ಮೈಸೂರು: ಚಾಮರಾಜ ಕ್ಷೇತ್ರದ ಪ್ರಮುಖ ರಸ್ತೆಗಳ ಡಿವೈಡರ್‌ಗಳ ಮಧ್ಯಭಾಗದಲ್ಲಿ ವಿವಿಧ ಅಲಂಕಾರಿಕ ಗಿಡಗಳನ್ನು ನೆಡುವ ಮೂಲಕ ಹೊಸ ಸ್ಪರ್ಶ ನೀಡಲು ನಗರಪಾಲಿಕೆ ಮುಂದಾಗಿದೆ.
ಕ್ಷೇತ್ರ ವ್ಯಾಪ್ತಿಯ ವಿವಿಧ ರಸ್ತೆಗಳ ವಿಭಜಕ ಗಳ ನಡುವೆ ಒಟ್ಟು ೫೦ ಕಿ. ಮೀ. ವ್ಯಾಪ್ತಿಯಲ್ಲಿ ಅಲಂಕಾರಿಕ ಗಿಡಗಳನ್ನು ನೆಡಲು ಉದ್ದೇಶಿ ಸಲಾಗಿದೆ. ವೈವಿಧ್ಯಮಯವಾದ ಸುಮಾರು ೨ ಲಕ್ಷ ಅಲಂಕಾರಿಕ ಸಸ್ಯಗಳನ್ನು ನೆಡುವ ಕಾರ್ಯ ಭರದಿಂದ ಸಾಗಿದೆ. ೧೫ನೇ ಹಣಕಾಸು ಯೋಜನೆಯಡಿ ೩ ಕೋಟಿ ರೂ. ಅನುದಾನ ಮತ್ತು ಸಾಮಾನ್ಯ ಅನುದಾನದಡಿ ೧. ೫೦ ಕೋಟಿ ರೂ. ಅನುದಾನ ಸೇರಿ ಒಟ್ಟು ನಾಲ್ಕೂವರೆ ಕೋಟಿ ರೂ. ವೆಚ್ಚದಲ್ಲಿ ನಗರಪಾಲಿಕೆಯು ಈ ಯೋಜನೆಯನ್ನು ಅನುಷ್ಠಾನ ಮಾಡುತ್ತಿದೆ.
ಒಟ್ಟು ೧೪ ಪ್ಯಾಕೇಜ್ ಮಾಡಿ ಟೆಂಡರ್ ನೀಡಲಾಗಿದೆ. ಟೆಂಡರ್‌ದಾರರು ಗಿಡ ನೆಟ್ಟು ೨ ವರ್ಷಗಳ ಕಾಲ ನಿರ್ವಹಣೆ ಜವಾಬ್ದಾರಿಯನ್ನೂ ನಿಭಾಯಿ ಸಲಿದ್ದಾರೆ. ರಾಮಸ್ವಾಮಿ ವೃತ್ತದಿಂದ ಏಕಲವ್ಯ ಸರ್ಕಲ್ ವರೆಗೆ ಈಗಾಗಲೇ ಗಿಡಗಳನ್ನು ನೆಡಲಾಗಿದೆ. ಜೆಎಲ್‌ಬಿ ರಸ್ತೆ, ಸರಸ್ವತಿಪುರಂ ರಸ್ತೆ, ಕೆಆರ್‌ಎಸ್ ರಸ್ತೆ, ಹುಣಸೂರು ರಸ್ತೆ, ಒಂಟಿ ಕೊಪ್ಪಲು ರಸ್ತೆ, ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದ ರಸ್ತೆಗಳಿಗೆ ಹೂವಿನ ಗಿಡಗಳನ್ನು ನಡೆಲಾಗುತ್ತದೆ. ಇದಕ್ಕಾಗಿ ಹೂ ಬಿಡುವ ಹಾಗೂ ಹುಲ್ಲು ಮಾದರಿಯ ಗಿಡಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೋಗನ್ ವಿಲ್ಲಾ, ಪ್ಲುಮೇರಿಯಾ ಪುಡಿಕ, ಕಣಗಲೆ ಎಮಿಲಿಯ, ನಂದಿಬಟ್ಟಲು, ಜಟ್ರೋಪ, ಫಾಕ್ಸ್ ಟೈಲ್ ಪಾಮ್ ಅಲಂಕಾರಿಕ ಗಿಡಗಳನ್ನು ನೆಡಲಾಗುತ್ತದೆ.
ಡಾ. ರಾಜ್‌ಕುಮಾರ್ ರಸ್ತೆ, ವಿಹಾರ ಮಾರ್ಗ, ಬನ್ನೂರು-ಮಳವಳ್ಳಿ ರಸ್ತೆ, ಗಾಯತ್ರಿಪುರಂ ರಸ್ತೆ, ಮಹದೇವಪುರ ಮುಖ್ಯರಸ್ತೆ, ರಾಜೀವ್‌ನಗರ ಮುಖ್ಯ ರಸ್ತೆ, ಶಿವಾಜಿ ಮುಖ್ಯರಸ್ತೆ, ಮಹಾತ್ಮ ಗಾಂಧಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಮಾನಂದವಾಡಿ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ಕೃಷ್ಣರಾಜ ಬುಲೆವಾರ್ಡ್, ಉದಯರವಿ ರಸ್ತೆ, ಬೆಂಗಳೂರು-ಮೈಸೂರು ರಸ್ತೆ, ವಿಜಯನಗರ ಜೋಡಿ ರಸ್ತೆಗಳನ್ನು ಈ ಯೋಜನೆಗೆ ಒಳಪಡಿಸಲಾಗಿದೆ.
ಸ್ಮಾರ್ಟ್ ಸಿಟಿ ಮಿಷನ್ ಯೊಜನೆಯಲ್ಲಿ ರಸ್ತೆಗಳ ಅಂದ ಹೆಚ್ಚಿಸಲು ಒತ್ತು ನೀಡಲಾಗಿದೆ. ದನ-ಕರುಗಳು ಯಾವ ಗಿಡಗಳನ್ನು ತಿನ್ನುವುದಿಲ್ಲವೋ ಅಂತಹ ಗಿಡಗಳನ್ನೇ ನೆಡಲು ಸೂಚಿಸಲಾಗಿದೆ. ಕೆಲವು ಕಡೆಗಳಲ್ಲಿ ಪಾಮ್ ಗಿಡಗಳನ್ನು ಬಳಸಲಾಗಿದೆ. ಉಳಿದಂತೆ ಎಲ್ಲವೂ ಕೆಂಪು ಹಾಗೂ ಬಿಳಿ ಹೂ ಬಿಡುವ ಗಿಡಗಳೇ ಆಗಿವೆ. ಸುಮಾರು ೧೦-೧೫ ವರ್ಷಗಳ ಕಾಲ ಬಾಳಿಕೆ ಬರುವ ಈ ಗಿಡಗಳನ್ನು ಟೆಂಡರ್ ಪಡೆದ ವರೇ ೨ ವರ್ಷಗಳ ತನಕ ಪೊಷಣೆ ಮಾಡುವಂತೆ ತಿಳಿಸಲಾಗಿದೆ. -ಮೋಹನ ಕುಮಾರ, ಸಹಾಯಕ ಕಾರ್ಯಪಾಲಕ ಅಭಿಯಂತರರು ತೋಟಗಾರಿಕೆ ವಿಭಾಗ.
ರಸ್ತೆ ವಿಭಜಕಗಳ ನಡುವೆ ಗಿಡ ನೆಡುತ್ತಿರು ವುದು ಒಳ್ಳೆಯ ಸಂಗತಿ, ಇದರಿಂದಾಗಿ ಪರಿಸರ ಉತ್ತಮವಾಗಿ ರುತ್ತದೆ. ಅಡ್ಡಾದಿಡ್ಡಿ ರಸ್ತೆ ದಾಟುವವರಿಗೆ ಕಡಿವಾಣ ಹಾಕಿದಂತಾ ಗುತ್ತದೆ. ಹೆಚ್ಚಾಗಿ ರಾತ್ರಿ ಎದುರು ಬರುವ ವಾಹನಗಳ ಬೆಳಕು ಅಷ್ಟಾಗಿ ಗೋಚರವಾಗು ವುದಿಲ್ಲ. ಇದರೊಂದಿಗೆ ನಗರದಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳ ಬಗ್ಗೆಯೂ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿದ್ದಲ್ಲಿ ಮೈಸೂರಿಗೆ ಮತ್ತೊಮ್ಮೆ ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಸಿಗಲಿದೆ. -ಶಶಾಂಕ್, ಹೆಬ್ಬಾಳ್