Mysore
21
broken clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಸ್ನೇಹಮಯಿ ಕೃಷ್ಣ ವಿರುದ್ಧ ವಂಚನೆ ಪ್ರಕರಣ ದಾಖಲು

ಚಾಮರಾಜನಗರ: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ದಾಖಲಿಸಿರುವ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಂಚನೆ ಪ್ರಕರಣವೊಂದು ದಾಖಲಾಗಿದೆ.

ಈ ಸಂಬಂಧ ಶುಕ್ರವಾರ ಸ್ನೇಹಮಯಿ ಕೃಷ್ಣ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನಗರದ ಕರುಣಾಕರ್ ಎಂಬವರು ಸ್ನೇಹಮಯಿ ಕೃಷ್ಣ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ನನ್ನಿಂದ ಸ್ನೇಹಮಯಿ ಕೃಷ್ಣ ೨೦೧೮ರಲ್ಲಿ ೧ ಲಕ್ಷ ರೂ. , ೨೦೧೯ರಲ್ಲಿ ೧ ಲಕ್ಷ ರೂ. , ೨೦೨೦ರಲ್ಲಿ ೧ ಲಕ್ಷ ರೂ. ಸಾಲ ಪಡೆದಿದ್ದರು, ಇದಕ್ಕಾಗಿ ಪ್ರಾಮಿಸರಿ ನೋಟ್ ಬರೆದುಕೊಟ್ಟಿದ್ದರು. ಆದರೆ ಹಣ ವಾಪಸ್ ನೀಡದೆ ವಂಚಿಸಿದ್ದಾರೆ. ಹಾಗಾಗಿ ದೂರು ದಾಖಲಿಸಿದ್ದೇನೆ ಎಂದು ಕರುಣಾಕರ್ ತಿಳಿಸಿದ್ದಾರೆ.

ಇದೇ ವೇಳೆ ಸ್ನೇಹಮಯಿ ಕೃಷ್ಣ ವಿರುದ್ಧ ಆರೋಪ ಮಾಡಿದ ಕರುಣಾಕರ್ ಅವರು, ಹಣ ನೀಡಿ ಅಂತ ಸಾಲದ ರೂಪದಲ್ಲಿ ಸ್ನೇಹಮಯಿ ಕೃಷ್ಣ ಕೇಳುತ್ತಾರೆ. ಕೆಲ ದಿನಗಳ ಬಳಿಕ ಬಡ್ಡಿ ಸಮೇತ ಹಣ ವಾಪಸ್ಸು ಕೊಟ್ಟು ನಂಬಿಕೆ ಗಳಿಸುತ್ತಾರೆ. ನಂತರ ಮತ್ತೆ ದುಡ್ಡು ಪಡೆಯುತ್ತಾರೆ.

ಇದೇ ರೀತಿ ನನ್ನ ಬಳಿ ಮೂರು ಲಕ್ಷ ರೂ. ಪಡೆದಿದ್ದಾರೆ. ಆದರೆ ದುಡ್ಡು ಕೊಡದೆ ರಿವರ್ಸ್ ಆಗಿದ್ದಾರೆ ಎಂದು ಆರೋಪಿಸಿದರು. ಕೃಷ್ಣ ಅವರು ಎಲ್ಲ ಹಣವನ್ನೂ ನಗದು ಮೂಲಕವೇ ಪಡೆದಿದ್ದಾರೆ. ಲೈಸೆನ್ಸ್ ಇಲ್ಲದೆ ಫೈನಾನ್ಸ್ ಮಾಡುತ್ತಿದ್ದಾರೆಂದು ನಮ್ಮ ವಿರುದ್ಧವೇ ದೂರು ನೀಡುತ್ತಾರೆ. ೨೦೧೩ರಲ್ಲಿ ನನ್ನ ವಿರುದ್ಧ ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಆ ವೇಳೆ ನನ್ನನ್ನು ಬಿಡಿಸಿದ್ದರು. ನಂತರ ನಮ್ಮಿಬ್ಬರ ನಡುವೆ ಸ್ನೇಹ ಬೆಳೆಯಿತು. ಬಳಿಕ ಮೂರು ಲಕ್ಷ ರೂ. ಸಾಲ ಪಡೆದು ೩ ಪ್ರೊನೋಟ್ ಕೊಟ್ಟಿದ್ದಾರೆ ಎಂದು ಕರುಣಾಕರ ತಿಳಿಸಿದರು.

ಆದರೆ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿರುವ ಸ್ನೇಹಮಯಿ ಕೃಷ್ಣ, ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಾನು ಅವರ ಬಳಿ ೫೦ ಸಾವಿರ ರೂ. ಸಾಲ ಪಡೆದಿದ್ದು ನಿಜ. ೩ ಲಕ್ಷ ರೂ. ಸಾಲ ಕೊಡಿಸುವುದಾಗಿ ಕರುಣಾಕರ್ ಪ್ರಾಮಿಸರಿ ನೋಟ್ ಬರೆಸಿಕೊಂಡಿದ್ದರು. ಪ್ರತಿ ತಿಂಗಳು ರೂ. ೫೦ ಸಾವಿರಕ್ಕೆ ಬಡ್ಡಿ ಕೊಡುತ್ತಾ ಬಂದಿದ್ದೇನೆ ಎಂದರು. ಈಗ ನ್ಯಾಯಾಧಿಶರು ವಿಚಾರಣೆ ವೇಳೆ ೫೦ ಸಾವಿರ ರೂ. ಗೆ ಹೆಚ್ಚುವರಿ ಎಷ್ಟು ಹಣ ನೀಡುತ್ತೀರಿ ಎಂದು ಕೇಳಿದರು. ೨೫ ಸಾವಿರ ರೂ. ಸೇರಿಸಿ ೭೫ ಸಾವಿರ ರೂ. ಕೊಡಲು ಒಪ್ಪಿದ್ದೇನೆ. ಜೊತೆಗೆ ಕರುಣಾಕರ ಅವರು ೩ ಲಕ್ಷ ರೂ. ಎಲ್ಲಿಂದ ಕೊಟ್ಟರು ಎಂದು ಪ್ರಶ್ನಿಸಿದ್ದೇನೆ ಶೀಘ್ರದಲ್ಲೇ ನಿಜಾಂಶ ಗೊತ್ತಾಗಲಿದೆ ಎಂದರು. ನನ್ನ ವಿರುದ್ಧ ಮೊದಲಿನಿಂದಲೂ ಸಂಚು ನಡೆಯುತ್ತಿದ್ದು, ನನ್ನ ನೈತಿಕ ಶಕ್ತಿ ಕುಗ್ಗಿಸುವ ಯತ್ನ ನಡೆಯುತ್ತಿದೆ. ನನ್ನ ವಿರುದ್ಧ ೨೨ ಪ್ರಕರಣಗಳು ದಾಖಲಾಗಿದ್ದು, ೯ ಪ್ರಕರಣಗಳು ಬೋಗಸ್ ಆಗಿವೆ. ೮ ಪ್ರಕರಣಗಳಲ್ಲಿ ನಾನು ನಿರಪರಾಽ ಅಂತ ಸಾಬೀತಾಗಿದೆ. ೩ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದು ಅವರು ವಿವರಿಸಿದರು.

 

Tags: