವಿಮೆ ನಿರಾಕರಿಸಲಾಗುತ್ತದೆ ಎಂಬಂತಹ ಭಯ ಹುಟ್ಟಿಸುವ ಮಾತುಗಳು ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಅಧಿಕೃತ ವರದಿಗಳ ಪ್ರಕಾರ, ಇ೨೦ ಇಂಧನವು ಇ೧೦ಗಿಂತ ಉತ್ತಮ ವೇಗವರ್ಧನೆ ನೀಡುತ್ತದೆ, ೩೦% ಕಡಿಮೆ ಇಂಗಾಲದ ಹೊರಸೂಸುವಿಕೆ ಉಂಟುಮಾಡುತ್ತದೆ, ಹಾಗೂ ವಿಮೆಯ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ. ೨೦೦೯ರಿಂದಲೇ ಅನೇಕ ವಾಹನ ಮಾದರಿಗಳು ಇ೨೦ ಹೊಂದಾಣಿಕೆಗೆ ಅನುಗುಣವಾಗಿ ತಯಾರಾಗಿವೆ.

ಇ೨೦ ಅನಿಲದಲ್ಲಿ, ಕಬ್ಬು ಅಥವಾ ಮೆಕ್ಕೆಜೋಳ ಆಧಾರಿತ ಎಥೆನಾಲ್ ಬಳಕೆ ಮಾಡುವುದರಿಂದ ಸಾಮಾನ್ಯ ಪೆಟ್ರೋಲ್ ಗಿಂತ ೫೦-೬೫% ಕಡಿಮೆ ಹಸಿರುಮನೆ ಅನಿಲ ಹೊರಸೂಸುತ್ತದೆ. ಇದರಿಂದ ೭೩೬ ಲಕ್ಷ ಮೆಟ್ರಿಕ್ ಟನ್ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗುವುದು ಎಂದು ಅಂದಾಜಿಸಲಾಗಿದೆ. ಇದು ೩೦ ಕೋಟಿ ಗಿಡಗಳನ್ನು ನೆಟ್ಟ ಪರಿಣಾಮಕ್ಕೆ ಸಮಾನ. ಜೊತೆಗೆ, ವಿದೇಶಿ ವಿನಿಮಯದಲ್ಲಿ ದಶಲಕ್ಷ ಕೋಟಿ ರೂ. ಉಳಿತಾಯವಾಗುತ್ತದೆ.

ವಾಹನ ತಯಾರಕರು ಹಾಗೂ ಸಂಶೋಧನಾ ಸಂಸ್ಥೆಗಳು ಇ೨೦ ಬಳಕೆದಾರರ ನೈಜ ಮೈಲೇಜ್ ಮತ್ತು ಕಾರ್ಯಕ್ಷಮತೆ ವರದಿಗಳನ್ನು ಸಾರ್ವಜನಿಕರಿಗೆ ನಿರಂತರವಾಗಿ ಹಂಚಬೇಕು. ಅಂತಿಮವಾಗಿ, ಬ್ರೆಜಿಲ್ ಮಾದರಿಯನ್ನು ಅನುಸರಿಸಿ ಮುಂದಿನ ೧೦-೧೫ ವರ್ಷಗಳಲ್ಲಿ ಇ೨೦ ಅಥವಾ ಹೆಚ್ಚು ಎಥೆನಾಲ್ ಮಿಶ್ರಣದತ್ತ ಸಾಗುವ ನೀತಿಯನ್ನು ರೂಪಿಸಬೇಕು.

– ಎಚ್. ಕೆ. ಡಾ.ವಿಜಯಕುಮಾರ್, ಬೆಂಗಳೂರು

Tags:
error: Content is protected !!