Mysore
23
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ಶಾಲಾ ಹಿಂಭಾಗದ ಜಾಗ ತಿಪ್ಪೆ ಗುಂಡಿಯಾಗಿ ಬಳಕೆ: ಆರೋಪ

ಚಿಲ್ಕುಂದ ಸರ್ಕಾರಿ ಪ್ರೌಢಶಾಲೆ ಹಿಂಭಾಗದ ಜಾಗದಲ್ಲಿ ಅವ್ಯವಸ್ಥೆ: ಗ್ರಾಮಸ್ಥರ ಅಸಮಾಧಾನ

ಹುಣಸೂರು: ತಾಲ್ಲೂಕಿನ ಗ್ರಾಮ ಪಂಚಾಯಿತಿ ಕೇಂದ್ರವಾದ ಚಿಲ್ಕುಂದ ಸರ್ಕಾರಿ ಪ್ರೌಢಶಾಲೆ ಆವರಣದ ಹಿಂಭಾಗದ ಜಾಗ ಒತ್ತುವರಿಯಾಗಿದ್ದು, ತಿಪ್ಪೆ, ಬಯಲು ಶೌಚಾಲಯವಾಗಿಬಳಕೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಆವರಣದಲ್ಲಿ ಗಿಡಗಂಟಿಗಳು ಬೆಳೆದು ಶಾಲಾ ವಾತಾವರಣವೇ ಹಾಳಾಗಿದೆ. ಶಾಲೆಯು ೧೯೬೩ ಆರಂಭಗೊಂಡಿದ್ದು, ೫.೩೧ ಎಕರೆ ಪ್ರದೇಶದಲ್ಲಿದೆ. ಶಾಲಾವರಣದ ಮುಂಭಾಗ ಹಾಗೂ ಮತ್ತೊಂದು ಬದಿಯಲ್ಲಿ ಕಾಂಪೌಂಡ್ ನಿರ್ಮಾಣವಾಗಿದ್ದರೆ, ಹಿಂಭಾಗ ಹಾಗೂ ಇನ್ನೊಂದು ಬದಿಯಲ್ಲಿ ಸುಮಾರು ೪೦೦ ಮೀ.ನಷ್ಟು ಕಾಂಪೌಂಡ್ ನಿರ್ಮಾಣವಾಗಬೇಕಿದೆ. ಸುಮಾರು ಅರ್ಧ ಎಕರೆ ಪ್ರದೇಶದಷ್ಟು ಒತ್ತುವರಿಯಾಗಿದೆ.

ಕಸದ ತಿಪ್ಪೆ: ಶಾಲಾ ಕಟ್ಟಡದ ಹಿಂಭಾಗ ಕಾಂಪೌಂಡ್ ಇಲ್ಲದ ಪರಿಣಾಮ ಹಿಂಭಾಗದಲ್ಲಿ ಕೆಲವರು ತಿಪ್ಪೆಗುಂಡಿ ಮಾಡಿಕೊಂಡಿದ್ದಾರೆ. ಕಟ್ಟಡದ ತ್ಯಾಜ್ಯಗಳನ್ನು ಇಲ್ಲಿಗೆ ತಂದು ಬೀಸಾಡುತ್ತಿದ್ದು, ಬಯಲು ಶೌಚಾಲಯವಾ ಗಿಸಿದ್ದಾರೆ. ಸುತ್ತ ದೊಡ್ಡ ಮರಗಳು ಬೆಳೆದು ಕೊಂಡು ಕಾಡಿನಂತಾಗಿದೆ. ಹಾವುಗಳ ಕಾಟವೂ ಸಾಕಷ್ಟಿದ್ದು, ಹಲವಾರು ಬಾರಿ ಕೊಠಡಿಗೆ ನುಗ್ಗಿದ ಹಾವುಗಳನ್ನು ಹಿಡಿಸಲಾಗಿದೆ.

ಶಾಲೆಗೆ ರಜೆ ಇದ್ದರೆ ಸಾಕು ಶಾಲಾ ಕಟ್ಟಡ ಬಟ್ಟೆ ಒಗೆಯುವ ಸ್ಥಳವಾಗಿ ಮಾರ್ಪಡುತ್ತದೆ. ಅಲ್ಲಿಯೇ ಬಟ್ಟೆಗಳನ್ನು ಒಣಗಿ ಹಾಕುತ್ತಾರೆ. ಇನ್ನು ಬಿಡಾಡಿ ದನಗಳ ಮೇವಿನ ತಾಣವೂ ಆಗಿದೆ. ಆಗಾಗ್ಗೆ ಶೌಚಾಲಯದ ಬಾಗಿಲು ಒಡೆದು ಹಾಕಲಾಗುತ್ತಿದ್ದು, ವಿದ್ಯಾರ್ಥಿಗಳ ಬಹಿರ್ದೆಸೆಗೂ ಕಷ್ಟವಾಗಿದೆ. ಶಾಲಾ ಆವರಣದಲ್ಲಿ ಶಿಕ್ಷಕರಿಗಾಗಿ ಈ ಹಿಂದೆ ನಿರ್ಮಿಸಿದ್ದ ಎರಡು ವಸತಿಗೃಹಗಳು ಪಾಳು ಬಿದ್ದಿವೆ. ಶಾಲಾ ಪರಿಸರ ಉತ್ತಮವಾಗಿಸಲು ಸಾಕಷ್ಟು ಗಿಡ ಮರ ಬೆಳೆಸಲು ಅವಕಾಶವಿದ್ದರೂ ಜಾನುವಾರುಗಳ ಕಾಟದಿಂದಾಗಿ ಯಾವುದೇ ಸಸಿ ಬೆಳೆಸಲು ಸಾಧ್ಯವಾಗುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು.ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಶಿಕ್ಷಕರು ಪಾಠ ಮಾಡಬೇಕಾದ ದುಸ್ಥಿತಿ ಇದೆ

” ಒತ್ತುವರಿಯಾಗಿರುವ ಶಾಲಾ ಭೂಮಿಯನ್ನು ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಿ ಕಾಂಪೌಂಡ್ ನಿರ್ಮಿಸಲು ಹತ್ತಾರು ಬಾರಿ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಕ್ರಮವಾಗಿಲ್ಲ. ಅಲ್ಲದೆ,ನೇರಳಕುಪ್ಪೆಯಲ್ಲಿ ನಡೆದ ಹನಗೋಡು ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲೂ ಅಂದಿನ ಜಿಲ್ಲಾಧಿಕಾರಿ ರಾಜೇಂದ್ರ ಅವರಿಗೆ ಮನವಿ ಮಾಡಿ ದರೂ, ಕೆಡಿಪಿ ಸಭೆಯಲ್ಲೂ ಪ್ರಸ್ತಾಪವಾದರೂ ಯಾವುದೇ ಕ್ರಮವಾಗಿಲ್ಲ.”

-ಗ್ರಾಮಸ್ಥರು

Tags:
error: Content is protected !!