ಶೇ. ೫೦ ರಿಯಾಯಿತಿ ನೀಡಿದ್ದ ರೂ ಕಟಿಲ್ಲ ದಂಡ
ಎಚ್. ಎಸ್. ದಿನೇಶ್‌ಕುಮಾರ್
ಮೈಸೂರು: ಸಂಚಾರ ನಿಯಮ ಉಲ್ಲಂಘನೆಯ ಸಂಬಂಧ ವಾಹನ ಸವಾರರ ವಿರುದ್ಧ ಮೈಸೂರು ನಗರ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ದಾಖಲಾಗಿರುವ ಪ್ರಕರಣಗಳು ೪೫,೬೨ ಲಕ್ಷ. ಪೊಲೀಸ್ ಇಲಾಖೆಗೆ ಬರಬೇಕಾಗಿರುವ ದಂಡದ ಮೊತ್ತ ಬರೋಬ್ಬರಿ ೨,೩೧,೮೬ ಕೋಟಿ ರೂ!
ಸಂಚಾರ ನಿಯಮಗಳನ್ನು ಉಲ್ಲಂಘಿಸಬೇಡಿ ಎಂದು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ಸಂಘ, ಸಂಸ್ಥೆಗಳು ಸಾಕಷ್ಟು ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳ ಜೊತೆಗೆ ದಂಡದ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ನ್ಯಾಯಾಲಯದಲ್ಲಿ ನಡೆಯುವ ಲೋಕ ಅದಾಲತ್ ಸೂಚನೆಯಂತೆ ದಂಡದ ಹಣದಲ್ಲಿ ಶೇ. ೫೦ ರಷ್ಟು ರಿಯಾಯಿತಿ ನೀಡುವ ಮೂಲಕ ಕೋಟ್ಯಂತರ ರೂ. ವಸೂಲು ಮಾಡಲಾಗಿದೆ. ಆದರೂ ಕೂಡ ೪೫,೬೨,೬೩೫ ಪ್ರಕರಣಗಳು ಇತ್ಯರ್ಥವಾಗಿಲ್ಲ. ಇದರ
ಜೊತೆಗೆ ದಂಡದ ರೂಪದಲ್ಲಿ ಪೊಲೀಸ್ ಇಲಾಖೆಗೆ ಬರಬೇಕಾಗಿರುವ ಮೊತ್ತ ಬರೋಬ್ಬರಿ ೨೩೧,೮೬,೬೩,೨೦೦ ರೂ. ಆಗಿದೆ.
ತಪಾಸಣೆಯಿಂದ ಪ್ರಯೋಜನವಿಲ್ಲವೆ?
ಸಂಚಾರ ಪೊಲೀಸರು ಪ್ರತಿದಿನ ಆಯಕಟ್ಟಿನ ಜಾಗಗಳಲ್ಲಿ ವಾಹನ ತಪಾಸಣೆ ಕೈಗೊಳ್ಳುತ್ತಾರೆ. ಆದರೆ, ದಂಡ ವಸೂಲಾತಿಯಲ್ಲಿ ನಿರೀಕ್ಷಿತ ಪ್ರಗತಿ ಆಗುತ್ತಿಲ್ಲ. ಜೊತೆಗೆ ನಿಯಮ ಉಲ್ಲಂಘಿಸುವವರನ್ನು ಬಿಟ್ಟು ಕಳುಹಿಸುವಂತೆ ಗಣ್ಯರಿಂದ ಪೊಲೀಸರಿಗೆ ಶಿಪಾರಸ್ಸಿನ ಕಾಟ ಬೇರೆ.
ಮನೆಗೆ ತೆರಳಿ ದಂಡ ವಸೂಲಿ: ಇದೀಗ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಂಡ ಬಾಕಿ ಉಳಿಸಿಕೊಂಡಿರುವವರನ್ನು ಗುರಿಯಾಗಿರಿಸಿಕೊಂಡು ಕಾರ್ಯಾಚರಣೆ ಆರಂಭಿಸಲು ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ. ದಂಡ ವಸೂಲಿಗೆ ಸಂಬಂಽಸಿದಂತೆ ವಾಹನ ಸವಾರರ ಮನೆಗಳಿಗೆ ತೆರಳಿ ದಂಡದ ಹಣವನ್ನು ವಸೂಲು ಮಾಡಲು ಹಿರಿಯ ಅಽಕಾರಿಗಳು ಸೂಚನೆ ನೀಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ದಂಡ ವಸೂಲಿಗೆ ಪೊಲೀಸರು ನಿಮ್ಮ ಮನೆ ಬಾಗಿಲಿಗೆ ಬರುವ ಸಂಭವವಿದೆ.
ನೋಟಿಸ್ ಮುದ್ರಣ ನಿಧಾನಗತಿ
ನಗರದಲ್ಲೀಗ ಸಾಕಷ್ಟು ಭಾಗದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದಿನವೊಂದಕ್ಕೆ ಸಾವಿರಾರು ವಾಹನಗಳು ಸಂಚಾರ ನಿಯಮ ಉಲ್ಲಂಘಿಸುತ್ತಿರುವುದು ಸಿಸಿ ಕ್ಯಾಮೆರಾಗಳಲ್ಲಿ ದಾಖಲಾಗುತ್ತಿದೆ. ಆದರೆ, ಅಷ್ಟೂ ವಾಹನ ಸವಾರರಿಗೆ ನೋಟಿಸ್ ನೀಡಲು ಪೊಲೀಸ್ ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ. ಕಾರಣ ಸಿಬ್ಬಂದಿ ಕೊರತೆ ಹಾಗೂ ನೋಟಿಸ್ ಪ್ರತಿಗಳ ಸರಬರಾಜಿನಲ್ಲಿ ಆಗುತ್ತಿರುವ ವ್ಯತ್ಯಯ. ಹೀಗಾಗಿ ದಂಡದ ಹಣ ವಸೂಲಾತಿ ಕಷ್ಟಕರವಾಗುತ್ತಿದೆ ಎಂದು ಪೊಲೀಸರು ಹೇಳುತ್ತಾರೆ.
ವಾಹನ ತಪಾಸಣೆ ವೇಳೆ ಸಾಕಷ್ಟು ಮಂದಿ ಸವಾರರಿಂದ ಬಾಕಿ ದಂಡವನ್ನು ವಸೂಲು ಮಾಡಲಾಗುತ್ತಿದೆ. ಆದರೂ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ದಂಡದ ಬಾಕಿ ಹೆಚ್ಚಿದೆ. ಹೀಗಾಗಿ ಪೊಲೀಸ್ ಸಿಬ್ಬಂದಿಗಳು ದಂಡ ವಸೂಲಿಗೆ ಮನೆ ಬಾಗಿಲಿಗೆ ತೆರಳಲು ತಯಾರಿ ನಡೆಸಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿರುವವರು ಸಮೀಪದ ಪೊಲೀಸ್ ಠಾಣೆಗಳಿಗೆ ತೆರಳಿ ಆದಷ್ಟು ಶೀಘ್ರವಾಗಿ ದಂಡ ಪಾವತಿಸಲು ಅವಕಾಶವಿದೆ. -ಪರಶುರಾಮಪ್ಪ, ಎಸಿಪಿ ಸಂಚಾರ ವಿಭಾಗ.





