Mysore
29
scattered clouds

Social Media

ಸೋಮವಾರ, 16 ಮಾರ್ಚ್ 2026
Light
Dark

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 1,425 ಹುದ್ದೆಗಳು

ಭಾರತದ ೩ನೇ ಅತಿ ದೊಡ್ಡ ಗ್ರಾಮೀಣ ಬ್ಯಾಂಕ್ ಆದ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಖಾಲಿ ಇರುವ ೧,೪೨೫ ಹುದ್ದೆಗಳಿಗೆ ಅರ್ಹ ಪದವೀಧರರಿಂದ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಆಫೀಸ್ ಅಸಿಸ್ಟೆಂಟ್ (ಕ್ಲರ್ಕ್) ೮೦೦, ಸಹಾಯಕ ವ್ಯವಸ್ಥಾಪಕ (ಆಫೀಸರ್ ಸ್ಕೇಲ್-೧) ೫೦೦, ವ್ಯವಸ್ಥಾಪಕ (ಆಫೀಸರ್ ಸ್ಕೇಲ್-೨) ೧೨೫ ಹುದ್ದೆಗಳು ಸೇರಿದಂತೆ ಒಟ್ಟಾರೆ ೧,೪೨೫ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಸೆ.೨೧ ಕೊನೆಯ ದಿನಾಂಕ. ನೇಮಕಾತಿ ಪ್ರಕ್ರಿಯೆ ಹಾಗೂ ಹುದ್ದೆಯ ಹೆಚ್ಚಿನ ಮಾಹಿತಿಯನ್ನು ಪಡೆಯಲು  http://www.ibps.in  ಜಾಲತಾಣವನ್ನು ಸಂದರ್ಶಿಸಿ. ಉದ್ಯೋಗಕ್ಕಾಗಿ ಅರ್ಜಿಗಳನ್ನು ಬ್ಯಾಂಕ್ ಎಂದಿಗೂ ನೇರವಾಗಿ ಕರೆಯುವುದಿಲ್ಲ.

ಇದನ್ನು ಓದಿ : GATE  ಪರೀಕ್ಷೆ ಏನು-ಎತ್ತ ?

ಬ್ಯಾಂಕ್‌ನಲ್ಲಿನ ಎಲ್ಲಾ ನೇಮಕಾತಿಗಳನ್ನು IBPS  ಮೂಲಕ ಮಾತ್ರ ಮಾಡಲಾಗುತ್ತದೆ.

ಬ್ಯಾಂಕ್ ನಲ್ಲಿ ಉದ್ಯೋಗದ ಸುಳ್ಳು ಜಾಹೀರಾತುಗಳಿಗೆ ಬಲಿಯಾಗದಂತೆ ಉದ್ಯೋಗಾಕಾಂಕ್ಷಿಗಳಿಗೆ ಬ್ಯಾಂಕ್ ಎಚ್ಚರಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್  http://www.ibps. in ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿದೆ.

Tags:
error: Content is protected !!