ಒಳ ಮೀಸಲಾತಿ ಜಾರಿಗೊಳಿಸುವ ಸಲುವಾಗಿ ನಿವೃತ್ತ ನ್ಯಾಯಮೂರ್ತಿ ಡಾ. ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚನೆಯಾಗಿರುವುದು ಸರಿಯಷ್ಟೇ. ಈಗಾಗಲೇ ಗಣತಿ ಕಾರ್ಯ ಮುಗಿದಿದ್ದು, ಸಮೀಕ್ಷೆಯಿಂದ ಹೊರಗುಳಿದಿರುವವರು ಆನ್ ಲೈನ್ ಮೂಲಕ ಘೋಷಣೆ ಮಾಡಿಕೊಳ್ಳಲು ಸರ್ಕಾರ ೨೨.೬.೨೫.ರ ವರೆಗೂ ಅವಧಿ ವಿಸ್ತರಿಸಿದೆ.
ಸಮಾಜ ಕಲ್ಯಾಣ ಇಲಾಖೆಯು ಆಯೋಗರಚನೆ, ಸಮೀಕ್ಷೆಗಳ ಬಗ್ಗೆ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ ಗಳಲ್ಲಿ ಪ್ರತಿ ದಿನವೂ ಜಾಹೀರಾತು ನೀಡುತ್ತಿದೆ. ಕೋರ್ಟ್ ನಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯಮೂರ್ತಿಗಳಿಗೂ, ಸೇವೆಯಿಂದ ನಿವೃತ್ತರಾದ ನ್ಯಾಯ ಮೂರ್ತಿಗಳಿಗೂ ಬಹಳ ವ್ಯತ್ಯಾಸಗಳಿವೆ. ಡಾ. ಎಚ್. ಎನ್. ನಾಗಮೋಹನ್ ದಾಸ್ರವರು ನಿವೃತ್ತ ನ್ಯಾಯಾಧೀಶರಾಗಿದ್ದಾರೆ. ಆದರೆ ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ವತಿಯಿಂದ ನೀಡುವ ಜಾಹೀರಾತಿನಲ್ಲಿ, ನಿವೃತ್ತ ಎನ್ನುವುದನ್ನು ತಿಳಿಸದೆ
ಗೌರವಾನ್ವಿತ ನ್ಯಾಯಮೂರ್ತಿ ಎಂದೇ ಬರೆಯಲಾಗಿದೆ. ಇದು ಜನರಿಗೆ ಹಾಲಿ ನ್ಯಾಯಮೂರ್ತಿಗಳೋ, ನಿವೃತ್ತ ನ್ಯಾಯ ಮೂರ್ತಿಗಳೋ ಎಂದು ಗೊಂದಲ ಮೂಡಿಸುತ್ತಿದೆ. ಆದ್ದರಿಂದ ಸಮಾಜ ಕಲ್ಯಾಣ ಇಲಾಖೆ ಜಾಹೀರಾತಿನಲ್ಲಿ ಆಗಿರುವ ತಪ್ಪನ್ನು ಸರಿ ಪಡಿಸಲಿ.
-ಮುಳ್ಳೂರು ಪ್ರಕಾಶ್ , ಕನಕದಾಸನಗರ, ಮೈಸೂರು.





