Mysore
18
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಅತ್ಯಾಧುನಿಕ ಚಿಕಿತ್ಸೆ

‘ಆಂದೋಲನ’ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರಾದ ವಿನಯ್, ಅಭಿಲಾಷ್‌ರಿಂದ ಮಾಹಿತಿ

ಮೈಸೂರು: ಸಮಾಜಕ್ಕೆ ಮಾರಕವಾಗಿ ಕಾಡುತ್ತಿರುವ ಕ್ಯಾನ್ಸರ್ ಪಿಡುಗಿಗೆ ಅತ್ಯಾಧುನಿಕ ಚಿಕಿತ್ಸೆಯ ಮೂಲಕ ರೋಗಿಗಳ ವಿಶ್ವಾಸರ್ಹತೆಗಳಿಸಿರುವ ಮೈಸೂರು ಭಾಗದ ಕ್ಯಾನ್ಸರ್ ರೋಗಿಗಳ ಆಶಾಕಿರಣ ಭಾರತ್ ಕ್ಯಾನ್ಸರ್ ಆಸ್ಪತ್ರೆ, ರೊಬೊಟಿಕ್ಸ್ ಶಸ್ತ್ರ ಚಿಕಿತ್ಸೆ, ಗರ್ಭಾಶಯದ ಕೊರಳಿನ ಕ್ಯಾನ್ಸರ್ ತಡೆಗಟ್ಟುವ ವ್ಯಾಕ್ಸಿನ್, ಶ್ವಾಸಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್… ಹೀಗೆ ಎಲ್ಲ ಮಾದರಿಯ ಕ್ಯಾನ್ಸರ್‌ •
ಪ್ರಪಂಚದ ಅಂಕೋಲಾಜಿ ವಿಭಾಗದಲ್ಲಿ ನೀಡುವ ಚಿಕಿತ್ಸಾ ಸೌಲಭ್ಯ ಆಸ್ಪತ್ರೆಯಲ್ಲಿ ದೊರೆಯುತ್ತಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ಚನ್ನಪಟ್ಟಣ, ಬೆಂಗಳೂರಿ ನಿಂದಲೂ ರೋಗಿಗಳು ಬಂದು ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆ ಸಾಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನರ ನಂಬಿಕೆಯನ್ನು ಗಳಿಸಿ ಕ್ಯಾನ್ಸರ್ ರೋಗಿಗಳ ಪಾಲಿನ ಭರವಸೆಯಾಗಿರುವ ಭಾರತ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರಾದ ಡಾ.ವಿನಯ್‌ ಕುಮಾರ್ ಮುತ್ತಗಿ ಮತ್ತು ಡಾ.ಜಿ.ಎಚ್‌.ಅಭಿಲಾಷ್ ಆಂದೋಲನ’ ಕಚೇರಿಯಲ್ಲಿ ಮಂಗಳವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಪಿಡುಗಿನ ಜಾಗೃತಿ, ಗೊಂದಲಗಳು, ಪ್ರಶ್ನೆಗಳಿಗೆ, ಸಂದೇಹಗಳಿಗೆ ಪರಿಹಾರ ಮಾರ್ಗಗಳನ್ನು ವಿವರಿಸಿದರು.

• ಪ್ರಶ್ನೆ: ಯಾವ ಬಗೆಯ ಕ್ಯಾನ್ಸರ್‌ಗಳಿವೆ?
ಡಾ.ಅಭಿಲಾಷ್: ತಲೆಯಿಂದ ಕಾಲಿನ ತನಕವೂ ಹಲವು ಬಗೆಯ ಕ್ಯಾನ್ಸರ್ ರೋಗಗಳಿವೆ. ಮೊದಲ ಹಂತದಲ್ಲಿ ಶೇ.100ರಷ್ಟು ಗುಣಮುಖರಾಗುತ್ತಾರೆ. ಸ್ತನ ಕ್ಯಾನ್ಸರ್‌ನಲ್ಲಿ ಎರಡನೇ ಹಂತದಲ್ಲಿ ಶೇ.80ರಷ್ಟು ಮಂದಿ, ಮೂರನೇ ಹಂತವಾದರೆ ಶೇ.60ರಷ್ಟು ಮಂದಿ ಬದುಕುಳಿಯುವ ಅವಕಾಶಗಳು ಇರಲಿವೆ. ಐದು ವರ್ಷಗಳ ಕಾಲ ಚಿಕಿತ್ಸೆ ನಡೆಯಲಿದೆ. ಕರುಳು ಕ್ಯಾನ್ಸರ್, ಅಗ್ರೇಸಿವ್ ಸ್ಟೋರಿಸ್‌ಗೆ ಕೆಲವು ಹಂತಗಳಲ್ಲಿ ಗುಣಮುಖವಾಗುತ್ತವೆ.

ಪ್ರಶ್ನೆ: ಗರ್ಭಾಶಾಯದ ಕೊರಳಿನ ಕ್ಯಾನ್ಸರ್ ತಡೆಗಟ್ಟುವ ಚುಚ್ಚುಮದ್ದಿನ ಬಗ್ಗೆ ತಿಳಿಸಿಕೊಡುತ್ತೀರ?
ಡಾ.ವಿನಯ್: ಗರ್ಭಾಶಯದ ಕೊರಳಿನ ಕ್ಯಾನ್ಸರ್ ತಡೆಗಟ್ಟಲು ಚುಚ್ಚು ಮುದ್ದು (ವ್ಯಾಕ್ಸಿನ್) ಇರುವುದು ಹೊಸ ವಿಷಯಲ್ಲ. ವಿಶ್ವ ಆರೋಗ್ಯ ಸಂಸ್ಥೆ 2035ರ ವೇಳೆಗೆ ಗರ್ಭಾಶಾಯದ ಕೊರಳಿನ ಕ್ಯಾನ್ಸರ್ ಮುಕ್ತಾಯಗೊಳಿಸ ಬೇಕು ಎಂದು ನಿರ್ಧರಿಸಿದೆ. ಅದಕ್ಕಾಗಿ ಯೋಜನೆಗಳನ್ನು ರೂಪಿಸಿದೆ. ಹುಟ್ಟಿದ ಮಕ್ಕಳಿಗೆ ಪೋಲಿಯೋ ತಡೆಗಟ್ಟಲು ಹಾಕುವ ವ್ಯಾಕ್ಸಿನ್‌ನಂತೆ, ಮಹಿಳೆಯರಿಗೆ ಗರ್ಭಾಶಯದ ಕೊರಳಿನ ಕ್ಯಾನ್ಸರ್ ತಡೆಗಟ್ಟಲು ವ್ಯಾಕ್ಸಿನ್ ಕೊಡಲಾಗುತ್ತಿದೆ.
ಇದು ಯಶಸ್ವಿಯೂ ಆಗಿದೆ. ಎನ್‌ಜಿಒ ಗಳು ಮತ್ತು ಭಾರತ ಕ್ಯಾನ್ಸರ್ ಆಸ್ಪತ್ರೆಯಿಂದಲೂ ವ್ಯಾಕ್ಸಿನ್ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಭಾರತದಲ್ಲಿ ವ್ಯಾಕ್ಸಿನ್ ಉಚಿತವಾಗಿ ದೊರೆಯುತ್ತಿಲ್ಲ. ಈಗಾಗಲೇ ಆಸ್ಟ್ರೇಲಿಯಾ ಸರ್ಕಾರ ಈ ವ್ಯಾಕ್ಸಿನ್ ಅನ್ನು ಸಂಪೂರ್ಣ ಉಚಿತವಾಗಿ ತನ್ನ ದೇಶದ ಎಲ್ಲ ಮಹಿಳೆಯರಿಗೂ ಕೊಡಿಸಿದೆ. ಅದೇ ಮಾದರಿ ಯಲ್ಲಿ ದೇಶ ಮತ್ತು ರಾಜ್ಯದಲ್ಲಿ ವ್ಯಾಕ್ಸಿನ್‌ ಉಚಿತವಾಗಿ ನೀಡುವ ಕ್ರಮವಾಗಬೇಕು.
ಭಾರತ್ ಕ್ಯಾನ್ಸರ್ ಆಸ್ಪತ್ರೆಗೆ ಚುಚ್ಚುಮದ್ದು ಪಡೆಯಲು ಮಹಿಳೆಯರು ಕರೆ ಮಾಡುತ್ತಿದ್ದಾರೆ. ಕೆಲವರು ಈಗಾಗಲೇ ಪಡೆದುಕೊಂಡಿದ್ದಾರೆ. ಇದರಿಂದ ವ್ಯಾಕ್ಸಿನ್ ತೆಗೆದುಕೊಳ್ಳು ವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. 14 ವರ್ಷ ಒಳ ಪಟ್ಟ ಮಕ್ಕಳಿಗೆ ನೀಡುವುದರಿಂದ ಸ್ಕೂಲ್, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.‌

ಇದನ್ನೂ ಓದಿ:-ನಾಳೆ ಅದ್ಧೂರಿ ಜಂಬೂಸವಾರಿ

ಪ್ರಶ್ನೆ: ಯಾವ ಬಗೆಯ ಕ್ಯಾನ್ಸರ್ ಜನರನ್ನು ಹೆಚ್ಚು ಬಾಧಿಸುತ್ತಿದೆ; ಅದಕ್ಕೆ ಕಾರಣವೇನು?

ಡಾ.ವಿನಯ್: 18 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುವುದು ಶ್ವಾಸ ಕೋಶದ ಕ್ಯಾನ್ಸರ್್ರ. ಇದನ್ನು ಹೊರತುಪಡಿಸಿದರೆ ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ನಮ್ಮ ಆಸ್ಪತ್ರೆಯಲ್ಲಿ ತಿಂಗಳಿಗೆ 400ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಬಾಯಿ ಮತ್ತು ಗಂಟಲಿನ ಕ್ಯಾನ್ಸ‌ರ್ ಮತ್ತು ಸ್ತನ ಕ್ಯಾನ್ಸರ್ ಹೆಚ್ಚು ಕಂಡು ಬರುತ್ತಿದೆ. ಬೀಡಿ, ಸಿಗರೇಟ್, ಗುಟ್ಟಾ ಸೇರಿದಂತೆ ತಂಬಾಕು ಪದಾರ್ಥಗಳ ಸೇವನೆ ಹೆಚ್ಚಿದೆ ಎಂದರು.

ಪ್ರಶ್ನೆ: ಗರ್ಭಾಶಾಯದ ಕೊರಳಿನ ಕ್ಯಾನ್ಸರ್ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎನ್ನಲಾಗುತ್ತಿದೆಯಲ್ಲ?
ಡಾ.ಅಭಿಲಾಷ್: ಗರ್ಭಾಶಯದ ಕ್ಯಾನ್ಸರ್ ಒಂದು ಕಾಯಿಲೆಯಾಗಿದ್ದು, ಇದರಲ್ಲಿ ಗರ್ಭಾಶಯದಲ್ಲಿನ ಜೀವಕೋಶಗಳು ಅಸಹಜವಾಗಿ ಬೆಳೆ ಯುತ್ತವೆ. ಋತುಬಂಧದ ಮೂಲಕ ಹಾದುಹೋಗಿರುವ ಮಹಿಳೆಯರಲ್ಲಿ ಇದು ಸಾಮಾನ್ಯವಾಗಿದೆ. ಈಜೆನ್ ಎಂದು ಕರೆಯಲ್ಪಡುವ ಹೆಚ್ಚಿನ ಮಟ್ಟದ ಹಾರ್ಮೋನ್ ಗರ್ಭಾಶಯದ ಕ್ಯಾನ್ಸ‌ಗೆ ಪ್ರಾಥಮಿಕ ಕಾರಣವಾಗಿದೆ. ಇತರ ಕಾರಣಗಳಲ್ಲಿ ಕರುಳು, ಅಂಡಾಶಯ ಅಥವಾ ಗರ್ಭಾ ಶಯದ ಕ್ಯಾನ್ಸರ್‌ನ ಕುಟುಂಬದ ಇತಿಹಾಸವೂ ಸೇರಿದೆ. ಈ ಕ್ಯಾನ್ಸರ್ ಕಾಣಿಸಿಕೊಳ್ಳಲು 10 ರಿಂದ 20 ವರ್ಷವಾಗಲಿದೆ. ಇದನ್ನು ಸಂಪೂರ್ಣ ಗುಣಪಡಿಸಬಹುದು.

ಪ್ರಶ್ನೆ: ಕ್ಯಾನ್ಸರ್ ಚಿಕಿತ್ಸೆ ಬಡವರ ಕೈಗೆಟುಕುವುದಿಲ್ಲ ಎಂಬ ಮಾತು ನಿಜವೆ?
ಡಾ.ವಿನಯ್: ಅಂಕೋಲಾಜಿ ಕ್ಷೇತ್ರದಲ್ಲಿ ಹೆಚ್ಚಿನ ಆವಿಷ್ಕಾರಗಳು ನಡೆಯುತ್ತಿವೆ. ಮೊದಲೆಲ್ಲ ಕಿಮೋ ಥೆರಪಿಯ ಮೂಲಕ ಚಿಕಿತ್ಸೆ ನೀಡಬೇಕಿತ್ತು. ಇದೀಗ ಹೊಸ ಆವಿಷ್ಠಾರ ಗಳು ನಡೆದು ಔಷಧಿಗಳನ್ನು ತಯಾರಿಸಲಾಗಿದೆ. ಈ ಔಷಧಿಗಳು ಮೊದಲು ದುಬಾರಿಯಾಗಿದ್ದವು. ಆದರೆ, ಇಂದು ಪ್ರತಿಯೊಬ್ಬರಿಗೂ ಕೈಗೆಟುಕುತ್ತಿವೆ. ಲಕ್ಷಾಂತರ ರೂಪಾಯಿಗೆ ಸಿಗುತ್ತಿದ್ದ ಚಿಕಿತ್ಸೆ ಈಗ ಹತ್ತಿಪ್ಪತ್ತು ಸಾವಿರಕ್ಕೂ ದೊರೆಯುತ್ತಿದೆ. ಸರ್ಕಾರದ ಯೋಜನೆಗಳಲ್ಲಿಯೂ ಕ್ಯಾನ್ಸ‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದ್ದರಿಂದ ಬಡ ರೋಗಿಗಳು ಭಯಪಡುವ ಅವಶ್ಯಕತೆ ಇಲ್ಲ. ರೋಗದ ಲಕ್ಷಣ ಗಳು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ಕಾಳಜಿ ವಹಿಸಬೇಕು. ಬಿಪಿಎಲ್, ಯಶಸ್ವಿನಿ, ಇಎಸ್‌ಐ ಕಾರ್ಡ್‌ಗಳಲ್ಲಿ ಅಂಕೋಲಾಜಿ ಚಿಕಿತ್ಸೆ ದೊರೆಯಲಿದೆ.

ಪ್ರಶ್ನೆ: ಕ್ಯಾನ್ಸರ್ ಪೀಡಿತ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ?
ಡಾ.ಅಭಿಲಾಷ್: ಹತ್ತು ವರ್ಷಗಳ ಮುಂಚೆ ಕ್ಯಾನ್ಸರ್ ಪ್ರಮಾಣ ಕಡಿಮೆ ಇತ್ತು. ಆದರೆ, ಆ ಕಾಯಿಲೆಯಿಂದ ಸಾವಿಗೀಡಾದವರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಈಗ ಕ್ಯಾನ್ಸರ್ ಬಗ್ಗೆ ಜಾಗೃತಿ ಜಾಸ್ತಿಯಾಗಿದೆ. ಪ್ರತಿ 75 ದಿನಗಳಿಗೊಮ್ಮೆ ಕ್ಯಾನ್ಸ‌ಗೆ ಚಿಕಿತ್ಸೆಯ ಹೊಸ ಔಷಧಿಗಳು ಸಂಶೋಧನೆ ಮಾಡಲಾಗುತ್ತಿದೆ. ಹಾಗಾಗಿ ಕ್ಯಾನ್ಸರ್ ಕಾಯಿಲೆಯಿಂದ ಗುಣಮುಖರಾಗುವ ಸಂಖ್ಯೆಯೂ ಹೆಚ್ಚಾಗಿದೆ ಎಂದರು.

ಪ್ರಶ್ನೆ: ಕ್ಯಾನ್ಸರ್‌ಗೆ ಮೈಸೂರಿನಲ್ಲಿಯೇ ಚಿಕಿತ್ಸೆ ಲಭ್ಯ ಇದ್ದರೂ ಬೆಂಗಳೂರು, ಹೊರ ರಾಜ್ಯ ರಾಷ್ಟ್ರಗಳಿಗೆ ಏಕೆ ಹೋಗುತ್ತಿದ್ದಾರೆ?
ವಿನಯ್-ಅಭಿಲಾಷ್: ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆಯಂತೆ ಜನರ ಮನಸ್ಥಿತಿಯಾಗಿದೆ. ನಮ್ಮ ಆಸ್ಪತ್ರೆಯ ಲ್ಲಿಯೇ 3 ವಿಭಾಗಗಳಲ್ಲಿ ಕ್ಯಾನ್ಸರ್ ಚಿಕಿತ್ಸೆ ಕೊಡಲಾಗುತ್ತಿದೆ.
ಮೆಡಿಕಲ್ ಅಂಕೋಲಾಜಿ, ಸರ್ಜಿಕಲ್ ಅಂಕೋಲಾಜಿ, ರೆಡಿಯೇಷನ್‌ ಅಂಕೋಲಾಜಿ ವಿಭಾಗಗಳಲ್ಲಿ ಅತ್ಯಾಧುನಿಕ ಚಿಕಿತ್ಸೆ ನೀಡುತ್ತಿದ್ದೇವೆ. ಬೆಂಗಳೂರು ಸೇರಿದಂತೆ ಜಗತ್ತಿನ ಬಹುತೇಕ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ದೊರೆಯಬಹುದಾದ ಚಿಕಿತ್ಸೆಗಳು ನಮ್ಮಲ್ಲಿಯೂ ದೊರೆಯುತ್ತಿವೆ. ಹೊಸ ಬಗೆಯ ಆವಿಷ್ಠಾರಗಳನ್ನು ಅನುಸರಿಸಿ ಚಿಕಿತ್ಸಾ ಪದ್ಧತಿ ನೀಡಲಾಗು ತ್ತದೆ. ಹೀಗಾಗಿ ನಮ್ಮ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಮಾಹಿತಿ ಕೊರತೆಯಿಂದ ಕೆಲವರು ಹೊರಗೆ ಹೋಗುತ್ತಿರಬಹುದು.

ಪ್ರಶ್ನೆ: ಭಾರತ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೊಬೋಟಿಕ್ಸ್ ಶಸ್ತ್ರ ಚಿಕಿತ್ಸೆ ಇದ್ದು, ರೋಗಿಗಳಿಗೆ ಯಾವ ರೀತಿ ಅನುಕೂಲವಾಗಿದೆ?
ವಿನಯ್: ಕ್ಯಾನ್ಸರ್ ರೋಗಿಗಳಿಗೆ ಶಸ್ತ್ರ ಚಿಕಿತ್ಸೆಯ ನಂತರ ಅಡ್ಡ ಪರಿಣಾಮ ಬೀರುವುದು ಸಹಜ. ಇದನ್ನು ಕಡಿಮೆ ಮಾಡುವುದಕ್ಕೆ ರೊಬೊಟಿಕ್ಸ್ ವಿಧಾನದ ಮೂಲಕ ಶಸ್ತ್ರ ಚಿಕಿತ್ಸೆ ನೀಡಲಾಗುವುದು. ರೊಬೊಟಿಕ್ಸ್ ಶಸ್ತ್ರ ಚಿಕಿತ್ಸೆ ಹೊಂದಿ ರುವ ಮೊದಲ ಆಸ್ಪತ್ರೆ ನಮ್ಮದು. ಬೆಂಗಳೂರು, ಮುಂಬೈ, ಚೆನ್ನೈನಲ್ಲಿ ಲಭ್ಯವಿರುವ ಚಿಕಿತ್ಸೆ ನಮ್ಮಲ್ಲಿಯೂ ಲಭ್ಯವಿದೆ.

ಕ್ಯಾನ್ಸರ್ ಕಾಯಿಲೆ ಕೇವಲ ಶಸ್ತ್ರಚಿಕಿತ್ಸೆಯಿಂದ ಗುಣವಾಗುವುದಿಲ್ಲ. ಶಸ್ತ್ರ ಚಿಕಿತ್ಸೆಯ ನಂತರ ಕಿಮೋ, ರೆಡಿಯಷನ್ ಚಿಕಿತ್ಸೆಯೂ ಆವಶ್ಯಕ. ಈ ಎಲ್ಲ ಬೆಳವಣಿಗೆ ಗಳನ್ನೂ ಗಮನಿಸಿದರೆ ಶೀಘ್ರ ಗುಣಮುಖವಾಗಿ ಮುಂದಿನ ಚಿಕಿತ್ಸೆಗೆ ಅನುಕೂಲವಾಗಿಸಲು ರೊಬೊಟಿಕ್ಸ್ ಚಿಕಿತ್ಸೆ ಪರಿಣಾಮಕಾರಿಯಾಗಿದೆ. ಹೀಗಾಗಿ ಆಸ್ಪತ್ರೆಯ ಈ ಚಿಕಿತ್ಸಾ ವಿಧಾನದ ವೈಖರಿಯಿಂದ ಹೆಚ್ಚಿನ ಜನರು ಆಸ್ಪತ್ರೆಯಲ್ಲಿ ರೊಬೊಟಿಕ್ಸ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಜನರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದು, ಗುಣಮುಖವಾದವರ ಸಂಖ್ಯೆಯೂ ಹೆಚ್ಚಳವಾಗಿದೆ.

• ಪ್ರಶ್ನೆ: ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಯಾವ ರೀತಿಯ ಸೌಲಭ್ಯ ಇದೆ?
ಡಾ.ಅಭಿಲಾಷ್‌: ಭಾರತ ಕ್ಯಾನ್ಸರ್ ಆಸ್ಪತ್ರೆ 35 ವರ್ಷಗಳ ಹಿಂದೆ ಡಾ. ಅಜಯಕುಮಾರ್ ಅವರ ನೇತೃತ್ವದಲ್ಲಿ ಮೈಸೂರಿನಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಸ್ಥಾಪನೆಯಾಗಿದ್ದು, ಪ್ರಸ್ತುತ ಎಲ್ಲ ಮಾದರಿಯ ಕ್ಯಾನ್ಸರ್ ಗಳಿಗೂ ಚಿಕಿತ್ಸೆ ಲಭ್ಯವಿದೆ. ನವೀನ ಮಾದರಿಯ ತಂತ್ರಜ್ಞಾನಗಳ ಜೊತೆಗೆ ವಿಶ್ವ ಗುಣಮಟ್ಟದ ಚಿಕಿತ್ಸೆಗಳು ಆಸ್ಪತ್ರೆಯಲ್ಲಿ ದೊರೆಯುತ್ತಿವೆ. ಹೀಗಾಗಿ ಆಸ್ಪತ್ರೆ ಜನರ ನಂಬಿಕೆ ವಿಶ್ವಾಸವನ್ನು ಗಳಿಸಿಕೊಂಡು ಸಾಗುತ್ತಿದೆ. ಇದೀಗ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಉಪ ವಿಭಾಗ ತೆರೆಯಲು ಯೋಜನೆ ರೂಪಿಸಲಾಗಿದ್ದು, ಕುವೆಂಪುನಗರದಲ್ಲಿ ಡೇ ಕ್ಯಾನ್ಸರ್ ಸೆಂಟರ್ ಮುಂದಿನ ದಿನಗಳಲ್ಲಿ ಪ್ರಾರಂಭವಾಗಲಿದೆ. ಇಲ್ಲಿ ಕ್ಯಾನ್ಸರ್ ಕುರಿತು ಆಪ್ತ ಸಮಾಲೋಚನೆ, ಕಿಮೋ ಥೆರಪಿ ಇತ್ಯಾದಿ ಚಿಕಿತ್ಸೆಗಳು
ದೊರೆಯಲಿವೆ.

Tags:
error: Content is protected !!