Mysore
27
overcast clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಘೋರ ದುರಂತಗಳಿಗೆ ಸಾಕ್ಷಿಯಾದ ೨೦೨೫

೨೦೨೫ನೇ ವರ್ಷಕ್ಕೆ ವಿದಾಯ ಹೇಳಿ ೨೦೨೬ರ ಹೊಸ ವರ್ಷವನ್ನು ಸ್ವಾಗತಿಸುವ ದಿನ ಸನ್ನಿಹಿತವಾಗಿದೆ. ಪ್ರತಿ ಸಲ ಹೊಸ ವರ್ಷವನ್ನು ಹರ್ಷದಿಂದ ಸ್ವಾಗತಿಸುವ ಜನರು, ಶಾಂತಿ, ನೆಮ್ಮದಿ ಸಿಗಲಿ ಎಂದೇ ಆಶಿಸುತ್ತಾರೆ. ಆದರೆ, ಅವಘಡಗಳು, ದುರಂತಗಳನ್ನು ತಪ್ಪಿಸುವುದು ಸಾಧ್ಯವಿಲ್ಲ. ಈ ವರ್ಷ ದೇಶ, ವಿದೇಶಗಳಲ್ಲಿ ಹಲವು ರೀತಿಯ ಅಹಿತಕರ ಘಟನೆಗಳು ನಡೆದಿವೆ. ೨೦೨೫ ಹರ್ಷ-ನೋವು ಎರಡನ್ನೂ ನೀಡಿ ಬೀಳ್ಕೊಡುಗೆಗೆ ಅಣಿಯಾಗಿದೆ. ಈ ಸಾಲಿನ ಪ್ರಮುಖ ದುರಂತ ಘಟನೆಗಳ ಪಕ್ಷಿನೋಟ ಇಲ್ಲಿದೆ.

ಜನವರಿ.01;  ಜಗತ್ತಿನ ಸಿಲಿಕಾನ್ ಕಣಿವೆ ಅಮೆರಿಕದ ಕ್ಯಾಲಿಫೋರ್ನಿ ಯಾದ ದಕ್ಷಿಣ ಭಾಗ ಹೊತ್ತಿ ಉರಿದು, ೨೩ ಕಡೆಗಳಲ್ಲಿ ಹರಡಿದ ಕಾಡ್ಗಿಚ್ಚುಗಳು ಜಗತ್ತಿನ ಹೈಫೈ ನಗರಿ ಎಂದೇ ಹೆಸರಾಗಿರುವ ಲಾಸ್ ಏಂಜಲೀಸ್ ನಗರವನ್ನೂ ವ್ಯಾಪಿಸಿ ಸಾವಿರಾರು ಕಟ್ಟಡಗಳನ್ನು ಆಹುತಿ ತೆಗೆದುಕೊಂಡು ಲಕ್ಷಾಂತರ ಜನರನ್ನು ನಿರ್ಗತಿಕರನ್ನಾಗಿಸಿದೆ.

ಜನವರಿ.29:  ಉತ್ತರ ಪ್ರದೇಶ ಪ್ರಯಾಗ್ ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದ ಸಂದರ್ಭದಲ್ಲಿ ಸಂಗಮದಲ್ಲಿ ಉಂಟಾದ ಕಾಲ್ತುಳಿತದಿಂದ ೨೦ಕ್ಕೂ ಹೆಚ್ಚು ಜನರು ಸಾವಿಗೀಡಾದ ದುರಂತ ಸಂಭವಿಸಿತು. ಘಟನೆಯಲ್ಲಿ ನೂರಾರು ಮಂದಿ ಗಂಭೀರ ಗಾಯಗೊಂಡರು. ಮೌನಿ ಅಮಾವಾಸ್ಯೆಯಂದು ಪವಿತ್ರ ಸ್ನಾನಕ್ಕಾಗಿ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಸೇರಿದ್ದಾಗ ಈ ಘಟನೆ ಸಂಭವಿಸಿತು.

ಫೆಬ್ರವರಿ.24: ಕರ್ನಾಟಕದ ಬೆಳಗಾವಿ ಜಿಲ್ಲೆಯ ಆರು ಯಾತ್ರಿಕರು ಮಧ್ಯಪ್ರದೇಶದಲ್ಲಿ ಮಹಾ ಕುಂಭಮೇಳಕ್ಕೆ ಹೋಗುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟರು.

ಮಾರ್ಚ್.‌28:  ಭೀಕರ ಭೂಕಂಪನದಿಂದಾಗಿ ಮ್ಯಾನ್ಮಾರ್ ತತ್ತರಿಸಿಬಿಟ್ಟಿತು. ಥೈಲ್ಯಾಂಡ್ ಮತ್ತು ನೈಋತ್ಯ ಚೀನಾ ಸೇರಿದಂತೆ ಇತರೆಡೆಗಳಲ್ಲಿ ೭.೭ ತೀವ್ರತೆಯ ಕಂಪನದ ಅನುಭವವಾಗಿ ೩ ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾದರೆ, ಸಾವಿರಾರು ಜನರು ಗಾಯಗೊಂಡರು.

ಏಪ್ರಿಲ್.‌22:  ಜಮ್ಮು-ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿನಲ್ಲಿ ೨೬ ಜನ ಪ್ರವಾಸಿ ಗರು ಮೃತರಾದರು. ಪ್ರವಾ ಸಿಗರಿಂದ ತುಂಬಿರುವ ಬೈಸರನ್ ಕಣಿವೆಯನ್ನು ಗುರಿ ಯಾಗಿಸಿಕೊಂಡ ಭಯೋತ್ಪಾದಕರು ಕೇವಲ ಪುರುಷರನ್ನಷ್ಟೇ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು

ಜೂನ್.‌04: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಹನ್ನೊಂದು ಮಂದಿ ಸಾವಿಗೀಡಾಗಿ, ೪೭ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆಗೆ ಲಕ್ಷಾಂತರ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜಮಾಯಿಸಿದ್ದರು. ಆದರೆ, ಈ ಸಂಭ್ರಮ ದುರಂತವಾಗಿ ಮಾರ್ಪಟ್ಟಿತ್ತು.

ಜೂನ್.‌12:  ಅಹಮದಾಬಾದ್‌ನ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೇವಲ ೩೨ ಸೆಕೆಂಡುಗಳಲ್ಲಿ ಭೀಕರವಾಗಿ ಪತನಗೊಂಡು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ದುರಂತದಲ್ಲಿ ವಿಮಾನದಲ್ಲಿದ್ದ ೨೪೨ ಪ್ರಯಾಣಿಕರ ಪೈಕಿ ೨೪೧ ಮಂದಿ ಹಾಗೂ ಕೆಲ ಸ್ಥಳೀಯರು ಮೃತಪಟ್ಟಿದ್ದರು. ದುರಂತದಲ್ಲಿ ಏಕೈಕ ಪ್ರಯಾಣಿಕ ಬದುಕುಳಿದು ಅಚ್ಚರಿ ಮೂಡಿಸಿದ್ದ. ಭಾರತದ ವಿಮಾನಯಾನ ಇತಿಹಾಸದಲ್ಲೇ ಇದು ಅತಿ ಘೋರ ದುರಂತ ಎಂದು ಹೇಳಲಾಗಿದೆ.

ಆಗಸ್ಟ್.‌05:  ಉತ್ತರಾಖಂಡದ ಉತ್ತರ ಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಉಂಟಾದ ಭಾರೀ ಮೇಘಸೋಟ ಭಾರೀ ವಿನಾಶವನ್ನು ಉಂಟು ಮಾಡಿತು. ಖೀರ್ ಗಡ್ ಪ್ರದೇಶದಲ್ಲಿ ಉಂಟಾದ ಮೇಘಸ್ಪೋಟ ದಿಂದಾಗಿ ನೀರು ಮತ್ತು ಶಿಲಾಖಂಡ ರಾಶಿಗಳ ಭಾರೀ ಅಲೆಗಳು ಉಂಟಾಗಿ, ಧರಾಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳು ಮುಳುಗಿಹೋದವು. ಇದರ ಪರಿಣಾಮ ಹಲವಾರು ಮನೆಗಳು, ಹೋಟೆಲ್‌ಗಳು ಮತ್ತು ತಿನಿಸುಗಳು ಹಾನಿಗೊಳಗಾದವು.

ಸೆಪ್ಟೆಂಬರ್.‌27:  ತಮಿಳುನಾಡಿನಲ್ಲಿ ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ದಳಪತಿ ಅವರ ರ‍್ಯಾಲಿಯಲ್ಲಿ ಕಾಲ್ತುಳಿತ ಸಮಭವಿಸಿ ೩೧ ಮಂದಿ ಮೃತಪಟ್ಟು, ಹಲವರು ಪ್ರಜ್ಞೆ ತಪ್ಪಿದ ಘಟನೆ ನಡೆದಿತ್ತು. ಈ ರ‍್ಯಾಲಿಯ ವೇಳೆ ವಿಜಯ ಭಾಷಣವನ್ನು ಕೇಳಲು ರಸ್ತೆಯ ಉದ್ದಗಲಕ್ಕೂ ಹತ್ತಾರು ಸಾವಿರ ಜನರು ಸೇರಿದ್ದರು. ಇದರಿಂದ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.

ಅಕ್ಟೋಬರ್.‌24:  ಹೈದರಾಬಾದ್‌ನಿಂದ ಬೆಂಗಳೂರಿಗೆ ೪೩ ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ಖಾಸಗಿ ಬಸ್ ಬೆಳಗಿನ ಜಾವ ಕರ್ನೂಲ್ ಜಿಲ್ಲೆಯ ಚಿನ್ನ ಟೆಕೂರು ಗ್ರಾಮದ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿ ಉರಿದು ೨೧ ಪ್ರಯಾಣಿಕರು ಸಜೀವ ದಹನವಾಗಿದ್ದು, ಹಲವರು ಗಂಭೀರ ಗಾಯಗೊಂಡಿದ್ದರು. ಬಸ್‌ನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಬಸ್‌ಗೆ ವೇಗವಾಗಿ ಹರಡಿದೆ. ಹಲವರು ಒಳಗೆ ಸಿಲುಕಿ ಸಾವಿಗೀಡಾದರೆ, ೧೨ ಮಂದಿ ಪ್ರಯಾಣಿಕರು ಕಿಟಕಿಗಳನ್ನು ಒಡೆದು ಹೊರ ಜಿಗಿದು ಜೀವ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ನವೆಂಬರ್‌.೧೦: ಹೊಸದಿಲ್ಲಿಯ ಕೆಂಪುಕೋಟೆ ಬಳಿ ಸಂಜೆ ೬.೫೨ರ ಸುಮಾರಿಗೆ ಐ೨೦ಕಾರು ಸೋಟಗೊಂಡು ಅದರ ಹಿಂದೆ ಇದ್ದ ವಾಹನಗಳು ಹಾಗೂ ಪಕ್ಕದ ಅಂಗಡಿಗಳು ಬೆಂಕಿ ಹರಡಿ ಸಂಭವಿಸಿದ ಭೀಕರ ಸೋಟದಲ್ಲಿ ಹತ್ತು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಆರಂಭದಲ್ಲಿ ಇದು ಕಾರಿನಲ್ಲಿದ್ದ ಸಿಎನ್‌ಐ ಸಿಲಿಂಡರ್ ಸೋಟ ಎಂದು ಭಾವಿಸಲಾಗಿತ್ತಾದರೂ, ತನಿಖೆ ವೇಳೆ ಉಗ್ರರ ಕೃತ್ಯ ಬಯಲಾಗಿತ್ತು.

ಡಿಸೆಂಬರ್.‌24:  ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನ ಗೊಂಡನಹಳ್ಳಿ ಬಳಿ ಡಿಸೆಂಬರ್ ೨೪ರಂದು ತಡರಾತ್ರಿ ಕ್ಯಾಂಟರ್ ಮತ್ತು ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸೀಬರ್ಡ್ ಸ್ಲೀಪರ್ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ, ಬಸ್ ಹೊತ್ತಿ ಉರಿದು ಐವರು ಸಜೀವ ದಹನವಾದರು. ಕ್ಯಾಂಟರ್ ಚಾಲಕ ಕೂಡ ಅಸುನೀಗಿದರು. ಮಾರನೆ ದಿನ ಮತ್ತೊಬ್ಬ ಪ್ರಯಾಣಿಕ, ಬಸ್ ಚಾಲಕ ಕೂಡ ಸಾವಿಗೀಡಾದರು.

ಡಿಸೆಂಬರ್.‌25:  ಮೈಸೂರು ಅರಮನೆಯ ದ್ವಾರದ ಬಳಿ ಡಿಸೆಂಬರ್ ೨೫ರ ರಾತ್ರಿ ಬಲೂನ್‌ಗಳಿಗೆ ಗಾಳಿ ತುಂಬುವ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಛೋಟಗೊಂಡು, ಬಲೂನ್ ಮಾರಾಟಗಾರರೊಬ್ಬರು ಮೃತಪಟ್ಟರೆ, ನಾಲ್ವರು ಗಾಯ ಗೊಂಡಿದ್ದರು. ಗಾಯಗೊಂಡಿದ್ದ ನಂಜನಗೂಡಿನ ಮಂಜುಳಾ, ಬೆಂಗಳೂರಿನ ಲಕ್ಷ್ಮಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

Tags:
error: Content is protected !!