ಈ ವರ್ಷದ ‘ಜಾಗತಿಕ ಪರಿಸರ ದಿವಸ’ದ ಘೋಷವಾಕ್ಯವು ‘ಜಗವನ್ನು ಪ್ಲಾಸ್ಟಿಕ್ ನಿಂದ ಮುಕ್ತಗೊಳಿಸೋಣ’ ಎಂದಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಜಿಲ್ಲೆ ಹಾಲು ಉತ್ಪಾದಕರ ಒಕ್ಕೂಟವು ಬಯೋ ಡಿಗ್ರೇಡಬಲ್ (ಮಣ್ಣಿನಲ್ಲಿ ಕರಗುವ ) ‘ಪರಿಸರ-ಸ್ನೇಹಿ’ ಚೀಲಗಳಲ್ಲಿ ಸಾರ್ವಜನಿಕರಿಗೆ ಪ್ರತಿನಿತ್ಯ ಹಾಲು ಸರಬರಾಜು ಮಾಡಲು ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಪ್ರಾಯೋಗಿಕ ಯತ್ನ ನಡೆಸಿದ್ದು, ಅವರ ಈ ಪ್ರಯತ್ನವು ಈಡೇರಲಿ. ಎಲ್ಲ ಹಾಲು ಒಕ್ಕೂಟಗಳೂ ಕೂಡ ‘ಪರಿಸರ ಸ್ನೇಹಿ’ ಕ್ರಮಗಳನ್ನು ಅನುಸರಿಸಲಿ.
– ಡಿ.ವಿ.ಎಂ. ಪ್ರಕಾಶ್, ಗೋಕುಲ ರಸ್ತೆ, ಮೈಸೂರು




