Mysore
28
overcast clouds

Social Media

ಸೋಮವಾರ, 19 ಅಕ್ಟೋಬರ್ 2026
Light
Dark

ಕಲೆಗಾಗಿ ಸರ್ಕಾರಿ ಕೆಲಸ ಬಿಟ್ಟ ಕಲಾವಿದೆ!

ಕೇಶವ ಎಂ.

ವರ್ಲಿ ಕಲೆಗಾಗಿ ಜೀವನವನ್ನೇ ಮುಡುಪಾಗಿಟ್ಟ ಅನಸೂಯ; ಬುಡಕಟ್ಟು ಜನರ ಜೀವನ, ಸಂಸ್ಕೃತಿ ಅನಾವರಣ

ಮೈಸೂರು: ಸರ್ಕಾರಿ ಹುದ್ದೆಗಿಟ್ಟಿಸಿಕೊಳ್ಳಲು ಚಾತಕ ಪಕ್ಷಿಯಂತೆ ಕಾಯುವ ಲಕ್ಷಾಂತರ ಮಂದಿ ನಡುವೆ, ಸಿಕ್ಕ ಸರ್ಕಾರಿ ಕೆಲಸವನ್ನು ಬಿಟ್ಟು ಚಿತ್ರಕಲೆಗಾಗಿ ತಮ್ಮ ಜೀವನವನ್ನೇ ಮುಡು ಪಾಗಿಟ್ಟವರು ವರ್ಲಿ ಕಲಾವಿದೆ ಅನಸೂಯ! ಹೌದು, ಸಾತಗಳ್ಳಿ ನಿವಾಸಿ ಎಸ್.ಅನಸೂಯ ರಂಗಸ್ವಾಮಿ ಅವರು, ಜಿಪಂನ ಎ-ಡಿಎ ಹುದ್ದೆ ತ್ಯಜಿಸಿದರು. ಮಂಡ್ಯದಲ್ಲಿ ರೆವಿನ್ಯೂ ಇನ್‌ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿ ಪ್ರೊಬೆಷನರಿಯಾಗಿ ಕೆಲಸ ಮಾಡುತ್ತಿದ್ದವರು ಕಲೆಯ ಸೆಳೆತದಿಂದ ಉದ್ಯೋಗವನ್ನು ತ್ಯಜಿಸಿ ಸಂಪೂರ್ಣವಾಗಿ ಚಿತ್ರಕಲೆಯಲ್ಲೇ ತೊಡಗಿಸಿಕೊಂಡರು.

ಆಸಕ್ತಿ ಬಂದಿದ್ದು ಹೇಗೆ?: ಅನಸೂಯ ಅವರ ತಾತನ ಊರು ಎಚ್. ಡಿ.ಕೋಟೆ ತಾಲ್ಲೂಕಿನ ಭೀಮನ ಹಳ್ಳಿ. ಆಗಾಗ ತಾತನ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹಬ್ಬ, ಸುಗ್ಗಿ ಸಂಭ್ರಮದಲ್ಲಿ ಆದಿವಾಸಿ ಜನರು ನೃತ್ಯ ಮಾಡುವುದನ್ನು ಗಮನಿಸುತ್ತಿದ್ದರು. ಆದಿವಾಸಿ ಜನರು ಚಿತ್ರ ಬಿಡಿಸಿಅನಸೂಯ ಅವರ ತಾತನ ಬಳಿ ತಂದು ತೋರಿಸುತ್ತಿದ್ದರು. ಇದನ್ನು ಗಮನಿಸಿದ ಅನಸೂಯ ಅವರು ಆದಿವಾಸಿಗಳಲ್ಲಿ ಚಿತ್ರಕಲೆಯ ಬಗ್ಗೆ  ಇಷ್ಟೊಂದು ಆಸಕ್ತಿ ಇದೆಯಾ? ನಾನೇಕೆ ಕಲಿಯಬಾರದು ಎಂದು ಛಲದಿಂದ ಅಂದಿನಿಂದ ವರ್ಲಿ ಕಲೆಯನ್ನು ಕಲಿಯಲು ಆರಂಭಿಸಿ, ಉತ್ತಮ ಚಿತ್ರಕಲಾವಿದೆಯಾಗಿ ರೂಪುಗೊಂಡರು.

ಮಹಾರಾಷ್ಟ್ರ ಉತ್ತರ ಸಹ್ಯಾದ್ರಿ ಶ್ರೇಣಿಯಲ್ಲಿರುವ ವರ್ಲಿ ಜನಾಂಗದಿಂದ ವರ್ಲಿ ಕಲೆ ಹುಟ್ಟುಕೊಂಡಿದೆ. ಮಣ್ಣು, ಅಕ್ಕಿ ಹಿಟ್ಟು, ದಾರಾ ಇತರೆ ವಸ್ತುಗಳನ್ನು ಬಳಸಿ ವರ್ಲಿ ಚಿತ್ರವನ್ನು ತಯಾರು ಮಾಡುತ್ತಾರೆ. ವೃತ್ತ, ತ್ರಿಕೋನ, ಸರಳ ಜ್ಯಾಮಿತಿಯ ವಿಧಾನ, ನಾನಾ ಆಕಾರಗಳ ಮೂಲಕ ಬುಡಕಟ್ಟು ಜನರ ಆಚಾರ, ಸಂಪ್ರದಾಯವನ್ನು ಕಲೆಯಲ್ಲಿ ತೋರಿಸಿದ್ದಾರೆ.

ಅಲ್ಲದೇ, ಮಹಾತ್ಮ ಗಾಂಧಿ ಅವರು ದಕ್ಷಿಣ ಆಫ್ರಿಕಾಗೆ ಹೋಗಿದ್ದಾಗ, ಅವರನ್ನು ರೈಲಿನಿಂದ ತಳ್ಳಿದ ಸನ್ನಿವೇಶ, ಚಂಪಾರಣ್ಯ, ಉಪ್ಪಿನ ಸತ್ಯಾಗ್ರಹ , ಚರಕ ಹೋರಾಟ, ಸ್ವಾತಂತ್ರ್ಯಾ ನಂತರ ದೇಶ ಹೇಗೆ ಬದಲಾಗಿದೆ ಎಂಬುದನ್ನು ವರ್ಲಿ ಚಿತ್ರಕಲೆಯಲ್ಲಿ ನೋಡಬಹುದಾಗಿದೆ. ಹಸೆ ಚಿತ್ತಾರ (ಕರ್ನಾಟಕ ಬುಡಕಟ್ಟು ಜನರ ಕುರಿತು ಚಿತ್ರಕಲೆ), ಮೈಸೂರು ಸಾಂಪ್ರದಾಯಿಕ, ತಂಜಾವೂರು ಚಿತ್ರಕಲೆಯನ್ನು ಅನಸೂಯ ಅವರು ರೂಢಿಸಿಕೊಂಡಿದ್ದಾರೆ.

Tags:
error: Content is protected !!