ಬಸವರಾಜು ಜಿ. ದೇವೀರಮ್ಮನಹಳ್ಳಿ
ನಾನು ಕಳೆದ ೨೦ ವರ್ಷಗಳಿಂದ ‘ಆಂ ದೋಲನ’ ದ ಓ ದುಗ. ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಶೋಷಿತ ಸಮುದಾಯಗಳ ಕುರಿತು ಪತ್ರಿಕೆಯು ತೆಗೆ ದುಕೊಂಡ ನಿಲುವು ಹಾಗೂ ತಾಳಿ ದ ಧೋರಣೆಯ ಬಗ್ಗೆ ನನಗೆ ಸದಾ ಹೆಮ್ಮೆಯಿದೆ. ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರನ್ನು ಐದಾರು ಬಾರಿ ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಒಮ್ಮೆ ವಿದೇಶದಿಂದ ತಮ್ಮ ಪ್ರಿಂಟಿಂಗ್ ಪ್ರೆಸ್‌ಗೆ ಮಷಿನ್‌ವೊಂದನ್ನು ತಂದಿದ್ದ ಸಂದರ್ಭವದು. ಪ್ರಿಂಟಿಂಗ್ ಮಷಿನ್ ಅನ್ನು ಸುರಕ್ಷಿತವಾಗಿ ತರಲು ಅದರ ಮೇಲೊದಿಕೆಯಾಗಿ ಮರದ ಶೀಟ್ ಗಳನ್ನು ಹಾಕಿ ಮು ದ್ರಣ ಘಟಕಕ್ಕೆ ತರಲಾಗಿತ್ತು. ಈ ಮರದ ಶೀಟ್‌ಗಳ ಬೆಲೆಯೇ ಅಂ ದು ಲಕ್ಷಾಂತರ ರೂಪಾಯಿ ಮೌಲ್ಯ ದಾಗಿತ್ತು. ಈ ಶೀಟ್ ಅನ್ನು ಕೊಂಡುಕೊಳ್ಳುವ ಸಲುವಾಗಿ ಅವರ ಬಳಿಗೆ ನಾನು ಹಾಗೂ ನನ್ನ ಸ್ನೇಹಿತ ಇಬ್ಬರೂ ಹೋಗಿದ್ದೆವು. ಈ ವೇಳೆ ಸಮುದಾಯದ ಹಿರಿಯ ನಾಯಕ ವಿ.ಶ್ರೀನಿವಾಸ್ ಪ್ರಸಾದ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಲ್ಲದೇ ನಾನು ‘ಆಂ ದೋಲನ’ ಓದುಗ ಅಂತ ಪರಿಚಯಿಸಿಕೊಂಡೆ. ಆಗ ಕೋಟಿ ಅವರು ನಾವು ಬಂದ ವಿಚಾರವನ್ನು ಕೇಳಿ ದರು. ನನ್ನ ಸ್ನೇಹಿತ ಮನೆ ಕಟ್ಟುತ್ತಿದ್ದು, ಅದಕ್ಕಾಗಿ ಮಷಿನ್ ಮೇಲೊದಿಕೆಯ ಮರ ದ ಶೀಟ್‌ಗಳನ್ನು ನಮಗೆ ನೀಡಿದರೆ ಅನುಕೂಲವಾಗುತ್ತ ದೆ ಎಂದು ನಾನು ವಿನಂತಿಸಿಕೊಂಡೆ.
ಮರು ಮಾತನಾಡದೆ, ಅವರು ಸುಮಾರು ಹತ್ತು ಲಕ್ಷ ರೂಪಾಯಿಗಳ ಬೆಲೆ ಬಾಳುತ್ತಿದ್ದ ಶೀಟ್‌ಗಳನ್ನು ಕೇವಲ ಎರಡು ಲಕ್ಷ
ರೂಪಾಯಿಗಳಿಗೆ ನೀಡಿ ನಮ್ಮನ್ನು ಹರಸಿದರು. ಶೋಷಿತ ಸಮು ದಾಯಗಳ ಜನರು ನಗರ ಪ್ರದೇಶಗಳಲ್ಲಿ ಮನೆ ಕಟ್ಟಿಕೊಳ್ಳುವು ದು ಕನಸಿನ ಮಾತು. ಇಂತಹ ಸಂ ದರ್ಭ ದಲ್ಲಿ ಶೋಷಿತ ವರ್ಗ ದ ವ್ಯಕ್ತಿಯೊಬಟರು ಮನೆ ಕಟ್ಟಲು ಮುಂದಾಗಿರುವು ದನ್ನು ನೋಡಿ ಮರದ ಶೀಟ್‌ಗಳನ್ನು ಹಿಂದೆ-ಮುಂದೆ ಯೋಚಿಸದೇ ನಮಗೆ ಕೊಟ್ಟರು. ಈ ಘಟನೆಯು ಶೋಷಿತ ಸಮು ದಾಯಗಳ ಕುರಿತು ರಾಜಶೇಖರ ಕೋಟಿ ಅವರಲ್ಲಿದ ತುಡಿತ ಹಾಗೂ ಮಾನವೀಯ ಅಂತಃಕರಣ ಎಂತಹದು ಎಂಬುದು ಮನವರಿಕೆಯಾಗುತ್ತದೆ. ಪತ್ರಿಕೆಯ ಮುಖಪುಟದಲ್ಲಿ ದೀನ ದಲಿತರ ಸುದಿಗೆ ಜಾಗ ಕೊಟ್ಟಿದ್ದ, ಮನಸ್ಸಿನ ಅಂತರಾಳ ದಲ್ಲಿ ಶೋಷಿತರ ಏಳ್ಗೆ ಬಯಸಿದ್ದ ಕೋಟಿಯವರ ಬದುಕಿನ ನಡೆ ಸರ್ವಕಾಲಕ್ಕೂ ಅನುಕರಣೀಯ. ಅವರ ಆಶಯದ ನೆರಳಿನಲ್ಲಿ ಪತ್ರಿಕೆ ಮುನ್ನಡೆಯಲಿ.